ಹಿರಿಯೂರು :
ಕಳೆದ 69 ವರ್ಷಗಳಿಂದ ಭಾರತೀಯ ಜೀವವಿಮಾ ನಿಗಮವು ದೇಶದ ಆರ್ಥಿಕ ಪ್ರಗತಿಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಿದೆ, ಜನರ ನಂಬಿಕೆ ಮತ್ತು ವಿಶ್ವಾಸವನ್ನು ಗಳಿಸುವಲ್ಲಿ ಎಲ್.ಐ.ಸಿಯು ಪ್ರಮುಖ ಪಾತ್ರವನ್ನು ನಿರ್ವಹಿಸಿದೆ ಎಂಬುದಾಗಿ ಹಿರಿಯ ಶಾಖಾಧಿಕಾರಿಗಳಾದ ಎಂ.ಖಲೀಲ್ ಅಹಮದ್ ಹೇಳಿದರು.
ನಗರದ ಭಾರತೀಯ ಜೀವವಿಮಾ ನಿಗಮ ಕಚೇರಿಯಲ್ಲಿ 70ನೇ ಸಂಸ್ಥಾಪನ ದಿನಾಚರಣೆಯ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ, ನಂತರ ಅವರು ಮಾತನಾಡಿದರು.
ಸರ್ಕಾರಿ ಸ್ವಾಮ್ಯದ ವಿಮಾಸಂಸ್ಥೆಗಳಲ್ಲಿ ಎಲ್.ಐ.ಸಿ.ಯು ಕಳೆದ 69 ವರ್ಷಗಳಿಂದ ನಂಬಿಕೆಯನ್ನು ಹೊಂದಿದ್ದು, ಜನರ ವಿಶ್ವಾಸದೊಂದಿಗೆ 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂಬುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅತ್ಯಂತ ಹಿರಿಯ ಪ್ರತಿನಿಧಿಗಳಾದ ನಾಲ್ಕು ದಶಕಗಳ ಸೇವೆಯನ್ನು ಸಲ್ಲಿಸಿದ ಜನಾರ್ಧನ ಶೆಟ್ಟಿ, ತಿಮ್ಮಯ್ಯ, ಜಯಕುಮಾರ್, ಕಚೇರಿಯ ಗ್ರಾಹಕರು ಹಾಗೂ ನಿವೃತ್ತ ಪ್ರಾಂಶುಪಾಲರಾದ ಸದಾಶಿವ ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿಗಳು, ಹಿರಿಯ ಪ್ರತಿನಿಧಿ ಮಿತ್ರರು ಹಾಗೂ ಸಿಬ್ಬಂದಿ ವರ್ಗದವರು ಮತ್ತು ಲಿಯಾಫಿ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.