July 15, 2026
IMG-20260715-WA0205


ವರದಿ:ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ೨೦೨೬-೨೭ ನೇ ಸಆಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ತಾಲೂಕುಗಳ ಮುಖ್ಯ ಬೆಳೆಯಾಗಿ ಜಿಲ್ಲೆಯ ಚಳ್ಳಕೆರೆ ನೆಲಗಡೆಲೆ (ಶೇಂಗಾ) (ಮಳೆಯಾಶ್ರಿತ), ಚಿತ್ರದುರ್ಗ ಮುಸುಕಿನಜೋಳ (ಮಳೆಯಾಶ್ರಿತ),ಹಿರಿಯೂರು ನೆಲಗಡೆಲೆ (ಶೇಂಗಾ) (ಮಳೆಯಾಶ್ರಿತ) ಸೂರ್ಯಕಾಂತಿ (ಮಳೆಯಾಶ್ರಿತ) ಹೊಳಲ್ಕೆರೆ ಮುಸುಕಿನಜೋಳ (ಮಳೆಯಾಶ್ರಿತ) ರಾಗಿ (ಮಳೆಯಾಶ್ರಿತ),ಮೊಳಕಾಲ್ಮೂರು ನೆಲಗಡೆಲೆ (ಶೇಂಗಾ) (ಮಳೆಯಾಶ್ರಿತ ಹಾಗೂ ಹೊಸದುರ್ಗ ರಾಗಿ (ಮಳೆಯಾಶ್ರಿತ) ಈ ಬೆಳೆಗಳನ್ನು ಮುಂಗಾರು ಹಂಗಾಮಿಗೆ ಗ್ರಾಮ ಪಂಚಾಯಿತಿಗಳನ್ನು ವಿಮಾ ಘಟಕಗಳೆಂದು ಅಧಿಸೂಚನೆ ಮಾಡಲಾಗಿದೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆ.ಡಿ.ಪಿ ಸಭೆಯ ನಂತರ ಆಯೋಜಿಸಲಾಗಿದ್ದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಮುಂಗಾರು-೨೦೨೬ ಯೋಜನೆಗೆ ಸಂಭAದಿಸಿದ ಕರ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಅದೇ ರೀತಿ ಹೋಬಳಿ ಮಟ್ಟದ ವಿಮಾ ಘಟಕಗಳಿಗೆ ಹತ್ತಿ (ನೀರಾವರಿ) ಹತ್ತಿ (ಮಳೆಯಾಶ್ರೀತ) ಹೆಸರು (ಮಳೆಯಾಶ್ರೀತ) ಶೇಂಗಾ (ಮಳೆಯಾಶ್ರೀತ) ಶೇಂಗಾ (ನೀರಾವರಿ) ಉರುಳಿ (ಮಳೆಯಾಶ್ರೀತ) ಮುಸುಕಿನ ಜೋಳ (ನೀರಾವರಿ) ಮುಸುಕಿನ ಜೋಳ (ಮಳೆಯಾಶ್ರೀತ) ನವಣೆ (ಮಳೆಯಾಶ್ರೀತ) ಈರುಳ್ಳಿ (ನೀರಾವರಿ )ಈರುಳ್ಳಿ (ಮಳೆಯಾಶ್ರೀತ) ಈರುಳ್ಳಿ (ನೀರಾವರಿ) ಸಜ್ಜೆ (ಮಳೆಯಾಶ್ರೀತ) ತೊಗರಿ (ಮಳೆಯಾಶ್ರೀತ) ರಾಗಿ (ನೀರಾವ) ರಾಗಿ (ಮಳೆಯಾಶ್ರೀತ) ಕೆಂಪು ಮೆಣಸಿನಕಾಯಿ, ಟೊಮೇಟೊ ಬೆಳೆಗಳಿಗೆ ವಿಮೆಗೆ ನೋಂದಾಯಿಸಲು ಅಧಿಸೂಚನೆ ಮಾಡಲಾಗಿದೆ ಎಂದರು.
ಸಹಾಯಕ ಕೃಷಿ ನಿರ್ಧೇಶಕ ಸಿ.ಎಸ್.ಈಶ ಮಾತನಾಡಿ ಬೆಳೆ ಸಾಲ ಪಡೆಯದ ರೈತರು ಅಂದಾಜು ಆಕ್ಷೇಪಿತ ಬೆಳೆ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲಿ ಬೆಳೆ ವಿಮೆಗೆ ನೋಂದಣಿ ಮಾಡಬಹುದು, ಬೆಳೆ ವಿಮಗೆ ನೋಂದಾಯಿತ ನಂತರ ನೋಂದಣಿ ಮಾಡಿದ್ದ ಬೆಳೆಗೆ ಬದಲಾಗಿ ಬೇರೆ ಬೆಳೆ ಬಿತ್ತನೆ ಮಾಡಿದ್ದಲ್ಲಿ ಯೋಜನೆಯಲ್ಲಿ ಭಾಗವಹಿಸಲು ನಿಗದಿಪಡಿಸಿದ ದಿನಾಂಕದೊಳಗೆ ನೋಂದಾಯಿಸಿದ ಆರ್ಥಿಕ ಸಂಸ್ಥೆಗಳಲ್ಲಿ ವಾಸ್ತವ ಬೆಳೆಯ ಬಿತ್ತನೆ ದೃಢೀಕರಣ ಪತ್ರ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸಬಹುದಾಗಿದೆ ಅಂತಹ ಸಂದರ್ಭದಲ್ಲಿ ಹೆಚ್ಚುವರಿ ವಿಮಾ ಕತ್ತಿನ ವ್ಯತ್ಯಾಸದ ಮೊತ್ತವನ್ನು ರೈತರು ಅಥವಾ ಹೆಚ್ಚುವರಿ ಮಾತ್ತವನ್ಬು ರೈತರು ಪಾವತಿಸಿದ್ದರೆ ಅದನ್ನು ರೈತರಿಗೆ ಮರುಪಾವತಿಸಲು ಅವಕಾಶವಿದೆ ಎಂದರು.
ಈ ಸಂಧರ್ಬದಲ್ಲಿ ತಾಲೂಕು ಪಂಚಾಯಿತಿ ಇ.ಓ ಸುನೀಲ್‌ಕುಮಾರ್, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಮಹಮ್ಮದ್ ಇಸ್ಮಾಯಿಲ್, ಕೆಡಿಪಿ ಸದಸ್ಯರುಗಳಾದ ಪದ್ಮನಾಭ, ಲೋಕೇಶಪ್ಪ, ನಿರಂಜನ್‌ಮೂರ್ತಿ ಉಪಸ್ಧಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading