June 15, 2026
IMG-20241215-WA0167.jpg

ಬೆಂಗಳೂರು ಡಿ15

ರಾಮನನ್ನು ಪಾರಾಯಣ ಮಾಡಿದಷ್ಟು ವಾಲ್ಮೀಕಿ ಅವರ ಅಂತರ್ಗತ ಮೌಲ್ಯಗಳು ಹೆಚ್ಚಾಗುತ ಹೋಗುತ್ತವೆ ಎಂದು ನಿವೃತ್ತ ಕೆ ಎಸ್ ಅಧಿಕಾರಿ ರಘುಮೂರ್ತಿ ಹೇಳಿದರು

ಅವರು ಬೆಂಗಳೂರು ನಗರದ ಮಾರತ್ತಳ್ಳಿಯ ಎಚ್ಎಎಲ್ ವಾಲ್ಮೀಕಿ ನಾಯಕ ನೌಕರರು ಆಯೋಜಿಸಿದ್ದಂತ ವಾಲ್ಮೀಕಿ ಜಯಂತೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಶ್ರೀ ರಾಮಾಯಣ ಮಹಾ ಕಾವ್ಯವನ್ನು ನಾವು ಪಾರಾಯಣ ಮಾಡಿದಷ್ಟು ಮಹರ್ಷಿ ವಾಲ್ಮೀಕಿ ಅವರ ಮೌಲ್ಯಗಳು ಇಮ್ಮಡಿಯಾಗುತ್ತಾ ಹೋಗುತ್ತವೆ ಈ ಮಹಾಕಾವ್ಯ ಶಾಸ್ತ್ರದಲ್ಲದಿದ್ದರೂ ಚರಿತ್ರೆಯಲ್ಲಿ ಬಿಂಬಿತವಾಗಿತ್ತು ಈ ಮಹಾಕಾವ್ಯದಲ್ಲಿ ಬರುವಂತಹ ಪ್ರತಿಯೊಂದು ಸನ್ನಿವೇಶಗಳು ಮನುಷ್ಯನ ಜೀವನಕ್ಕೆ ಜೀವಾಮೃತ ಮತ್ತು ಉತ್ಕರ್ಷವನ್ನು ನೀಡುತ್ತವೆ ಈ ಕಾವ್ಯದಿಂದ ಮೂರು ಅಂಶಗಳು ಬದುಕಿಗೆ ದಾರಿದೀಪವಾಗುತ್ತವೆ ಮೊದಲನೆಯದು ಕಷ್ಟ ಮತ್ತು ಬೆಂಕಿಯ ಸಂಕೋಲೆಗಳಿಂದ ರಾಮ ಸೀತೆಯರು ಕಷ್ಟಕಾರ್ಪಣ್ಯಗಳನ್ನು ಅನುಭವಿಸಿದರು ಕೂಡ ಎಲ್ಲಿಯೂ ಧರ್ಮದ ನೆಲೆಗೆ ಭಂಗ ತರಲಿಲ್ಲ ಎರಡನೆಯದು ರಾವಣನು ಅತಿ ಪರಾಕ್ರಮ ಮತ್ತು ಬುದ್ಧಿವಂತನಾದರೂ ಕೂಡ ಅಧರ್ಮಕ್ಕೆ ಕೈಹಾಕಿ ಮಣ್ಣಲ್ಲಿ ಮಣ್ಣಾಗಿ ಹೋದ ಮೂರನೆಯದು ಆಂಜನೇಯ ದಾಸನಾಗಿದ್ದರೂ ಕೂಡ ಶ್ರೀರಾಮನಲ್ಲಿ ಅನುರತ್ತ ನಾಗಿ ಪರಮ ಶ್ರೇಷ್ಠ ಭಕ್ತನಾದ ಈ ಅಂಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ವಾಲ್ಮೀಕಿ ಮಹರ್ಷಿಗಳು ಶ್ರೀ ರಾಮಾಯಣ ಮಹಾ ಕಾವ್ಯವನ್ನು ಬರೆದದ್ದಕ್ಕೂ ಸಾರ್ಥಕವಾಗುತ್ತದೆ

ವಾಲ್ಮೀಕಿ ಅಂಬೇಡ್ಕರ್ ಬಸವಣ್ಣ ಮುಂತಾದವರು ಅವರ ಜೀವಿತ ಅವಧಿಯಲ್ಲಿ ಭವಿಷ್ಯತ್ತಲ್ಲಿ ಸಮಾಜಕ್ಕೆ ಏನು ಮಾಡಬೇಕು ಅದನ್ನು ಮಾಡಿ ಹೋಗಿದ್ದಾರೆ ಅವರ ಆದರ್ಶಗಳನ್ನು ಇಂದು ನಾವು ಬರೀ ಭಾಷಣಕ್ಕೆ ಸೀಮಿತಗೊಳಿಸಬಾರದು ಕನಿಷ್ಠ ಪಕ್ಷ ಎಲ್ಲ ನೌಕರಗಳು ಮತ್ತು ಅಧಿಕಾರಿಗಳು ನಮ್ಮ ನಮ್ಮ ಊರು ಹಳ್ಳಿಗಳಲ್ಲಿರುವಂತಹ ಶಾಲೆಗಳಲ್ಲಿ ಇರುವಂತಹ ಮೂಲಭೂತ ಸೌಕರ್ಯಗಳನ್ನು ಒಂದು ಬಾರಿ ಅವಲೋಕಿಸಿ ಇವುಗಳಿಗೆ ಒಂದು ಕಾಯ ಕಲ್ಪ ನೀಡಿದಲ್ಲಿ ಸಾರ್ಥಕವೆನಿಸುತ್ತದೆ ಎಂದು ಹೇಳಿದರು
ಬೆಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ ಜಿ ಎಲ್ ಪಾರ್ವತಮ್ಮ ಮಾತನಾಡಿ ಬದುಕಿನ ನೆಲೆಗೆ ವಾಲ್ಮೀಕಿ ಅವರು ಶ್ರೀ ರಾಮಾಯಣದ ಸಂದೇಶದ ಮುಖಾಂತರ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ ಭಾತೃತ್ವ ಸಮನ್ವಯ ಪಿತೃ ವಾತ್ಸಲ್ಯ ಮುಂತಾದವುಗಳನ್ನು ಸಮಾಜಕ್ಕೆ ಅರಿವು ಮೂಡಿಸಿದ್ದಾರೆ ಸರ್ವಕಾಲಕ್ಕೂ ವಾಲ್ಮೀಕಿ ಮತ್ತು ಶ್ರೀ ರಾಮಾಯಣ ಮಹಾ ಕಾವ್ಯ ಮೇಲು ಕೃತಿಯಾಗಿ ಉಳಿಯಲಿದೆ ಅಂಬೇಡ್ಕರ್ ಮತ್ತು ವಾಲ್ಮೀಕಿ ಅವರ ಆಶಯದಂತೆ ನೊಂದವರ ಪರ ಅಧಿಕಾರಿ ನೌಕರರು ನಿಂತು ಸಮಾಜದ ಋಣ ತೀರಿಸುವ ಕೆಲಸ ಮಾಡಬೇಕು ಎಂದರು

ಎಚ್ಎಎಲ್ ಹೆಲಿಕ್ಯಾಪ್ಟರ್ ವಿಭಾಗದ ಮಹಾಪ್ರಬಂದಕರಾದ ರಮೇಶ್ ಮಾತನಾಡಿ ಈ ನೌಕರರ ಸಂಘದ ವತಿಯಿಂದ ಇಂತಹ ಒಂದು ಅತ್ಯದ್ಭುತ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದರು ಗೌರವ ಸಾನಿಧ್ಯ ವಹಿಸಿದ್ದಂತ ವಾಲ್ಮೀಕಿ ಬೃಹನ್ ಮಠ ಚಿಕ್ಕಬಳ್ಳಾಪುರದ ಬ್ರಹ್ಮಾನಂದ ಸ್ವಾಮೀಜಿ ಮಾತನಾಡಿ ತ್ಯಾಗ ಮತ್ತು ಬಲಿದಾನಗಳಿಗೆ ಮತ್ತೊಂದು ಹೆಸರೇ ವಾಲ್ಮೀಕಿ ಸಮುದಾಯ ಹಲಗಲಿ ಬೇಡರು ಮದಕರಿ ನಾಯಕ ರಾಷ್ಟ್ರಪ್ರೇಮಕ್ಕೆ ಸಾಕ್ಷಿ ಈ ಜನಾಂಗಕ್ಕೆ ಇನ್ನೂ ಹೆಚ್ಚಿನ ಮೀಸಲಾತಿ ಅಗತ್ಯ ಸಮಾಜ ಇನ್ನೂ ಹೆಚ್ಚು ಹೆಚ್ಚು ಸಂಘಟಿತರಾಗಬೇಕೆಂದು ಕರೆ ನೀಡಿದರು
ಎಚ್ ಎ ಎಲ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಕೆಸಿ ನಾಗರಾಜು ಮತ್ತು ಎಚ್ಎಎಲ್ ಸಂಸ್ಥೆಯ ನೌಕರರ ಸಂಘದ ಅಧ್ಯಕ್ಷರಾದ ಎನ್ ಕೇಶವಮೂರ್ತಿ ಮಾತನಾಡಿದರು ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷರಾದ ವಿ ಸಿ ರಾಜಣ್ಣ ಮತ್ತು ಸಂಘದ ಗೌರವಾನ್ವಿತ ಪದಾಧಿಕಾರಿಗಳಾದ ಲೋಕೇಶ್ ಯರಮಂಚ ನಾಯಕ ಕೊಟ್ರೇಶ್ವರ ನಾಗರಾಜು ರಮೇಶ್ ಭಾಗ್ಯ ನೀತಾ ಅಣ್ಣಪ್ಪ ಮುಂತಾದವರು ಉಪಸ್ಥಿತರಿದ್ದರು ನಿವೃತ್ತಿ ಹೊಂದಿದಂತ ಎಲ್ಲ ನೌಕರರಿಗೆ ಮತ್ತು ಅತಿ ಹೆಚ್ಚು ಅಂಕ ಪಡೆದಂತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading