November 9, 2026
FB_IMG_1794238791031


ಹಿರಿಯೂರು :
ತಾಲೂಕಿನ ಬಿರೇನಹಳ್ಳಿ ಜಾಲಿಕಟ್ಟೆಗೆ ಭದ್ರಾ ನೀರನ್ನು ಒಂದು ವಾರದ ಒಳಗಾಗಿ ಹರಿಸದಿದ್ದರೆ ಮುಂಬರುವ ಹಿರಿಯೂರು ಉಪಚುನಾವಣೆ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಧರಣಿ ನಡೆಸಿ ಎಚ್ಚರಿಕೆ ನೀಡಿದರು.
ಬೀರೇನಹಳ್ಳಿ ಸುತ್ತಮುತ್ತ ಇರುವ ಕಾಟನಹಟ್ಟಿ, ಕರಿಯಣ್ಣನಹಟ್ಟಿ, ಮೂಗಜ್ಜನಹಟ್ಟಿ, ಶಿವಪುರ, ಎ.ವಿ.ಕೊಟ್ಟಿಗೆ, ಗ್ರಾಮದ ಹೊಲಗಳ ಸಲುವಾಗಿ ಜಾಲಿಕಟ್ಟೆಗೆ ನೀರು ಬಿಟ್ಟರೆ ಅನುಕೂಲವಾಗುತ್ತದೆ. ಈ ಗ್ರಾಮಗಳ ಸುತ್ತಮುತ್ತ ಇರುವ ಅಡಿಕೆ, ಬಾಳೆ, ದಾಳಿಂಬೆ, ಪಪ್ಪಾಯಿ ಇತ್ಯಾದಿ ಬೆಳೆಗಳಿಗೆ ಅನುಕೂಲವಾಗುತ್ತದೆ.
ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೆಳೆಗಳಿಗೆ ನೀರಿಲ್ಲದೆ ಬೆಳೆ ಹಾನಿಯಾಗುವ ಸಂಭವವಿದೆ, ಆದ್ದರಿಂದ ತುರ್ತಾಗಿ ಒಂದು ವಾರದ ಒಳಗಾಗಿ ಬಿರೇನಹಳ್ಳಿ ಜಾಲಿಕಟ್ಟೆಗೆ ಭದ್ರಾ ನೀರನ್ನು ಹರಿಸಬೇಕು ತಪ್ಪಿದಲ್ಲಿ ಮುಂಬರುವ ಹಿರಿಯೂರು ಉಪಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ ಎಂಬುದಾಗಿ ಧರಣಿ ನಿರತರು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಕೆ.ರಾಮಯ್ಯ, ಕೆ.ಜಿ.ಹನುಮಂತರಾಯ, ಗ್ರಾಮಸ್ಥರಾದ ಶ್ರೀನಿವಾಸ್, ನಾಗೇಂದ್ರಪ್ಪ, ಪುಟ್ಟಸ್ವಾಮಿ, ಉಮೇಶ್, ವಿಜಯ್, ಕಂಠೀರವ, ರಾಜಣ್ಣ, ನರೇಂದ್ರಬಾಬು, ನಿಜಲಿಂಗಪ್ಪ, ಕೆ.ಎಸ್.ಶಿವಲಿಂಗಪ್ಪ, ಶಿವರಾಜು, ಮಂಜುನಾಥ್, ಜೈರಾಮ್, ಚಿದಾನಂದಪ್ಪ, ಸತೀಶ್, ರಮೇಶ್, ಪ್ರವೀಣ್ ಕುಮಾರ್, ವಿನಯ್, ಹನುಮಂತಪ್ಪ, ಬಸವಲಿಂಗಪ್ಪ, ರಂಗನಾಥ್, ತಿಪ್ಪೇಸ್ವಾಮಿ, ಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading