ನಾಯಕನಹಟ್ಟಿ:: ಮಧ್ಯಮುಕ್ತ ಸಮಾಜ ನಿರ್ಮಾಣವಾದರೆ ಪ್ರತಿಯೊಬ್ಬರ ಬದುಕು ಹಸನಾಗುತ್ತದೆ ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯ ಎಂವೈಟಿ ಸ್ವಾಮಿ ಕರೆ ನೀಡಿದರು.

ಶನಿವಾರ ಪಟ್ಟಣದ ಒಳಮಠದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದಲ್ಲಿ 2066ನೇ ಮಧ್ಯವರ್ಜನ ಶಿಬಿರದ ಆಮಂತ್ರಣ ಪತ್ರಿಕೆಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು.


ಮಧ್ಯ ಕರ್ನಾಟಕದ ಆರಾಧ್ಯ ದೈವ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಆಶೀರ್ವಾದ ಪಡೆಯಲಾಗಿದೆ.
ಜೂನ್. 4. ರಿಂದ 11.ರವರೆಗೆ ಸಮೀಪದ ಏಕಾಂತೇಶ್ವರ ಮಠ ಸಮುದಾಯ ಭವನದಲ್ಲಿ
2066ನೇ ಮಧ್ಯವರ್ಜನ ಶಿಬಿರದ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಂದು ಬಿಡುಗಡೆ ಮಾಡಲಾಗಿದೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಇಂತಹ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸುತ್ತದೆ ಆದ್ದರಿಂದ ಮಧ್ಯ ವರ್ಜನ ಶಿಬಿರಕ್ಕೆ ಪ್ರತಿಯೊಬ್ಬರು ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹಾಗೂ ಪಟ್ಟಣ ಪಂಚಾಯತಿ ಸದಸ್ಯ ಸರ್ವ ಮಂಗಳ ಉಮಾಪತಿ.
ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ .ಲೋಕೇಶ್ ಚಾರಿ, ಜಿಲ್ಲಾ ಜಲ ಜಾಗೃತಿ ವೇದಿಕೆ ಸದಸ್ಯ ಎಚ್.ಸಿ .ರಾಜೇಂದ್ರ, ಶಿವಕುಮಾರ್ ಭಂಡಾರಿ, ನಾಯಕನಹಟ್ಟಿ ವಲಯ ಮೇಲ್ವಿಚಾರಕಿ ಆರ್ ಎನ್ ಶಶಿಕಲಾ, ಸೇವಾ ಪ್ರತಿನಿಧಿ ಶೋಭಾ ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.