“
ತಳಕು : ಅಂಬೇಡ್ಕರ್ ಸಾಧನೆ ಯನ್ನು ಕಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಜ್ಞಾನ ದಿನ ಆಚರಣೆ ಮಾಡಲಾಗುತ್ತಿದೆ. ಇದಕ್ಕೆ ಶಿಕ್ಷಣವೇ ಕಾರಣ ಎಂದು ರಾಜ್ಯ ಸಂಚಾಲಕ ಕೆಪಿಸಿಸಿ ಎಸ್ ಸಿ. ವಿಭಾಗದ ವಕೀಲ ಹಿರೇಹಳ್ಳಿ ಟಿ. ಮಲ್ಲೇಶ್ ಹೇಳಿದರು.

ಭಾನುವಾರ ತಳಕು ಸಮೀಪದ ಹಿರೇಹಳ್ಳಿ ಗ್ರಾಮದ ಎ.ಕೆ. ಕಾಲೋನಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ
ವತಿಯಿಂದ ಹಮ್ಮಿಕೊಳ್ಳಲಾಗಿದ್ದ 135ನೇ ಡಾ| ಬಿ.ಆರ್. ಅಂಬೇಡ್ಕರ್ ಮತ್ತು 119ನೇ ಜಗಜೀವನರಾಂ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣದಿಂದ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ. ಸುಮ್ಮನೆ ಕುಳಿತರೆ ಯಾವುದೂ ಮನೆ ಬಾಗಿಲಿಗೆ ಬರುವುದಿಲ್ಲ, ನಾವು ಎಷ್ಟೋ ಶ್ರಮ ವಹಿಸಿ ಕೆಲಸ ಮಾಡುತ್ತೇವೆಯೋ ಅಷ್ಟು ಪ್ರತಿಫಲ ದೊರೆಯುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳ ಬೇಕು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದಾಗ ಮಾತ್ರ ಸಮಾಜದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ.
ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಜಿ. ಶಿವಲಿಂಗಪ್ಪ ಮಾತನಾಡಿದರು
ಡಾ| ಬಿ.ಆರ್. ಅಂಬೇಡ್ಕರ್ 32 ಪದವಿ ಪಡೆದಿದ್ದರು. ಕಾನೂನು ಸಚಿವರಾಗಿ ಹಿಂದೂ ಕೋಡ್ ಬಿಲ್ ರಚಿಸಿದರು. ಮಹಿಳೆಯರಿಗೆ ರಕ್ಷಣೆ ನೀಡಲು ಹೋರಾಡಿದ ಅವರು ಹೋರಾಟಗಾರರು, ಚಿಂತಕರು, ಶಿಕ್ಷಣ ಪ್ರೇಮಿ, ಸಮಾಜಸುಧಾರಕರಾಗಿ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಡಾ.ಬಿ. ಆರ್. ಅಂಬೇಡ್ಕರ್ ರವರ ಕುರಿತು ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್ ಕ್ರಾಂತಿ ಗೀತೆಗಳು ಹಾಡಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎಸ್ ರಾಜಣ್ಣ, ವಕೀಲ ಆರ್. ರುದ್ರಮುನಿ, ಆರೋಗ್ಯ ಇಲಾಖೆ ಕುದಾಪುರ ತಿಪ್ಪೇಸ್ವಾಮಿ, ಬಿಜೆಪಿ ನಾಯಕನಹಟ್ಟಿ ಮತ್ತು ತಳಕು ಮಂಡಲ ಅಧ್ಯಕ್ಷ ಚನ್ನಗಾನಹಳ್ಳಿ ಮಲ್ಲೇಶ್, ತೊರೆಕೋಲಮ್ಮನಹಳ್ಳಿ ಆರ್. ಬಸಪ್ಪ, ಹೂನ್ನೂರು ಮಾರಪ್ಪ,
ತಿಪ್ಪರೆಡ್ಡಿಹಳ್ಳಿ ಎಚ್. ತಿಪ್ಪೇಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ದುರುಗೇಶ್ , ಹಿರೇಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷರಾದ ಜಿ.ರಾಜಣ್ಣ, ಮಂಜಮ್ಮ, ಡಿ. ಚಂದ್ರಪ್ಪ, ಸದಸ್ಯ ಮಲ್ಲೇಶಪ್ಪ, ಹಟ್ಟಿ ಯಜಮಾನರಾದ ಮಲ್ಲಿಕಾರ್ಜುನ, ನಾರಾಯಣ, ಪಾಲೇಶಿ, ಬಸಣ್ಣ,ದಾಸರಯ್ಯರ ದುರುಗಪ್ಪ, ಈಶ್ವರ, ಪೋಟೋ ನಾಗರಾಜ್, ಅಬ್ಬೇನಹಳ್ಳಿ ನಾಗರಾಜ್, ಎತ್ತಿನಹಟ್ಟಿ ಓಬಳೇಶ್ ತಿಪ್ಪೇಸ್ವಾಮಿ, ಭೀಮನಕೆರೆ ನಿಂಗರಾಜ್, ಸೇರಿದಂತೆ ಹಿರೇಹಳ್ಳಿ ಸಮಸ್ತ ಗ್ರಾಮಸ್ಥರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.