ನಾಯಕನಹಟ್ಟಿ:- ಸ್ವಸಹಾಯ ಸಂಘಗಳಿಂದ ಪ್ರತಿಯೊಬ್ಬರಿಗೂ ಉತ್ತಮವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ನಾಯಕನಹಟ್ಟಿ ಕೆನರಾ ಬ್ಯಾಂಕ್ ಮ್ಯಾನೇಜರ್ ಶಿವಕುಮಾರ್ ತಿಳಿಸಿದರು.








ಪಟ್ಟಣದಲ್ಲಿ ಸೋಮವಾರ ಮೈರಾಡ ಕಚೇರಿ ಸಂಪನ್ಮೂಲ ಕೇಂದ್ರದಲ್ಲಿ ಅಜಾದ್ ಸ್ವ ಸಹಾಯ ಸಂಘದ ಹತ್ತನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿ ಮಾತನಾಡಿದ ಅವರು. ಸ್ವ ಸಹಾಯ ಸಂಘಗಳು ಹೆಚ್ಚಿನ ಆದಾಯ ಮೂಲ ಹೊಂದಲು ಸರ್ವ ಸದಸ್ಯರ ಸಹಕಾರ ಅತಿ ಮುಖ್ಯವಾಗಿರುತ್ತದೆ. ಅಜಾದ್ ಸ್ವ ಸಹಾಯ ಸಂಘದ ಪದಾಧಿಕಾರಿಗಳು
ಪಟ್ಟಣದ ಕೆನರಾ ಬ್ಯಾಂಕಿನಲ್ಲಿ ಸಾಲ ಸೌಲಭ್ಯವನ್ನು ಪಡೆಯುವ ಮೂಲಕ ಇತರರಿಗೆ ಪ್ರೇರಣೆಯಾಗಬೇಕು ಎಂದರು.
ಕೆನರಾ ಬ್ಯಾಂಕ್ ಫೀಲ್ಡ್ ಆಫೀಸರ್ ಪ್ರಿಯಾಂಕ ಮಾತನಾಡಿದರು. ಹೋಬಳಿಯಲ್ಲಿ ಸುಮಾರು 10 ಸ್ವಸಹಾಯ ಸಂಘಗಳು ಕೆನರಾ ಬ್ಯಾಂಕಿನಲ್ಲಿ ಉತ್ತಮವಾಗಿ ವ್ಯವಹಾರವನ್ನು ಮಾಡುತ್ತಿದ್ದಾರೆ ಅದರಲ್ಲಿ ಅಜಾದ್ ಸ್ವ ಸಹಾಯ ಸಂಘ ಪುರುಷರು ಪದಾಧಿಕಾರಿಗಳು ಉತ್ತಮವಾಗಿ ವ್ಯವಹಾರವನ್ನು ನಡೆಸಿದ್ದು ಇಂದು ಹತ್ತನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮ ಸಡಗರದಿಂದ ಆಚರಿಸುವುದು ಶ್ಲಾಘನೆಯ ಎಂದರು.
ಇದೇ ವೇಳೆಯಲ್ಲಿ ಆಜಾದ್ ಸ್ವ – ಸಹಾಯ ಸಂಘದ ಅಧ್ಯಕ್ಷ ಕೆ.ಎಚ್.ಜಬೀವುಲ್ಲಾ, ಉಪಾಧ್ಯಕ್ಷ ಬಿ.ನೂರುಲ್ಲಾ, ಸದಸ್ಯರಾದ, ಇರ್ಫಾನ್, ಎಂ.ಅಲ್ಲಾಬಕ್ಷಿ, ಯಾಖೂಬ್,ಅಲ್ಲಾಬಕ್ಷಿ, ಕಲೀಂವುಲ್ಲಾ, ಜಬೀವುಲ್ಲಾ, ಸಾದತ್, ಇಸ್ಮಾಯಿಲ್, ಮೈರಾಡ ಕಚೇರಿಯ ಸಿಬ್ಬಂದಿಗಳಾದ ಬಾಲರಾಜ್, ಟಿ.ಓ. ಲಕ್ಷ್ಮಿ, ಟಿ. ವಿಜಯಮ್ಮ, ಕೆನರಾ ಬ್ಯಾಂಕ್ ಸಿಬ್ಬಂದಿ ನಲಗೇತನಹಟ್ಟಿ ಎಂ. ಬಿ.ಮಹಾಸ್ವಾಮಿ. ಸೇರಿದಂತೆ ಇತರರು
ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.
