May 4, 2026
IMG-20260504-WA0163.jpg

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೇಹಳ್ಳಿಯ ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ, ಶ್ರೀ ಶಿವಕುಮಾರ ಕಲಾ ಸಂಘ (ರಿ) ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಇವರ ಸಂಯುಕ್ತ ಆಶ್ರಯದಲ್ಲಿ 2026ರ ಮೇ 17ರಿಂದ ಜೂನ್ 5ರವರೆಗೆ 20 ದಿನಗಳ “ವಸತಿ ಸಹಿತ ರಂಗ ತರಬೇತಿ ಶಿಬಿರ” ಆಯೋಜಿಸಲಾಗಿದೆ.

ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಮಾರ್ಗದರ್ಶನದಲ್ಲಿ ಕಳೆದ 18 ವರ್ಷಗಳಿಂದ ರಂಗಶಿಕ್ಷಣ ನೀಡುತ್ತಿರುವ ಸಂಸ್ಥೆ, ರಂಗಭೂಮಿಯಲ್ಲಿ ಆಸಕ್ತಿ ಹೊಂದಿರುವ ಯುವಜನತೆಗೆ ವಿಶೇಷ ತರಬೇತಿ ನೀಡಲು ಈ ಶಿಬಿರವನ್ನು ಹಮ್ಮಿಕೊಂಡಿದೆ.
ಶಿಬಿರದ ಪ್ರಮುಖ ಅಂಶಗಳು
ನಟನೆ
ಸಂವಹನ ಕೌಶಲ್ಯ
ರಂಗ ವಿನ್ಯಾಸದ ಪ್ರಾಯೋಗಿಕ ಜ್ಞಾನ
ವ್ಯಕ್ತಿತ್ವ ವಿಕಸನ
ಸಾಮಾಜಿಕ ತಿಳುವಳಿಕೆ
ನುರಿತ ಅಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರಿಂದ ತರಬೇತಿ ನೀಡಲಾಗುತ್ತಿದ್ದು, ಖ್ಯಾತ ನಿರ್ದೇಶಕರಿಂದ ನಾಟಕ ಪ್ರಯೋಗವೂ ನಡೆಯಲಿದೆ. ಶಿಬಿರಾರ್ಥಿಗಳಿಗೆ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಪ್ರವೇಶಾತಿ ನಿಯಮಗಳು
ವಯೋಮಿತಿ: 18 ರಿಂದ 32 ವರ್ಷ
ವಿದ್ಯಾರ್ಹತೆ: ಕನಿಷ್ಠ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿ ತೇರ್ಗಡೆ
ರಂಗಭೂಮಿ ಅನುಭವವಿರುವ ಕಲಾವಿದರು ಹಾಗೂ ಪದವಿ/ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆದ್ಯತೆ
ಅರ್ಜಿ ಸಲ್ಲಿಕೆ
ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಪೋಸ್ಟ್ ಅಥವಾ ವಾಟ್ಸಾಪ್ ಮೂಲಕ ಕಳುಹಿಸಬಹುದು. ಅರ್ಜಿ ಸಲ್ಲಿಸಲು ಮೇ 15, 2026 ಕೊನೆಯ ದಿನಾಂಕವಾಗಿದೆ.
ವಿಳಾಸ
ಪ್ರಾಂಶುಪಾಲರು,
ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ, ಸಾಣೇಹಳ್ಳಿ,
ಹೊಸದುರ್ಗ ತಾಲೂಕು, ಚಿತ್ರದುರ್ಗ ಜಿಲ್ಲೆ – 577515.
ಸಂಪರ್ಕ ಸಂಖ್ಯೆ
9880872740
9448398144
9480282791
ಹೊಸಬರಿಗೆ ರಂಗಭೂಮಿಯ ಪ್ರವೇಶಕ್ಕೂ, ಅನುಭವವಿರುವ ಕಲಾವಿದರಿಗೆ ತಮ್ಮ ಕೌಶಲ್ಯವನ್ನು ಮತ್ತಷ್ಟು ವೃದ್ಧಿಸಿಕೊಳ್ಳಲೂ ಈ ಶಿಬಿರ ಉತ್ತಮ ಅವಕಾಶವಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ ರಾಘು ಪುರಪ್ಪೆಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading