ಬೆಂಗಳೂರು: ಮಾಧ್ಯಮ ಕ್ಷೇತ್ರದಲ್ಲಿ ನಿರ್ಭಯ ಪತ್ರಿಕೋದ್ಯಮದ ಮೂಲಕ ಗುರುತಿಸಿಕೊಂಡಿರುವ ವಿಜಯ ಟೈಮ್ಸ್ ಪ್ರಧಾನ ಸಂಪಾದಕಿ ವಿಜಯಲಕ್ಷ್ಮಿ ಶಿಬರೂರು ಅವರು ಪತ್ರಕರ್ತರ ಜೀವನದ ಸಂಕಷ್ಟಗಳು ಹಾಗೂ ಮಾಧ್ಯಮ ಕ್ಷೇತ್ರದ ಇಂದಿನ ಸ್ಥಿತಿಗತಿಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಇತ್ತೀಚೆಗೆ ವಿಜಯನಗರದಲ್ಲಿರುವ ಅವರ ಕಚೇರಿಯಲ್ಲಿ ನಡೆದ ಭೇಟಿಯ ವೇಳೆ ಮಾತನಾಡಿದ ಅವರು, ತಮ್ಮ ವಿರುದ್ಧ ಕೋಟ್ಯಂತರ ರೂಪಾಯಿ ಮಾನನಷ್ಟ ಮೊಕದ್ದಮೆಗಳು ದಾಖಲಾಗಿದ್ದು, ಅನೇಕ ಪೊಲೀಸ್ ಪ್ರಕರಣಗಳನ್ನು ಎದುರಿಸುತ್ತಿರುವುದಾಗಿ ತಿಳಿಸಿದರು. ಇಂತಹ ಸಂಕಷ್ಟದ ಸಂದರ್ಭಗಳಲ್ಲಿ ಯಾವುದೇ ಪತ್ರಕರ್ತರು ಅಥವಾ ಪತ್ರಕರ್ತರ ಸಂಘಟನೆಗಳು ಬೆಂಬಲಕ್ಕೆ ನಿಲ್ಲಲಿಲ್ಲ ಎಂಬ ಬೇಸರವನ್ನು ವ್ಯಕ್ತಪಡಿಸಿದರು.
ಮಾಧ್ಯಮ ಕ್ಷೇತ್ರದಲ್ಲಿ ವ್ಯಾಪಾರೀಕರಣ ಹೆಚ್ಚಾಗುತ್ತಿರುವುದು ಹಾಗೂ ಪತ್ರಕರ್ತರ ಮೂಲಭೂತ ಸಮಸ್ಯೆಗಳ ಬಗ್ಗೆ ಸಮರ್ಪಕ ಚರ್ಚೆ ನಡೆಯದಿರುವುದು ವಿಷಾದನೀಯ ಎಂದು ಹೇಳಿದರು. ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳ ಕುರಿತು ಸಂಘಟನೆಗಳು ಮತ್ತು ಸರ್ಕಾರಗಳು ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸ್ಟಿಂಗ್ ಆಪರೇಷನ್ ಹಾಗೂ ತನಿಖಾತ್ಮಕ ವರದಿಗಳ ಮೂಲಕ ಸಮಾಜದಲ್ಲಿನ ಅಕ್ರಮಗಳನ್ನು ಬಯಲಿಗೆಳೆಯುವ ಕಾರ್ಯವನ್ನು ತಾವು ಮುಂದುವರಿಸುತ್ತಿರುವುದಾಗಿ ತಿಳಿಸಿದ ಅವರು, ಆರ್ಥಿಕ ಸಂಕಷ್ಟಗಳ ನಡುವೆಯೂ ಸಾಧ್ಯವಾದಷ್ಟು ಕಾಲ ಮಾಧ್ಯಮ ಸೇವೆಯಲ್ಲಿ ತೊಡಗಿಸಿಕೊಳ್ಳುವ ಸಂಕಲ್ಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಹಕ್ಕುಗಳು, ಭದ್ರತೆ ಹಾಗೂ ಮೂಲಭೂತ ಸೌಲಭ್ಯಗಳ ಕುರಿತು ಚರ್ಚೆ ನಡೆಯಿತು. ಪತ್ರಕರ್ತರು ಸಂಕಷ್ಟಕ್ಕೆ ಸಿಲುಕಿದಾಗ ಪರಸ್ಪರ ಬೆಂಬಲ ನೀಡುವ ವಾತಾವರಣ ನಿರ್ಮಾಣವಾಗಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.
ಮಾಧ್ಯಮ ಕ್ಷೇತ್ರವು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಲು ಪತ್ರಕರ್ತರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಹಾಗೂ ಸಮಾಜ ಸ್ಪಂದಿಸಬೇಕೆಂದು ಆಗ್ರಹಿಸಲಾಯಿತು.*ಬರೆಯುವ ಕೈಗಳಿಗೆ ಕೋಳ,ಕೋಟ್ಯಾಂತರ ರೂ ಗಳ ಮಾನನಷ್ಟ ಮೊಕ್ಕದ್ದಮೆ,ಅನೇಕ ರೀತಿಯ ಪೋಲಿಸ್ ಕೇಸ್ ಪ್ರಸ್ತುತ ನನ್ನ ಮೇಲೆ ಇವೆ, ಯಾವೊಬ್ಬ ಪತ್ರಕರ್ತರು ನನ್ನ ಬೆಂಬಲಕ್ಕೆ ನಿಂತಿಲ್ಲದ ಕಾರಣ ನಾನು ಯಾವ ಪತ್ರಕರ್ತರ ಸಂಘಟನೆಗೆ ಬೆಂಬಲವಿಲ್ಲ ಹಾಗೂ ಕಾರ್ಯಕ್ರಮಗಳಲ್ಲೂ ಭಾಗವಹಿಸಲ್ಲವೆಂದ ವಿಜಯಲಕ್ಷ್ಮಿ ಶಿಬರೂರು* ;- ಇಂದು ಮಾಧ್ಯಮ ಎತ್ತ ಸಾಗುತ್ತಿದೆ ಎಂದು ಇಡೀ ದೇಶವೇ ಅನುಮಾನ ದೃಷ್ಟಿಯಿಂದ ನೋಡುತ್ತಿದೆ ಎಂಬ ಸತ್ಯ ಒಂದೆಡೆ ಸಾಗುತ್ತಿದೆಯಾದರೂ ಮತ್ತೊಂದೆಡೆ ಎಲ್ಲರನ್ನು ಆಳುತ್ತಿರುವ ಶಾಸಕಾಂಗದ ಧುರೀಣರು ತಮ್ಮ ಬಳಗಕ್ಕೆ ಏನೆಲ್ಲಾ ಅವಶ್ಯಕತೆ ಇದೆಯೋ ಅದೆಲ್ಲವನ್ನು ಪಡೆದುಕೊಳ್ಳುತ್ತಾ ನೆಮ್ಮದಿ ಹಾಗೂ ಸೊಂಪಾಗಿ ಇರುವುದರ ಜೊತೆಗೆ ನಾವೆಲ್ಲಾ ನಿಮ್ಮಗಳ ಪ್ರಧಾನ ಸೇವಕ ಎಂಬ ಬಾಷಣದೊಂದಿಗೆ ಮರಳು ಮಾಡುತ್ತಾ ಸಾಗಿದ್ದಾರೆ. ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ ಅನ್ಯಾಯ ಅಕ್ರಮಗಳ ವಿರುದ್ದ ಜನತೆಯ ಧ್ವನಿಯಾಗುವುದರ ಜೊತೆಯಾಗಿ ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯ ಸೇತುವೆಯ ಕೊಂಡಿಯಾಗಿ ಕಾರ್ಯನಿರ್ವಹಿಸುವ ನಿಜವಾದ ಕಾರ್ಯನಿರತ ಪತ್ರಕರ್ತರಿಗೆ ಇಷ್ಟೆಲ್ಲಾ ದುಗಡ ದುಮ್ಮಾನಗಳ ಜೊತೆಗೆ ಶೋಚನೀಯ ಸ್ಥಿತಿ ತಲುಪಿದ್ದರು ಕೂಡ ನಮ್ಮ ನಾಡಿನ ದಿಟ್ಟೆದೆಯ ಹಿರಿಯ ಪತ್ರಕರ್ತರು ಧ್ವನಿ ಎತ್ತದೇ ತಮಗೆ ಅನ್ಯಾವಾದರೂ ಸಹಿಸಿಕೊಂಡು ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಯ ಮಾಲಿಕರ ವಿರುದ್ದವಾಗಲಿ ಮೂಲಭೂತ ಸೌಕರ್ಯ ನೀಡದ ಸರ್ಕಾರಗಳ ವಿರುದ್ದವಾಗಲೀ ಧ್ವನಿ ಮೊಳಗದಿರುವುದು ಪತ್ರಕರ್ತರ ದುರ್ಧೈವೇ ಸರಿ. ಇಂದು ಮಾಧ್ಯಮ, ಸೇವಾ ಧರ್ಮವಾಗಿ ಕಾರ್ಯನಿರ್ವಹಿಸದೆ ವ್ಯಾಪಾರಿಕರಣದೊಂದಿಗೆ ಉದ್ಯಮವಾಗಿ ಸಾಗುತ್ತಿರುವುದು ಸಾರ್ವಜನಿಕರಲ್ಲಿ ಕಳವಳವನ್ನುಂಟು ಮಾಡಿರುವುದು ಸುಳ್ಳಲ್ಲ. ಇಂದು ಗೌರೀಶ್ ಅಕ್ಕಿಯವರಾಗಲೀ,ಹರೀಶ್ ನಾಗರಾಜ್ ರವರಾಗಲಿ,ಜಯಪ್ರಕಾಶ್ ಶೆಟ್ಟಿ ಯವರಾಗಲಿ,ರಾಧ ಹಿರೇಗೌಡ ರವರಾಗಲಿ,ಶಶಿಧರ್ ಭಟ್ ರವರಾಗಲಿ, ದಿವಂಗತ ರವಿ ಬೆಳಗೆರೆ ಯವರಾಗಲಿ,ವಿಜಯಲಕ್ಷ್ಮಿ ಶಿಬರೂರು ಹಾಗೂ ಇನ್ನೀತರ ದಿಗ್ಗಜ ಪತ್ರಕರ್ತರು ಅನೇಕ ರೀತಿಯ ನಿರ್ಭಯವಾದಂತಹ ವರದಿಗಳನ್ನು ತಮ್ಮ ಪ್ರಾಣದ ಹಂಗನ್ನು ತೊರೆದು ವರದಿಗಳನ್ನು ಮಾಡಿದ್ದಾರೆ. ಇಂದು ಅವರ ಆರ್ಥಿಕ ಸ್ಥಿತಿಗಳು ಅಷ್ಟೇನೂ ಚೆನ್ನಾಗಿಲ್ಲದಿರುವುದು ನಿಜ. ಆದರೆ ಮಾಧ್ಯಮದ ಪ್ರತಿನಿಧಿಗಳೆಂದು ಸಾಗುವ ನಾವು ಮನೆ ಗೆದ್ದು ಮಾರು ಗೆಲ್ಲಬೇಕೆಂಬ ಗಾದೆಯಂತೆ ನಮ್ಮ ನೈಜ ವರದಿಗಳ ಮುಖಾಂತರ ಪತ್ರಿಕೆಯ ಮಾಲಿಕರುಗಳಿಗೆ ಹಾಗೂ ಸರ್ಕಾರಕ್ಕೆ ಈಗಾಗಲೇ ಅಂಕುಶ ಹಾಕಿ ನ್ಯಾಯ ಪಡೆಯುವ ನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನು ಪಡೆಯಬೇಕಾಗಿತ್ತು. ಆದರೆ ಅದೂ ಇಂದಿನವರೆಗೆ ಆಗದಿರುವುದು ಜೊತೆಗೆ ಹಿರಿಯ ನಾಡಿನ ಮುತ್ಸದಿ ಗಳು ಈ ಕುರಿತು ಚಿಂತನೆ ನಡೆಸಿ ವರದಿಗಾರರಿಗೆ ನ್ಯಾಯ ಸಮ್ಮತವಾದಂತ ಬೇಡಿಕೆಗಳನ್ನು ಈಡೇರಿಸುವಂತ ನಿಟ್ಟಿನಲ್ಲಿ ಈಗಾಗಲೇ ಸಾಗಬೇಕಿತ್ತು.
ಈ ನಿಟ್ಟಿನಲ್ಲಿ ಕಳೆದ ತಿಂಗಳು ನಾಡಿನ ಹೆಸರಾಂತ ಹೆಣ್ಣು ಹುಲಿ ಎಂದೇ ಮಾಧ್ಯಮ ಲೋಕದಲ್ಲಿ ಚಿರಪರಿಚಿತರಾಗಿರುವ ವಿಜಯ ಟೈಮ್ಸ್ ನ ಪ್ರಧಾನ ಸಂಪಾದಕಿಯಾಗಿರುವ ವಿಜಯಲಕ್ಷ್ಮಿ ಶಿಬರೂರು ರವರನ್ನು ಅವರ ವಿಜಯನಗರದ ಕಛೇರಿಗೆ ನಾನು ಹಾಗೂ ಪೋಲಿಸ್ ವಾರ್ತೆ ಪತ್ರಿಕೆಯ ಬೆಂಗಳೂರು ನಗರ ಜಿಲ್ಲಾ ವರದಿಗಾರರಾದ ಎಂಎಸ್.ರಮೇಶ್ ರವರೊಂದಿಗೆ ಹೋದಂತ ಸಂದರ್ಭದಲ್ಲಿ ನಮ್ಮ ವಿಸಿಟಿಂಗ್ ಕಾರ್ಡ್ ಅವರ ಆಪ್ತ ಸಹಾಯಕಿಯ ಮೂಲಕ ಕಳುಹಿಸಿಕೊಟ್ಟೆವು. ಕೆಲ ನಿಮಿಷಗಳ ನಂತರ ಬಂದ ಆಪ್ತ ಸಹಾಯಕಿ ಇಲ್ಲಾ ಮೇಡಂ ಅವರು ತುಂಬಾ ಬಿಜಿಯಾಗಿದ್ದಾರೆ,ಇಂದು ನೋಡೋಕ್ಕಾಗಲ್ಲ ಭೇಟಿಗೆ ಸಾಧ್ಯವಿಲ್ಲವೆಂದಾಗ ಮನಸ್ಸಿಗೆ ಸ್ವಲ್ಪ ಬೇಸರವಾದರೂ ಸುಧಾರಿಸಿಕೊಂಡು ಇಲ್ಲಾ ನಿಮ್ಮ ಮೇಡಂ ಗೆ ಹೇಳಿ ಎಷ್ಟು ಹೊತ್ತಾದರೂ ತಾಳ್ಮೆಯಿಂದ ಅವರು ಬಿಡುವಾಗುವವರೆಗೂ ಇಲ್ಲೇ ಕಾದು ಅವರನ್ನು ಕಂಡು ನಾಲ್ಕು ಮಾತು ಆಡಿ ಹೋಗುತ್ತೇವೆ ಎಂದು ಹೇಳಿ ಎಂದು ವಿನಂತಿಸಿದಾಗ ಆಪ್ತ ಸಹಾಯಕಿ ವಿಷಯ ಮುಟ್ಟಿಸಿದ ಒಂದು ತಾಸಿನ ನಂತರ ವಿಜಯಲಕ್ಷ್ಮಿ ಶಿಬರೂರು ರವರು ನಮ್ಮ ಬಳಿ ಬಂದು ಚೆನ್ನಾಗಿದ್ದೀರ ಎಂದು ಕೇಳುವದರೊಂದಿಗೆ ಮಾತು ಕತೆ ಶುರುವಾಯಿತು. ಮೇಡಂ ನಿಮ್ಮ ನಿರ್ಭಯವಾದಂತ ವರದಿಗಳಿಗೆ ಹಾಗೂ ನಿಮ್ಮ ಎರಡು ಗುಂಡಿಗೆಯ ಧೈರ್ಯವಂತಿಕೆಗೆ ನಮ್ಮ ವತಿಯಿಂದ ತಮಗೆ ಹೃದಯ ಪೂರ್ವಕ ಸಲಾಂ ಅಂತ ಹೇಳಿದೆವು ಜೊತೆಗೆ ಇವರ ನೇರ ನಡೆನುಡಿ ಪ್ರಾಣದ ಹಂಗನ್ನು ತೊರೆದು ಮಾಡಿರುವ ಹಾಗೂ ಮಾಡುತ್ತಿರುವ ವರದಿಗಳು ಸ್ಟಿಂಗ್ ಆಪರೇಷನ್ ಗೆ ಇಡೀ ರಾಜ್ಯವೇ ಬೆಕ್ಕಸ ಬೆರಗಾಗಿದೆ. ಈ ಹಿಂದೆ TV9, ಸುರ್ವರ್ಣ ಚಾನಲ್, ಈ TV ಹಾಗೂ ಮುಂತಾದ ಚಾನಲ್ ಗಳಲ್ಲಿ ತಮ್ಮ ನಿರ್ಭಯ ವರದಿಗಾರಿಕೆ ಜೊತೆಗೆ ನಿರೂಪಣೆ ಯಿಂದ ಜನರ ಮನ ಮನೆಗಳಲ್ಲಿ ಹೆಸರಾಗಿದ್ದಂತವರು ಈ ಶಿಬರೂರು ರವರು.1979 ನೇ ಇಸವಿಯಲ್ಲಿ ಮಂಗಳೂರು ಹತ್ತಿರ ವಿರುವ ಶಿಬರೂರು ಎಂಬ ಹಳ್ಳಿಯಲ್ಲಿ ಬಡ ಕುಟುಂಬವೊಂದರಲ್ಲಿ ಜನಿಸಿ ಮುಂದೆ ಮಂಗಳ ಗಂಗೋತ್ರಿಯಲ್ಲಿ ಮಾಸ್ ಕಮ್ಯುನಿಕೇಷನ್ ಪೂರೈಸಿ ಮಾಧ್ಯಮ ಲೋಕಕ್ಕೆ ಕೇವಲ 250 ರೂ ಸಂಬಳಕ್ಕೆ ವರದಿಗಾರರಾಗಿ ಪಾದಾರ್ಪಣೆ ಮಾಡಿದಂತ ಈ ಹೆಣ್ಣು ಹುಲಿ ರಾಜ್ಯದ ಉದ್ದಗಲಕ್ಕೂ ಸ್ಟಿಂಗ್ ಆಪರೇಷನ್ ಮೂಲಕ ಈ ರೀತಿಯ ಸದ್ದು ಮಾಡುತ್ತಾಳೆಂದು ಮಂಗಳೂರು ಜನತೆಗೆ ಖಂಡಿತ ಗೊತ್ತಿರಲಿಲ್ಲ. ಈ ಮಾಧ್ಯಮದ ಜಗತ್ತಿನ ಬೆನ್ನತ್ತಿ ಜನತೆಗೆ ಎಚ್ಚರಿಸುವ ಕಾಯಕಕ್ಕೆ ತನ್ನ ಹತ್ತಿರವಿದ್ದ ಲಕ್ಷಾಂತರ ರೂ ಗಳು ಹಾಗೂ ಬಂಗಾರದ ಒಡೆವೆಗಳನ್ನು ಕಳೆದುಕೊಂಡು ಇಂದು ಖಾಲಿಕೈ ಆಗಿದ್ದರೂ ಕೂಡ ಧೃತಿಗೆಡದೆ ತನ್ನ ಕೈಲೀ ಎಷ್ಟುರವರೆಗೆ ಮಾಧ್ಯಮದ ರಥ ಎಳೆಯುವುದಕ್ಕೆ ಆಗುತ್ತೋ ಅಲ್ಲಿಯವರೆಗೆ ಮಾಧ್ಯಮದ ಸೇವೆಯಲ್ಲಿ ಮುಂದುವರೆಯುತ್ತೇನೆ. ಕೈ ಮೀರಿದಂತ ಆರ್ಥಿಕ ಸ್ಥಿತಿ ಎದುರಾಗಿದ್ದೇ ಆದರೆ ನನ್ನ ಸಂಸ್ಥೆಯಲ್ಲಿರುವ ವಸ್ತುಗಳನ್ನೆಲ್ಲಾ ಮಾರಿ ಸಿಬ್ಬಂದಿ ಸಂಬಳಗಳೆಲ್ಲವನ್ನು ಕೊಟ್ಟು ನನ್ನ ಹಳ್ಳಿಗೆ ಹೋಗಿ ವ್ಯವಸಾಯ ಮಾಡುತ್ತಾ ಉಸಿರಿರೋವರೆಗೂ ಹೊಟ್ಟೆ ಪಾಡಿಗಾಗಿ ಜೀವನ ಸಾಗಿಸುತ್ತೇನೆ ಎಂದು ತಮ್ಮ ಮನದಾಳದ ಇಂಗಿತವನ್ನು ಹಂಚಿಕೊಂಡರು.
ಇಷ್ಟೆಲ್ಲಾ ಹೇಳಿದ ನಂತರ ನಿಜ ಮೇಡಂ ನಿಮ್ಮ ಬಗ್ಗೆ ಖಂಡಿತ ನಮಗೆ ಹಾಗೂ ಸಮಸ್ತ ಮಾಧ್ಯಮದವರಿಗೂ ಅಪಾರ ಗೌರವವಿದೆ ನಿಜ ಆದರೆ ಸಮಾಜದಲ್ಲಿ ನಡೆಯುವ ಪ್ರತಿಯೊಂದು ಉಳುಕನ್ನು ಸ್ಟಿಂಗ್ ಆಪರೇಷನ್ ಮೂಲಕ ಜಗಜ್ಜಾಹಿರು ಪಡಿಸುವ ತಾವು ಒಬ್ಬ ಮಾಧ್ಯಮದವರಾಗಿ ಮಾಧ್ಯಮಕ್ಕೆ ಸಂಬಂಧಿಸಿದ ವರದಿಗಾರರು ಪಡುವಂತ ನೋವು,ನಲಿವು,ದುಃಖ ದುಮ್ಮಾನ ಗಳ ಬಗ್ಗೆಯಾಗಲಿ ಮಾಧ್ಯಮ ಪಟ್ಟಿಯಲ್ಲಿರುವ ಮಾಲಿಕರು ಹಾಗೂ ಮೂಲಭೂತ ಸೌಕರ್ಯಗಳನ್ನು ಪತ್ರಕರ್ತರುಗಳಿಗೆ ನೀಡಬೇಕಾದಂತ ಸರ್ಕಾರಗಳ ಬಗ್ಗೆ ಯಾಕೆ ಧ್ವನಿ ಎತ್ತುತ್ತಾ ಇಲ್ಲ ಜೊತೆಗೆ ನಿಮ್ಮ ಚಾನಲ್ ನಲ್ಲಿ ಈ ಕುರಿತಾದ ವಿಸ್ಕೃತವಾದಂತ ವರದಿ ಯಾಕೆ ಮೂಡುತ್ತಿಲ್ಲ ವೆಂಬ ಪ್ರಶ್ನೆಗೆ ಕೆಂಡಾಮಂಡಲರಾದ ವಿಜಯಲಕ್ಷ್ಮಿ ರವರು ಯಾಕ್ರೀ ನಾನು ಪತ್ರಕರ್ತರ ಪರ ನಿಲ್ಲಬೇಕು. ನನ್ನ ಮೇಲೆ 128 ಕೋಟಿ ರೂ ಗಳ ಮಾನನಷ್ಟ ಮೊಕ್ಕದ್ದಮೆಗಳನ್ನು ಹಾಕಿದ್ದಾರೆ, ಲೆಕ್ಕವಿಲ್ಲದಷ್ಟು ಪೋಲಿಸ್ ಕೇಸ್ ನಮೂದಾಗಿ ನ್ಯಾಯಾಲಯಕ್ಕೆ ಅಲೆದಾಟ ಸಾಗಿದೆ ಜೊತೆಗೆ ಅನೇಕ ಸಂದರ್ಭಗಳಲ್ಲಿ ನನ್ನ ಮೇಲೆ ದೌರ್ಜನ್ಯ ಗಳಾದಂತ ಸಂದರ್ಭಗಳಲ್ಲಿ ಯಾವ ಪತ್ರಕರ್ತರು ನನ್ನ ಬೆಂಬಲ ಹಾಗೂ ಸಹಾಯಕ್ಕೆ ನಿಂತಿದ್ದಾರೆ ಹೇಳಿ. ಮತ್ತೇ ನಾನ್ಯಕೆ ಅವರ ಬೆಂಬಲಕ್ಕೆ ನಿಲ್ಲಬೇಕು ಜೊತೆಗೆ ಅವರ ಕಾರ್ಯಕ್ರಮಗಳಿಗೇಕೆ ಹೋಗಬೇಕು ಎಂದು ಖಾರವಾಗಿ ಉತ್ತರಿಸಿದ್ದಲ್ಲದೇ ನನಗೊಂದು ಪತ್ರಕರ್ತರ ಮಾನ್ಯತಾ ಪತ್ರ ವಿರುವುದರಿಂದ ನನಗೆ ಮಾತ್ರ ಓಡಾಡಲು ಬಸ್ ಪ್ರೀ ಇರುತ್ತದೆ ನನ್ನ ಕೇಸಿಗೆ ಸಾಕ್ಷಿ ಹಾಕಿದಂತವರನ್ನು ರಾಜ್ಯದ ಮೂಲೆ ಮೂಲೆಯಲ್ಲಿರುವ ನ್ಯಾಯಾಲಯಗಳಿಗೆ ಜೊತೆಯಲ್ಲಿ ಕರೆದುಕೊಂಡು ಹೋರಾಟ ನಡೆಸಲೇಬೇಕಿರುವ ಅನಿವಾರ್ಯತೆ ಜೊತೆಗೆ ಆರ್ಥಿಕ ಸಂಕಷ್ಡ ಅಂತ ನೋವಿನಿಂದ ತಮ್ಮ ಮನದಾಳವನ್ನು ವ್ಯಕ್ತಿಪಡಿಸಿದರು. ಪತ್ರಕರ್ತರಾದವರು ನಾವು ಸರ್ಕಾರಗಳನ್ನು ಬೇಡಬಾರದು ಅವರೇ ಬಂದು ನಮ್ಮ ಮೂಲಭೂತ ಸೌಕರ್ಯಗಳನ್ನು ಒದಗಿಸಿಬೇಕೆಂಬ ಉತ್ತರಕ್ಕೆ ಮಗು ಅತ್ತರೇ ತಾನೇ ತಾಯಿ ಹಾಲು ಉಣಿಸುವುದಕ್ಕೆ ಸಾಧ್ಯ ನಾವುಗಳು ಹೋರಾಟದ ಜೊತೆಗೆ ಮನವಿ ಮಾಡದೇ ಇದ್ದರೇ ಸರ್ಕಾರ ನಮ್ಮ ಸಮಸ್ಯಗಳನ್ನು ಬಗೆಹರಿಸಲು ಸಾಧ್ಯವೇ. ಕೊನೆಯಲ್ಲಿ ನನ್ನ ಸ್ನೇಹಿತ ರಮೇಶ ರವರು ಮೇಡಂ ನಿಮ್ಮ ಸ್ಟಿಂಗ್ ಆಪರೇಷನ್ ನ ವರದಿಗಳು ಮಾತ್ರ ಪ್ರಸಾರವಾಗುತ್ತವೆ ನಿಜ ಆದರೆ ಅದರ ಪರಿಣಾಮ ಫಲಿತಾಂಶ ಹಾಗೂ ಕಾನೂನು ಕ್ರಮಗಳ ಬಗ್ಗೆ ಯಾಕೆ ಬೆಳಕು ಚೆಲ್ಲುತ್ತಾ ಇಲ್ಲವಲ್ಲ ಎಂಬ ಪ್ರಶ್ನೆಗೆ ಅದೂ ನನ್ನ ಕೆಲಸವಲ್ಲ ರೀ ನಿಮಗೆ ಬೇಕಿದ್ದರೆ ಪೋಲಿಸ್ ಠಾಣೆಗೆ ಹಾಗೂ ನ್ಯಾಯಾಲಯಗಳಿಗೆ ಹೋಗಿ ಸಮಗ್ರ ಮಾಹಿತಿ ಪಡೆಯಿರಿ ಅದನ್ನು ನಾನ್ಯಕೆ ಜನತೆಗೆ ಒದಗಿಸಬೇಕು ಎಂಬ ಮಾರ್ಮಿಕ ಉತ್ತರದೊಂದಿಗೆ ಒಂದು ಗಂಟೆಗೂ ಹೆಚ್ಚಿನ ಸಮಯ ನಡೆದ ಈ ಆರೋಗ್ಯ ಪೂರ್ಣ ಚರ್ಚೆಯ ನಂತರ ನನ್ನ ಮನಸ್ಸಿಗೆ ಅನಿಸಿದ್ದು ಇಷ್ಟು, ನನ್ನ ಮೇಲೆ ಸುಖಾ ಸುಮ್ಮನೆ ನನ್ನ ಬರವಣಿಗೆ ಹಾಗೂ ಹೋರಾಟದ ಧ್ವನಿ ಅಡಗಿಸಲೇಬೇಕೆಂಬ ಏಕೈಕ ದುರುದ್ದೇಶದಿಂದ ಅನೇಕ ನಾನ್ ಬೇಲಬಲ್ ಕೇಸ್ಗಳನ್ನು ನಮ್ಮ ಬಳ್ಳಾರಿ ಜಿಲ್ಲೆಯ ಕೆಲ ದಿಗ್ಗಜ ಪತ್ರಕರ್ತರು ಹಾಕಿಸಿದ್ದರೂ ಕೂಡ ಎಂದೂ ಅವರ ಮೇಲೆ ಕೋಪಿಸಿಕೊಳ್ಳದೇ ಒಂದು ಕಪಾಳಕ್ಕೆ ಹೊಡೆದರೆ ಮತ್ತೊಂದು ಕಪಾಳ ತೋರಿಸು ಎನ್ನುವ ರೀತಿಯಲ್ಲಿ ಇಂದು ಅವರೆಲ್ಲರ ಆರ್ಶೀವಾದದಿಂದ ಇಂದು ಸಾಸಿವೆ ಕಾಳಿನಷ್ಟು ಹೋರಾಟ ನನ್ನಿಂದ ಪತ್ರಕರ್ತರ ಪರ ಸಾಗುತ್ತಿದೆಯಲ್ಲ ಎಂಬ ನೆಮ್ಮದಿ ಒಂದೆಡೆಯಾದರೆ ಹೇಗಾದರೂ ಮಾಡಿ ಬಂಗ್ಲೆ ಮಲ್ಲಿಕಾರ್ಜುನನ ಕೈಗೆ ಕೋಳ ತೊಡಿಸಿ ಜೊತೆಗೆ ಜೈಲು ದರ್ಶನ ಮಾಡಿಸಲೇಬೇಕೆಂಬ ಕೆಲ ಪತ್ರಕರ್ತರು ಬರೆಯುವ ಕೈಗಳಿಗೆ ಕೋಳ ತೊಡಿಸಲೇಬೇಕೆಂಬ ಆಸೆಗೆ ತಣ್ಣೀರು ಎರಚಿದಂತಾಗಿರುವ ಈ ಸಂದರ್ಭದಲ್ಲಿ ನಾನು ಮಾಧ್ಯಮದ ಮಿತ್ರರಿಗೆ ಹೇಳುವುದಿಷ್ಟೇ ನಿರ್ಭಯವಾದಂತ ವರದಿಗಳು ಪ್ರಾಣದ ಹಂಗನ್ನೇ ತೊರೆದು ಮಾಡಿದಾಗ ಮತ್ತೊಬ್ಬ ಪತ್ರಕರ್ತ ನನ್ನ ಬೆಂಬಲಕ್ಕೆ ಬರಲಿಲ್ಲ ವೆಂದು ಯಾಕೆ ನಾವು ಪರಿತಪಿಸಬೇಕು. ಮಾಧ್ಯಮದಿಂದ ಬಂದಂತ ನಾವುಗಳು ನಮ್ಮ ಮಾಧ್ಯಮದವರು ಸಂಕಷ್ಟಕ್ಕೆ ಸಿಲುಕಿರುವಾಗ ನಿಮ್ಮದೊಂದು ಧ್ವನಿ ಇರಲಿ ವಿಜಯಲಕ್ಷ್ಮಿ ಶಿಬರೂರು ರವರೇ ಎಂಬ ನನ್ನ ಮನವಿಯೊಂದಿಗೆ. *ಬಂಗ್ಲೆ ಮಲ್ಲಿಕಾರ್ಜುನ,ಹವ್ಯಾಸಿ ಪತ್ರಕರ್ತರು,ಬೆಂಗಳೂರು.ಮೊ:-9535290300*
About The Author
Discover more from JANADHWANI NEWS
Subscribe to get the latest posts sent to your email.