ನಾಯಕನಹಟ್ಟಿ-: ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಆಡಳಿತ ಪೂರ್ತಿ ಕುಸಿದಿದೆ ಅಭಿವೃದ್ಧಿ ಕುಂಠಿತವಾಗಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಜೆ ಆರ್ ರವಿಕುಮಾರ್ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದರು



ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಜೆಆರ್ ರವಿಕುಮಾರ್ ಪಟ್ಟಣ ಪಂಚಾಯತಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ನಡೆದಿಲ್ಲ ಆಡಳಿತ ವ್ಯವಸ್ಥೆ ಕುಸಿದಿದೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಚುರುಕುಗೊಳ್ಳಬೇಕು.
ತಂಬಾಕು ಉತ್ಪನ್ನಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ 18 ವರ್ಷದ ದೋಳಗಿನವರಿಗೆ ತಂಬಾಕು ಉತ್ಪನ್ನ ವಸ್ತುಗಳನ್ನು ಮಾರಾಟ ಮಾಡಬಾರದೆಂದು ನಿಯಮವಿದ್ದರೂ ಸಹ ತಂಬಾಕು ಮಾರಾಟ ಮಾಡುವವರು ಪಾಲಿಸುತ್ತಿಲ್ಲ ಇದನ್ನು ಪಂಚಾಯಿತಿಯವರು ಯಾಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಇಲ್ಲಿಯವರೆಗೂ ಎಷ್ಟು ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಿದ್ದೀರಿ ಎಷ್ಟು ದಂಡ ವಸೂಲಿ ಮಾಡಿದ್ದೀರಿ . ಪಂಚಾಯತಿಯಲ್ಲಿ ಅವಧಿಗೆ ಸರಿಯಾಗಿ ಯಾವುದೇ ಕೆಲಸವಾಗುತ್ತಿಲ್ಲ ಎಲ್ಲೆಂದರಲ್ಲಿ ಕಸದ ರಾಶಿಗಳು ಬಿದ್ದಿವೆ ಸ್ವಚ್ಛತೆ ಕಣ್ಮರೆಯಾಗುತ್ತಿದೆ. ಸಾರ್ವಜನಿಕರಿಗೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ ಪರಿಶಿಷ್ಟ ಕಾಲೋನಿಗಳಿಗೆ ಅಭಿವೃದ್ಧಿ ಕೆಲಸಗಳು ಮರೀಚಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಜಾಗನೂರಹಟ್ಟಿ ಎಂ ಟಿ ಮಂಜುನಾಥ್ ಮಾತನಾಡಿ ಎರಡು ವರ್ಷಗಳ ಅವಧಿಯಲ್ಲಿ ಪಟ್ಟಣ ಪಂಚಾಯಿತಿಯು ಕೇವಲ ಆರು ಸಾಮಾನ್ಯ ಸಭೆಗಳನ್ನು ನಡೆಸಿದ್ದು ಈ ಸಾಮಾನ್ಯ ಸಭೆಗಳಲ್ಲಿ ಅನುಮೋದನೆಗೊಂಡ ಕಾಮಗಾರಿಗಳು ಅಥವಾ ಕ್ರಿಯಾಯೋಜನೆಗಳು ಯಾವುದೇ ರೀತಿಯಲ್ಲಿ ಅನುಷ್ಠಾನಗೊಂಡಿಲ್ಲ ಇಂತಹ ಸಾಮಾನ್ಯ ಸಭೆಗಳು ಯಾರಿಗೆ ಬೇಕು ? ಒಂದನೇ ವಾರ್ಡಿನಲ್ಲಿ ಕುಡಿಯುವ ನೀರು ಸಮಸ್ಯೆ ಇದೆ ಎಂದು ಮುಖ್ಯ ಅಧಿಕಾರಿಗಳ ಜೊತೆ ಮಾತನಾಡಿದರೆ ಅಧ್ಯಕ್ಷರ ಮೇಲೆ ಹೇಳುತ್ತಾರೆ ಅಧ್ಯಕ್ಷರ ಜೊತೆ ಮಾತನಾಡಿದರೆ ಜಾರಿಕೆ ಉತ್ತರವನ್ನು ನೀಡುತ್ತಾರೆ ಯಾರೊಂದಿಗೆ ಚರ್ಚಿಸಬೇಕೆನ್ನುವುದು ನಮಗೆ ತಿಳಿಯುತ್ತಿಲ್ಲ ಇನ್ನು ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ನಾಗರಿಕರಿಗೆ ನಾವು ಹೇಗೆ ನ್ಯಾಯವನ್ನು ಒದಗಿಸಬೇಕು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಅಧಿಕಾರಿಗಳು ಹುಡುಗಾಟ ಹಾಕ್ತಿರಾ ಕೆಲಸ ಮಾಡುವುದಾದರೆ ಮಾಡಿ ಇಲ್ಲವಾದರೆ ಬಿಟ್ಟು ಹೋಗಿ ಯಾರು ಮನೆಯಿಂದ ಹಣ ತಂದು ಕೆಲಸ ಮಾಡುತ್ತಿಲ್ಲ ಸರ್ಕಾರದ ಅನುದಾನದಲ್ಲಿ ಅಭಿವೃದ್ಧಿ ಕೆಲಸ ಮಾಡಿ.ನಾಯಕನಹಟ್ಟಿ ಮುಂದಿನ ದಿನಗಳಲ್ಲಿ ಪುರಸಭೆ,ನಗರಸಭೆ ಆಗುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ ಆದ್ದರಿಂದ ಪಟ್ಟಣಕ್ಕೆ ಹೊಂದಿಕೊಂಡಿರುವ 5 ಎಕರೆ ಎಷ್ಟು ಸರ್ಕಾರಿ ಭೂಮಿಯನ್ನ ಪಟ್ಟಣ ಪಂಚಾಯಿತಿಗೆ ಮೀಸಲಿಡುವಂತೆ ಅಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಬೇಕೆಂದು ಹೇಳಿದರು ಜೊತೆಗೆ ಮತ್ತೋರ್ವ ಸದಸ್ಯ ಓಬಯ್ಯ ದಾಸ ಧ್ವನಿಗೂಡಿಸಿದರು.ಮೌಲಾನ ಆಜಾದ್ ವಸತಿ ಶಾಲೆಗೆ ಈಗಾಗಲೇ ಸರ್ಕಾರದಿಂದ ಕಟ್ಟಡ ನಿರ್ಮಾಣ ಮಾಡಲು ಭೂಮಿ ಮಂಜೂರು ಮಾಡಲಾಗಿದೆ ಆದರೆ ಕಟ್ಟಡದ ಕೊರತೆಯಿಂದ ತಾತ್ಕಾಲಿಕವಾಗಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮೈರಾಡ ಕಚೇರಿಯ 5 ಅಥವಾ 6 ಕೊಠಡಿಗಳನ್ನು ತಾತ್ಕಾಲಿಕವಾಗಿ ಮೌಲಾನ ಆಜಾದ್ ವಸತಿ ಶಾಲೆಗೆ ಬಿಡಿಸಿ ಕೊಡಬೇಕೆಂದು ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ಅನ್ವರ್ ರವರು ಒತ್ತಾಯಿಸಿದರು .6ನೇ ವಾರ್ಡಿನ ಸದಸ್ಯೆ ಈರಕ್ಕ ಮಾತನಾಡಿ ಈವರೆಗೂ ನನ್ನ ವಾರ್ಡಿನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳಾದ ಚರಂಡಿ ರಸ್ತೆ ಕುಡಿಯುವ ನೀರಿನ ವ್ಯವಸ್ಥೆ ಯಾವುದು ಕಾರ್ಯರೂಪಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಗದ್ದಲದ ನಡುವೆಯೂ ಸಭೆಯಲ್ಲಿ 2023 -24 ಮತ್ತು 2024 – 25ನೇ ಸಾಲಿನ 15ನೇ ಹಣಕಾಸು ಅನುದಾನದಡಿ ತೊಂಬತ್ತೊಂದು ಲಕ್ಷದ ಕ್ರಿಯಾ ಯೋಜನೆಗೆ ಸರ್ವ ಸದಸ್ಯರು ಸಮ್ಮತಿಸಿದರು..
ಕುಡಿಯುವ ನೀರಿನ ಸರಬರಾಜು ಗಾಗಿ ಮಳೆ ನೀರು ಕೊಯ್ಲು ಮತ್ತು ನೀರಿನ ಮರುಬಳಕೆ ಒಳಗೊಂಡಂತೆ ಕಾಮಗಾರಿಗೆ 46 ಲಕ್ಷ. ನೈರ್ಮಲ್ಯ ಮತ್ತು ಘನ ತ್ಯಾಜ್ಯ ವಸ್ತು ನಿರ್ವಹಣೆಗಾಗಿ ಬಳಸಲು 46 ಲಕ್ಷ ಅನುದಾನ ಪ್ರಿಯ ಯೋಜನೆಗಳಿಗೆ ಸಮ್ಮತಿಸಲಾಯಿತು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿಯ. ಉಪಾಧ್ಯಕ್ಷೆ ಬೋಸಮ್ಮ ಮಂಜುನಾಥ್, ಸದಸ್ಯರುಗಳಾದ ಎಂ ಟಿ ಮಂಜುನಾಥ್, ಕೆ.ಪಿ. ತಿಪ್ಪೇಸ್ವಾಮಿ, ಟಿ.ಮಹೇಶ್ವರಿ, ಗುರುಶಾಂತಮ್ಮ, ಬಿ. ವಿನೂತ, ಈರಮ್ಮ, ಪಾಪಮ್ಮ. ಸರ್ವ ಮಂಗಳಮ್ಮ, ಜಿ ಆರ್ ರವಿಕುಮಾರ್, ಸುನಿತಾ ಮುದಿಯಪ್ಪ, ಪಿ.ಓಬಯ್ಯ ದಾಸ್. ನಾಮನಿರ್ದೇಶ ಸದಸ್ಯರುಗಳಾದ ಟಿ. ಓಬಳೇಶ. ವಾಸೀಂ ಅಹಮದ್ ( ಮಾಡ್ರನ್ ಮೆಡಿಕಲ್ ಸ್ಟೋರ್ ಮಾಲೀಕರು ). ಮಹಾಂತಮ್ಮ ಕಾಳಪ್ಪ.
ಸಿಬ್ಬಂದಿ ವರ್ಗದವರಾದ ದ್ವಿತೀಯ ದರ್ಜೆ ಸಹಾಯಕ ಟಿ ತಿಪ್ಪೇಸ್ವಾಮಿ. ಆರೋಗ್ಯ ನಿರೀಕ್ಷಕ ಕೆ ವಿ ತಿಪ್ಪೇಶ್ , ಸಂದೀಪ್, ಅಕೌಂಟೆಂಟ್ ಮಧು, ಲತಮ್ಮ. ರತ್ನಮ್ಮ. ಮತ್ತಿತರರು ಹಾಜರಿದ್ದರು
,,,,,,,,,,,,,,,,,,,,,,,,,,,,,,,,,,,,,,,,,,,,,,,,
ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಓ ಶ್ರೀನಿವಾಸ್ ರವರು ಮಾತನಾಡಿ. ಪಟ್ಟಣ ಪಂಚಾಯಿತಿ ಸದಸ್ಯರುಗಳ ಸರ್ಕಾರದ ಆದೇಶದಂತೆ ಜರೂರಾಗಿ ಚಿರಸ್ತಿ ಮತ್ತು ಚರಸ್ತಿಯ ಮಾಹಿತಿಯನ್ನು ತಪ್ಪದೇ ನೀಡಬೇಕು ಎಂದು ಸರ್ವ ಸದಸ್ಯರಲ್ಲಿ ತಿಳಿಸಿದರು.
ಹಾಗೇನೆ ಸರ್ಕಾರದ ಸುತ್ತೋಲೆಗಳನವ್ವಯ ಮತ್ತು ಹಿರಿಯ ಅಧಿಕಾರಿಗಳ ಆದೇಶದಂತೆ ಕಾರ್ಯವನ್ನು ನಿರ್ವಹಿಸ ಬೇಕೆಂದು ಸಿಬ್ಬಂದಿ ವರ್ಗದವರಿಗೆ ತಿಳಿಹೇಳಿದರು.——————————–ನನ್ನ ಅವಧಿಯಲ್ಲಿ ಯಾವುದೇ ರೀತಿಯ ತೊಂದರೆಗಳಾಗದಂತೆ ಮತ್ತು ಪಂಚಾಯತಿಯ ಅನುದಾನ ವ್ಯರ್ಥವಾಗದಂತೆ ಕಡಿಮೆ ವೆಚ್ಚದಲ್ಲಿ ಜಾತ್ರೆಯ ಕಾರ್ಯಗಳನ್ನು ನಡೆಸಿಕೊಂಡಿದ್ದೇವೆ ಮತ್ತು ಯಾವುದೇ ರೀತಿಯ ಹಗರಣಗಳಿಗೆ ಅನುವು ಮಾಡಿಕೊಡದಂತೆ ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ.ಟಿ ಮಂಜುಳಾ ಶ್ರೀಕಾಂತ್
ಅಧ್ಯಕ್ಷೆ
ಪಟ್ಟಣ ಪಂಚಾಯಿತಿ
About The Author
Discover more from JANADHWANI NEWS
Subscribe to get the latest posts sent to your email.