June 15, 2026
IMG-20241231-WA0054.jpg

ಚಳ್ಳಕೆರೆ : ತಾಲ್ಲೂಕು ಕೃಷಿಕ ಸಮಾಜಕ್ಕೆ ತಾಲ್ಲೂಕು ಅಧ್ಯಕ್ಷರಾಗಿ ಎಂ.ಎಸ್.ನವೀನ, ಉಪಾಧ್ಯಕ್ಷರಾಗಿ ಹೆಂಜೇರರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಕೃಷಿ ಸಹಾಯಕ ನಿರ್ದೇಶಕರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಎಲ್ಲ ನಿರ್ದೇಶಕರು ಸಹಾನುಮತದಿದಂದ ಅಧ್ಯಕ್ಷರಾಗಿ ಎಂ.ಎಸ್.ನವೀನ, ಉಪಾಧ್ಯಕ್ಷರಾಗಿ ಹೆಂಜೇರರೆಡ್ಡಿ, ಕಾರ್ಯದರ್ಶಿ ಸತೀಶ್ ಕುಮಾರ್, ಖಜಾಂಚಿ ಲೋಕೇಶ್, ಜಿಲ್ಲಾ ಪ್ರತಿನಿಧಿಯಾಗಿ ಕೇಶವ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಕೃಷಿಕ ಸಮಾಜಕ್ಕೆ ನಿರ್ದೇಶಕರಾಗಿ ಹೆಚ್, ಕಾಂತರಾಜು,ಗಿರೀಶ್
ಜಗಧೀಶ, ಭೀಮಾರೆಡ್ಡಿ
ರಮೇಶ, ಜಿ.ಹೆಚ್‌. ಲೀಲಾವತಿ,
ವಂಶಿಕೃಷ್ಣ, ವೆಂಕಟೇಶ,
ಶ್ರೀನಿವಾಸರೆಡ್ಡಿ, ಸುಶೀಲಮ್ಮ ಆಯ್ಕೆಯಾಗಿದ್ದಾರೆ. ಸಹಾಯಕ ಕೃಷಿ ನಿರ್ದೇಶಕ ಡಾ.ಅಶೋಕ್ ಇದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading