July 22, 2026
IMG-20260722-WA0143



ಚಳ್ಳಕೆರೆ, ಜುಲೈ 22: ಚಳ್ಳಕೆರೆ ತಾಲೂಕಿನ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ವಿವಿಜಿ ರಾಮ್‌ಜಿ 2026 ಹೊಸ ಯೋಜನೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತಾಲೂಕು ಪಂಚಾಯಿತಿ ಚಳ್ಳಕೆರೆ ಐಇಸಿ ಸಂಯೋಜಕರಾದ ಶ್ರೀ ಪ್ರವೀಣ್ ಕುಮಾರ್, ಡಿಇಒ ಜಗದೀಶ್ ಕುಮಾರ್, ಬಿಎಫ್‌ಟಿ ಭೂಪಾಲ್ ನಾಯ್ಕ್, ಜಿಕೆಎಂ ಪವಿತ್ರ, ಗ್ರಾಮ ಪಂಚಾಯಿತಿ ನೀರಗಂಟಿ ಹಾಗೂ ಸ್ವಚ್ಛತಾ ಸಿಬ್ಬಂದಿಯವರು ಗ್ರಾಮಸ್ಥರ ಮನೆ ಮನೆಗೆ ಭೇಟಿ ನೀಡಿ ಯೋಜನೆಯ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ, ವಿವಿಜಿ ರಾಮ್‌ಜಿ 2026 ಯೋಜನೆಯಡಿ ಪ್ರತಿ ಕುಟುಂಬಕ್ಕೆ 125 ಮಾನವ ದಿನಗಳ ಉದ್ಯೋಗಾವಕಾಶ ಕಲ್ಪಿಸಲಾಗಿದ್ದು, ದಿನಗೂಲಿ ₹382 ನಿಗದಿಪಡಿಸಲಾಗಿದೆ ಎಂದು ಗ್ರಾಮಸ್ಥರಿಗೆ ವಿವರಿಸಲಾಯಿತು. ಯೋಜನೆಯ ಸೌಲಭ್ಯಗಳನ್ನು ಪಡೆದು ಗ್ರಾಮದಲ್ಲಿಯೇ ಉದ್ಯೋಗವನ್ನು ಬಳಸಿಕೊಳ್ಳುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಆಸಕ್ತಿಯಿಂದ ಭಾಗವಹಿಸಿ ಯೋಜನೆ ಕುರಿತು ಮಾಹಿತಿ ಪಡೆದುಕೊಂಡರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading