ನಾಯಕನಹಟ್ಟಿ-: ಜೀವನದಲ್ಲಿ ಆರೋಗ್ಯವಾಗಿ ಇರಬೇಕೆಂದರೆ ಬಾಲ್ಯದಲ್ಲಿಯೇ ಯೋಗ ಮಾಡುವ ಹವ್ಯಾಸ ರೂಡಿಸಿಕೊಳ್ಳಬೇಕು ಜೊತೆಗೆ ಪೋಷಕರಿಗೆ ಮತ್ತು ತಮ್ಮ ಸುತ್ತಮುತ್ತಲಿನವರಿಗೆ ಯೋಗ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕು ಎಂದು ನಲಗೇತನಹಟ್ಟಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿವಿನಾಥ್ ಹೇಳಿದರು.
ಸಮೀಪದ ನಲಗೇತನಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭಾನುವಾರ ವಿಶ್ವ ಅಂತರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಯೋಗವು ಪ್ರತಿಯೊಬ್ಬರ ಜೀವನದಲ್ಲಿ ಅವಿಭಾಜ್ಯ ಆಗಬೇಕು ಮನುಷ್ಯ ಎಷ್ಟೇ ಸಂಪಾದನೆ ಮಾಡಿದರು ಉತ್ತಮ ಆರೋಗ್ಯವಿಲ್ಲ ಎಂದಾದರೆ ಏನು ಪ್ರಯೋಜನ? ಇಂದಿನ ಒತ್ತಡ ಯುಗದಲ್ಲಿ ಉತ್ತಮ ಆರೋಗ್ಯವನ್ನು ಹೊಂದಬೇಕೆಂದರೆ ಯೋಗಭ್ಯಾಸ ಮಾಡಬೇಕು ಎಂದರು ಯೋಗ ದಿನವನ್ನು ಆಚರಿಸುವುದರ ಉದ್ದೇಶ ಯೋಗದ ಮಹತ್ವ ತಿಳಿಯುವುದಕ್ಕಾಗಿ ಈ ಹಿಂದೆ ಋಷಿಮುನಿಗಳು ನೂರಾರು ವರ್ಷ ದೀರ್ಘವಾಗಿ ಬದುಕಲು ಅವರು ಆಧ್ಯಾತ್ಮಿಕ ಜೊತೆಗೆ ಯೋಗ್ಯ ಅಭ್ಯಾಸ ರೂಢಿಸಿಕೊಂಡಿದ್ದರು ಎಂದರು.
ನಲಗೇತನಹಟ್ಟಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ
ದೈಹಿಕ ಶಿಕ್ಷಕ ಎನ್ ತಿಪ್ಪೇಸ್ವಾಮಿ , ಆರ್ ಟಿ ಸತೀಶ್ ಬಾಬು, ಆರ್, ರಂಗನಾಯ್ಕ, ಶಿಕ್ಷಕಿಯರಾದ ಬಿ. ಎನ್. ಸುಧಾ, ಆರ್. ಶ್ರೀರಂಗಮ್ಮ ಸೇರಿದಂತೆ ಶಾಲೆಯ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.