June 21, 2026
IMG-20260621-WA0251

ವರದಿ:ನಾಗತಿಹಳ್ಳಿಮಂಜುನಾಥ್
ಹೊಸದುರ್ಗ:ಆಧುನಿಕ ಜೀವನ ಪದ್ಧತಿಗೆ ಹೊಂದಿಕೊAಡಿರುವ ಈಗಿನ ಬಹಳಷ್ಟು ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ವಿಷಾಧಕರ ಸಂಗತಿ, ಕೇವಲ ಯೋಗ ಪ್ರಾಣಯಾಮದಿಂದ ದೇಹವನ್ನು ಮತ್ತು ಮನಸ್ಸನ್ನು ಸದೃಢ ಮಾಡಿಕೊಳ್ಳಬಹುದು. ಎಂದು ಖನಿಜ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ವಾಕರ್ ಅಸೋಷಿಯೆಷನ್ ಅಧ್ಯಕ್ಷ ಎಸ್ ಲಿಂಗಮೂರ್ತಿ ತಿಳಿಸಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ೧೨ ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪದ್ಮಾಸನ ಯೋಗ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಲ್ಲಾ ವಯಸ್ಸಿನವರೆಗೂ ಯೋಗ ಅತ್ಯವಶ್ಯಕ ಅನ್ನೋ ಸದೃಢ ಆರೋಗ್ಯಕ್ಕಾಗಿ ಎಲ್ಲರೂ ಯೋಗವನ್ನು ಮಾಡಲೇಬೇಕು. ಯೋಗ ನಮ್ಮ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಯೋಗ ಮಾಡುವುದರಿಂದ ಪ್ರತಿನಿತ್ಯ ನಾವು ಮಾಡುವ ಕೆಲಸಗಳಲ್ಲಿ ಏಕಾಗ್ರತೆ ಸಿಗುತ್ತದೆ. ಯೋಗವನ್ನು ಎಲ್ಲಾ ವಯಸ್ಸಿನವರು ಮಾಡಬಹುದು. ಯೋಗ ಮಾಡಿದವರು ಮಾನಸಿಕ ಹಾಗೂ ದೈಹಕವಾಗಿ ಸದೃಢರಾಗಿ ದೀರ್ಘಕಾಲ ಬದುಕು ನಡೆಸಬಲ್ಲರು ಯೋಗದಿಂದ ಆರೋಗ್ಯದ ಯೋಗ್ಯತೆಯನ್ನ ಕಾಪಾಡಿಕೊಳ್ಳಬಹುದು. ಮಾನವನ ಆಂತರಿಕ ಮತ್ತು ಬಾಹ್ಯ ಸೌಂದರ್ಯಕ್ಕೆ ಯೋಗ ಅತ್ಯಂತ ಪರಿಣಾಮಕಾರಿ ಯೋಗದಿಂದ ಸೌಂದರ್ಯ ವೃದ್ಧಿಯಾಗುತ್ತದೆ. ವಯಸ್ಸಿನ ಅಂತರವಿಲ್ಲದೆ ಯೋಗ ಮಾಡಬಹುದು ಮಾಜಿ ಪ್ರಧಾನಿ ದೇವೇಗೌಡರು ಪ್ರತಿನಿತ್ಯ ಯೋಗ ಮಾಡಿ ಆರೋಗ್ಯಕರವಾಗಿದ್ದಾರೆ. ಇವರು ನಮಗೆ ಮಾದರಿಯಾಗಿ ನಿಲ್ಲಬಲ್ಲರು ಎಂದರು. ಕಾರ್ಯಕ್ರಮದಲ್ಲಿ ಅಸೋಷಿಯೇಷನ್ ಪದಾಧಿಕಾರಿಗಳು ಸಾರ್ವಜನಿಕರು ಉಪಸ್ಧಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading