ನಾಯಕನಹಟ್ಟಿ-: ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅಗತ್ಯವಾದ ಸಂವಿಧಾನ ನೀಡಿದವರು ಸಂವಿಧಾನ ಶಿಲ್ಪಿ ಡಾಕ್ಟರ್ ಬಿ ಅಂಬೇಡ್ಕರ್ ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಓ ಶ್ರೀನಿವಾಸ್ ತಿಳಿಸಿದರು.

ಮಂಗಳವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಜಾಗನೂರಹಟ್ಟಿ ಗ್ರಾಮದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಂಘ ವತಿಯಿಂದ ಆಯೋಜಿಸಿದ್ದ 135 ನೇ ಜಯಂತಿ ಕಾರ್ಯಕ್ರಮದಲ್ಲಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವಿಶೇಷ ಪೂಜ್ಯ ಸಲ್ಲಿಸಿ, ನಂತರ ಮಾತನಾಡಿದರು. ಡಾಕ್ಟರ್ ಬಿಆರ್ ಅಂಬೇಡ್ಕರ್ ಕೇವಲ ಒಂದು ಜಾತಿಗೆ ಸೀಮಿತವಲ್ಲ ದೇಶದಲ್ಲಿನ ಎಲ್ಲಾ ಜಾತಿಯ ಧರ್ಮ ಪ್ರಾಂತ್ಯದವರು ಉತ್ತಮವಾದ ಬದುಕನ್ನು ಕಟ್ಟಿಕೊಳ್ಳಲು ಅಗತ್ಯವಾದ ಸಮಾನ ಹಕ್ಕುಗಳ ಸಂವಿಧಾನವನ್ನು ನೀಡಿದ್ದಾರೆ ಬಡತನ ನಿವಾರಣೆ ಯಾಗ ಬೇಕಾದಲ್ಲಿ ಮೊದಲು ಶಿಕ್ಷಣ ನಂತರ ಸಂಘಟನೆ ಹೋರಾಟಗಳಿಂದ ಸಮ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವೆಂದು ಗ್ರಾಮಸ್ಥರಿಗೆ ಸಲಹೆ ನೀಡಿದರು.

ಪಟ್ಟಣ ಪಂಚಾಯತಿ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಪಿ. ತಿಪ್ಪೇಸ್ವಾಮಿ, ಸದಸ್ಯ ಎಂ ಟಿ ಮಂಜುನಾಥ್,
ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಘಟಕ ಅಧ್ಯಕ್ಷ ಬಿ.ಟಿ. ಪ್ರಕಾಶ್, ಕರವೇ ಕನ್ನಡ ಸೇನೆ ತಾಲೂಕು ಘಟಕ ಅಧ್ಯಕ್ಷ ಪಿ ಮುತ್ತಯ್ಯ, ಶಿಕ್ಷಕ ತಿಮ್ಮರಾಯಪ್ಪ, ಪಟ್ಟಣ ಪಂಚಾಯತಿ ದ್ವಿತೀಯ ದರ್ಜೆ ಸಹಾಯಕ ಟಿ.ಟಿ. ತಿಪ್ಪೇಸ್ವಾಮಿ, ಹಟ್ಟಿಯ ಯಜಮಾನರಾದ ಕೆಂಗಣ್ಣ, ಐಯ್ಯಣ್ಣ,ಟಿ .ತಿಪ್ಪೇಸ್ವಾಮಿ, ಎಚ್. ಮಲ್ಲೇಶಪ್ಪ ,ಪಿ ತಿಪ್ಪೇಸ್ವಾಮಿ, ಮಾರಪ್ಪ, ಉಚ್ಚಂಗಿ, ಎನ್ ಡಿ. ವೀರೇಶ್, ಟಿ ,ಮಲ್ಲೇಶ್, ಅನಂತ ರಾಜ್ ಎಚ್. ರುದ್ರಪ್ಪ, ಎ ಮನ್ಮಥ, ಸೇರಿದಂತೆ ಡಾ. ಬಿಆರ್ ಅಂಬೇಡ್ಕರ್ ಸಂಘದ ಯುವಕರು, ಮಹಿಳೆಯರು, ಸೇರಿದಂತೆ ಸಮಸ್ತ ಜಾಗನೂರಹಟ್ಟಿ ಗ್ರಾಮಸ್ಥರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.