ಚಳ್ಳಕೆರೆ: ತಾಲೂಕಿನ ವಿವಿಧ ರೈತ ಸಂಘಟನೆಗಳ ಮನವಿಗೆ ಸ್ಪಂದಿಸಿ ಸರ್ಕಾರ ಶೇಂಗಾ ಬಿತ್ತನೆ ಬೀಜದ ದರವನ್ನು ಕಡಿತಗೊಳಿಸಿರುವುದು ರೈತರಿಗೆ ಸಂತಸದ ಸುದ್ದಿಯಾಗಿದೆ.
ತಾಲೂಕಿನ ರೈತ ಸಂಘಟನೆಗಳ ಕೋರಿಕೆಯ ಮೇರೆಗೆ ಮಾನ್ಯ ಶಾಸಕ ಟಿ.ರಘುಮೂರ್ತಿಯವರು ಸರ್ಕಾರಕ್ಕೆ ಪತ್ರ ಬರೆದು ಶೇಂಗಾ ಬಿತ್ತನೆ ಬೀಜದ ದರವನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಇದರ ಫಲವಾಗಿ ಸರ್ಕಾರವು ಪ್ರತಿ ಕ್ವಿಂಟಲ್ ಶೇಂಗಾ ಬಿತ್ತನೆ ಬೀಜದ ದರವನ್ನು ರೂ.11,300 ರಿಂದ ರೂ.10,800ಕ್ಕೆ ಇಳಿಕೆ ಮಾಡಿದೆ.
ಸಾಮಾನ್ಯ ವರ್ಗದ ರೈತರಿಗೆ ರೂ.1,400 ಸಹಾಯಧನ ದೊರೆಯಲಿದ್ದು, ರೈತರು ತಮ್ಮ ಪಾಲಿನ ರೂ.9,400 ಪಾವತಿಸಿ ಬಿತ್ತನೆ ಬೀಜ ಪಡೆಯಬಹುದಾಗಿದೆ. ಅದೇ ರೀತಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ರೂ.2,100 ಸಹಾಯಧನ ದೊರೆಯಲಿದ್ದು, ಅವರು ಕೇವಲ ರೂ.8,700 ಪಾವತಿಸಿ ಬಿತ್ತನೆ ಬೀಜವನ್ನು ಪಡೆಯಬಹುದಾಗಿದೆ.
ಶೇಂಗಾ ಬೆಳೆ ಬೆಳೆಯುವ ರೈತರು ಸರ್ಕಾರದ ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳುವಂತೆ ಸಹಾಯಕ ಕೃಷಿ ನಿರ್ದೇಶಕ ಡಾ. ರಮೇಶ್ ಮನವಿ ಮಾಡಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.