May 2, 2026
IMG-20260502-WA0110.jpg

ಚಿತ್ರದುರ್ಗ : ಬುದ್ದನ ತತ್ವಗಳು ವೈಜ್ಞಾನಿಕ ತಳಹದಿಯ ಮೇಲೆಯೆ ಕ್ರಿಸ್ತ ಪೂರ್ವದಲ್ಲಿಯೆ ಸಾಬೀತು ಬುದ್ದ ನಮ್ಮೆಲರಿಗೂ ದಾರಿ ದೀಪವಾಗಿದ್ದಾರೆ ಅವರೂಬ್ಬ ಶ್ರೇಷ್ಠ ಮಾರ್ಗದರ್ಶಕರಾಗಿ, ರಾಜಕಾರಣಿಯಾಗಿ , ತತ್ವಜ್ಞಾನಿ ಯಾಗಿ, ಪ್ರವರ್ತಕರಾಗಿ ನಮ್ಮ ಪ್ರತಿ ನಿತ್ಯದ ಜೀವನದಲ್ಲಿ ಬೆರೆತುಹೋಗಿದ್ದಾರೆ ಅಂತಹ ಶ್ರೇಷ್ಠ ಜ್ಞಾನಿ ಭಗವಾನ್ ಬುದ್ದರನ್ನು ಪ್ರತಿ ಮನೆ ಮನೆಗೆ ತಲುಪಿಸಬೇಕಾದ ಅನಿವಾರ್ಯತೆ ಇದೆ ಪ್ರಾದ್ಯಾಪಕ ಡಾ..ಸಂಜೀವ ಕುಮಾರ ಪೋತೆಯವರು ಹೇಳಿದರು ಅವರು ಬುದ್ದ ಪೂರ್ಣಿಮೆಯ ಪ್ರಯುಕ್ತ ಉಪಸಾಕ ಉಪನ್ಯಾಸ ರಾಮಣ್ಣನವರ ಮನೆಯಲ್ಲಿ ಜರುಗಿದ ಕಾರ್ಯಕ್ರಮಲ್ಲಿ ಮಾತನಾಡಿದರು ಜೊತೆಗೆ ಜಗತ್ತಿಗೆ ಬುದ್ಧನ ಚಿಂತನೆಗಳ ಮಹತ್ವ ತಿಳಿಯಬೇಕು. ಅದರಲ್ಲೂ ದೇಶಗಳನ್ನು ಆಳುವ ಅಧಿಕಾರಿ ವರ್ಗ ಮತ್ತು ರಾಜಕಾರಣಿಗಳು ಬುದ್ಧನ ತತ್ವಗಳು ಅರಿತರೆ ಯುದ್ಧದಂತ ಅಪಾಯಗಳು ತಪ್ಪುತ್ತವೆ. ಬುದ್ಧ ಆಶಿಸಿದಂತೆ ಮನುಷ್ಯನ ದುಃಖ ವಿಮೋಚನೆಗೆ ಕಾರಣವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಉಪಸಾಕ ವಕೀಲ‌ ವಿಶ್ವಾನಂದ ವದ್ದೀಕೆರೆಯವರು ಮಾತನಾಡುತ್ತಾ ಬುದ್ಧನ ಜೀವನದಲ್ಲಾದ ಘಟನೆಯೊಂದು ನೆನಪಿಸುತ್ತಾ ಕೊಲ್ಲುವವನಿಗಿಂತ ರಕ್ಷಿಸುವವನಿಗೆ ಹೆಚ್ಚು ಪ್ರಾಮುಖ್ಯತೆ ಇರುವುದನ್ನು ಸಂವಿಧಾನದಲ್ಲಿ ಆರ್ಟಿಕಲ್ ೨೧ ರಲ್ಲಿ ಸೇರಿಸಿದ್ದು, ವ್ಯಕ್ತಿಯ ಜೀವನ‌ ಮತ್ತು ವೈಯುಕ್ತಿಕ ಜೀವನದ ರಕ್ಷಣೆದ ಮಹತ್ವ ತಿಳಿಸಿದರು. ವ್ಯವಹಾರಿಕ ನಿರ್ಬಂಧಗಳ ಕಾರಣಕ್ಕೆ ನಡೆಯುವ ಯುದ್ಧಗಳು ಬುದ್ಧ ಭಾರತದ ವಿರೋಧಿ ನೀತಿಗಳು. ಜಗತ್ತಿನ ಜೀವ ರಕ್ಷಣೆ ಮಹತ್ವದ ಕುರಿತು ಬುದ್ಧನ ತತ್ವ ಇರುವುದಾಗಿ ತಿಳಿಸಿದರು.

ಬುದ್ಧ ಹುಟ್ಟಿದ ದಿನ ಚಂದ್ರ ಹೆಚ್ಚು ಕಂಗೊಳಿಸುತ್ತಾನೆ. ಹಾಗಾಗಿ ಬುದ್ಧ ಪೂರ್ಣಿಮೆ ಎಂದು ಕರೆಯುತ್ತಾರೆ. ಬಹುಶಃ ಹುಣ್ಣಿಮೆಯೊಂದಕ್ಕೆ ದಾರ್ಶನಿಕರ ಹೆಸರು ಹೆಸರು ಬೆರೆತ್ತಿದ್ದು ಇದೆ ಮೊದಲು ಇರಬೇಕು. ಇದರ ಎಂದು ಉಪಸಾಕ ಉಪನ್ಯಾಸ ರಾಮಣ್ಣ ಹೇಳಿದರು.. ತ್ರಿಸರಣ ಬೋಧಿಸಿ, ಪಂಚಶೀಲತತ್ವ, ಬಾಬಾಸಾಹೇಬರು ಬೋಧಿಸಿದ ೨೨ ಪ್ರತಿಜ್ಞಾವಿಧಿಗಳನ್ನು ವಿಧಿಸಿ ಬುದ್ಧತ್ವದ ದುಃಖ ವಿಮೋಚನಾ ಜೀವನ ಮಹತ್ವವನ್ನು ತಿಳಿಸಿದರು.

ಉಪನ್ಯಾಸ ಹನುಮಂತಪ್ಪ ದಡಗೂರು ಮಾತನಾಡಿ ಬುದ್ಧನ ಚಿಂತನೆಗಳ ಹಾದಿಯಲ್ಲಿ ಪ್ರತಿಯೊಬ್ಬ ಮನುಷ್ಯ ಸಾಗಬೇಕು. ಬುದ್ಧನ ಅನುಸರಣೆ ಸರಳವಾಗಿದ್ದು ನಮ್ಮೊಳಗಿನ ಆಹಂ, ಭೋಗ, ಧನದಾಹ, ದ್ವೇಷ, ಅಸೂಹೆ, ಮತ್ಸರಗಳನ್ನು ನಿರ್ಮೂಲನೆ ಗೊಳಿಸುತ್ತವೆ‌. ವೈದಿಕ ಆಚರಣೆಗಳನ್ನು ಕೈಬಿಟ್ಟರೇ ಜೀವನ ಸಾರ್ಥಕವೆಂದು, ಈ ಪೂರ್ಣಿಮೆ ಹೆಚ್ಚು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಆಚರಣೆಗಳ ರೀತಿಯಲ್ಲಿ ಜಾರಿಗೆ ಬರಲಿ ಎಂದು ಹೇಳಿದರು.

ಬುದ್ಧನ ಅನುಯಾಯಿಗಳಾದ ಮುಖ್ಯಶಿಕ್ಷಕ ರಾಮಶೇಖರ್, ಉಪನ್ಯಾಸಕರಾದ ಡಾ. ವೇದಾಂತ್ ಏಳಂಜಿ ಆರ್ ಮಂಜುನಾಥ ಶಿಕ್ಷಕರಾದ ಸಿದ್ದೇಶ್, ಹನುಮಂತಪ್ಪ ಯಾದಲಗಟ್ಟೆ ಪ್ರಕಾಶ್ ಯಾದಲಗಟ್ಟೆ, ನಿವೃತ್ತ ಇಂಜಿನಿಯರ್ ಪಾತಣ್ಣ, ಆರೋಗ್ಯ ನಿರೀಕ್ಷಕರಾದ ಶ್ರೀನಿವಾಸ್ ಮುಂತಾದವರು ಹಾಜರಿದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading