ವರದಿ:ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಯೋಗಾಭ್ಯಾಸ ಎಂಬುದು ಕೇವಲ ನೋಡುಗರ ನೋಟಕ್ಕೆ ಆಕರ್ಷಣೆಗೆ ಮಾಡುವ ಅಭ್ಯಾಸವಲ್ಲ ಯೋಗದಿಂದ ಹಲವರು ರೋಗಗಳು ನಿವಾರಣೆಯಾಗುತ್ತವೆ ಯೋಗಾಭ್ಯಾಸವನ್ನ ವಿದ್ಯಾರ್ಥಿ ಜೀವನದಿಂದಲೇ ರೂಡಿಸಿಕೊಳ್ಳಬೇಕು ಎಂದು ಎಸ್.ನಿಜಲಿಂಗಪ್ಪ ಶೈಕ್ಷಣಿಕ ಸಂಸ್ಧೆಯ ಕಾರ್ಯದರ್ಶಿ ಕೆ.ಎಸ್.ಕಲ್ಮಠ್ ಕರೆ ನೀಡಿದರು.
ಪಟ್ಟಣದ ಎಸ್.ನಿಜಲಿಂಗಪ್ಪ ಶೈಕ್ಷಣಿಕ ಸಂಸ್ಧೆಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ೧೨ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
೨೦೨೬ರ ಅಂತರಾಷ್ಟಿçÃಯ ಯೋಗ ದಿನಾಚರಣೆಯ ಮಹತ್ವವನ್ನ ಹೆಚ್ಚಿಸುವ ಹಿನ್ನೆಲೆಯಲ್ಲಿ ಈ ಬರಿ ಯೊಗ ದಿನಾಚರಣೆಯ ಘೋಷವಾಕ್ಯವಾಗಿ “ಆರೋಗ್ಯಕರ ವೃದ್ದಾಪ್ಯಕ್ಕಾಗಿ ಯೋಗ” ಆಗದ್ದು ಇದು ಯೊಗದ ಮಹತ್ವವನ್ನ ಮತ್ತಷ್ಟು ಜಗತ್ತಿನ ಎಲ್ಲಾ ರಾಷ್ಟçಗಳಿಗೆ ಸಾರುವಂತಹ ಹೆಗ್ಗಳಿಕೆ ನಮ್ಮದಾಗಿದೆ, ಯೋಗ ಶಿಕ್ಷಕರಾದ ಮರಳುಸಿದ್ದಯ್ಯನವರು ಕಳೆದ ಒಂದು ವಾರದಿಂದ ಸಂಸ್ಧೆಯ ಸಾವಿರಾರು ವಿದ್ಯಾರ್ಥಿಗಳಿಗೆ ವಿವಿಧ ಯೋಗಾಸನಗಳ ಬಗ್ಗೆ ತರಬೇತಿ ನೀಡುವುದರ ಮೂಲಕ ಯಶಸ್ವಿಗೊಳಿಸಿದ್ದಾರೆ ಎಂದು ಶ್ಲಾ಼ಘನೀಯ ಮಾತುಗಳನ್ನಾಡಿದ ಅವರು ಇದೇ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಮರಳುಸಿದ್ದಯ್ಯನವರನ್ನ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಧೆಯ ಅಧ್ಯಕ್ಷ ಎಂ.ಶಿವಲಿAಗಪ್ಪ, ಅಕಾಡಮಿಕ್ ಡೈರಕ್ಟರ್ ಎಂ.ಬಿ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಕೆ.ಎಸ್.ಪುಟ್ಟರಾಜು, ಖಜಾಂಚಿ ಕೆ.ಸಿ.ಮಲ್ಲಿಕಾರ್ಜುನಪ್ಪ, ಟ್ರಸ್ಟಿಗಳಾದ ವಿಜಯಶಿವಲಿಂಗಪ್ಪ, ವ್ಯವಸ್ಧಾಪಕ ವೀರೇಶ್, ಬಿಎಡ್ ಕಾಲೇಜಿನ ಪ್ರಾಂಶುಪಾಲ ಡಾ: ಡಿ.ಬಸಪ್ಪ, ಪಿ.ಯು ಕಾಲೇಜಿನ ಪ್ರಾಂಶುಪಾಲ ಡಾ:ಉಮರ್‌ಫಾರುಕ್, ಸಿಬಿಎಸಿ ಶಾಲೆಯ ಪ್ರಾಂಶುಪಾಲರಾದ ಜ್ವಾಲರೋಕಡೆ, ಎಂ.ಪಿ ಪ್ರಕಾಶ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಕುಮಾರಿ ಪುಷ್ಪ ಸೇರಿದಂತೆ ಸಂಸ್ಧೆಯ ಧರ್ಮದರ್ಶಿಗಳು, ಸಿಬ್ಬಂಧಿ ವರ್ಗದವರು, ಶಿಕ್ಷಕರು ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು, ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.