ಹಿರಿಯೂರು :
ದುಷ್ಟ ರಾಕ್ಷಸನಾದ ನರಕಾಸುರನನ್ನು ಸಂಸಾರ ಮಾಡಿ, ದೈವಶಕ್ತಿಯ ಮಹಿಮೆಯನ್ನು ಸಾರುವ ದೀಪಾವಳಿ ಹಬ್ಬವನ್ನು ನಮ್ಮ ಮನೆಯ ಹಾಗೂ ಮನದ ಅಂಧಕಾರವನ್ನು ದೂರಮಾಡಿ ಬೆಳಕಿನತ್ತ ಕೊಂಡೊಯ್ಯಲಿ ಎಂದು ನಮ್ಮ ಮನೆಯ ಸುತ್ತಲೂ ದೀಪಗಳನ್ನು ಹಚ್ಚಿ ಬೆಳಗಿಸುವ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸೋಣ ಎಂಬುದಾಗಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಆಲೂರುಹನುಮಂತರಾಯಪ್ಪ ಹೇಳಿದರು.
ನಗರದ ವಾಣಿವಿಲಾಸ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಎಲ್.ಕೆ.ಜಿ. ಹಾಗೂ ಯು.ಕೆ.ಜಿ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ “ದೀಪಾವಳಿ ಸಂಭ್ರಮಾಚರಣೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಅವರು ಮಾತನಾಡಿದರು.
ದೀಪಾವಳಿ ಹಬ್ಬದಲ್ಲಿ ಪಟಾಕಿ ಹೊಡೆದು, ಸುತ್ತಲ ಪರಿಸರವನ್ನು ಹಾಳು ಮಾಡುವುದರ ಜೊತೆಗೆ ನಾವು ಸಿಡಿಸುವ ಪಟಾಕಿ ಮದ್ದುಗಳು ಎಷ್ಟೋ ಬಾರಿ ಹಚ್ಚುವವರ ಕಣ್ಣುಗಳಿಗೆ ಈ ಪಟಾಕಿಗಳು ಸಿಡಿದು, ಕಣ್ಣುಗಳೇ ಹೋಗಿರುವ ಘಟನೆ ನಡೆದಿದೆ, ಆದ್ದರಿಂದ ಪಟಾಕಿಯಂತಹ ಹಾನಿಕಾರಕ ವಸ್ತುಗಳಿಂದ ದೂರವಿದ್ದು, ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂಬುದಾಗಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕರಾದ ಶ್ರೀಮತಿ ಸೌಮ್ಯ, ವ್ಯವಸ್ಥಾಪಕಿ ಶ್ರೀಮತಿ ವಸಂತಾ, ಆಡಳಿತಾಧಿಕಾರಿ ಶ್ರೀಮತಿ ಹೇಮಲತಾ, ಶಿಕ್ಷಕ ಉಮೇಶ್ ಯಾದವ್, ಶಿವರಾಜ್ ನಾಯಕ್, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಭಾಗ್ಯ, ಶ್ರೀಮತಿ ಜಯಸುಧಾ, ಪೂಜಾ, ಮಮತಾ, ಸುರೇಶ್ ಸೇರಿದಂತೆ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.
