April 27, 2026
IMG-20260427-WA0069.jpg

ಚಿತ್ರದುರ್ಗ: ಪ್ರಯಾಣಿಕರ ಸುರಕ್ಷತೆಯನ್ನು ಲೆಕ್ಕಿಸದೇ ಲಗೇಜ್ ತುಂಬಿಕೊಂಡು ಸಾಗುತ್ತಿದ್ದ ಖಾಸಗಿ ಬಸ್ ಮೇಲೆ ಚಿತ್ರದುರ್ಗದಲ್ಲಿ ಆರ್‌ಟಿಒ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಭಾನುವಾರ ತಡರಾತ್ರಿ ಖಚಿತ ಮಾಹಿತಿ ಮೇರೆಗೆ ನಡೆದ ಈ ಕಾರ್ಯಾಚರಣೆಯಲ್ಲಿ, ನಿಯಮ ಉಲ್ಲಂಘಿಸಿದ್ದ ಬಸ್ಸಿಗೆ ದಂಡ ವಿಧಿಸಲಾಗಿದೆ.

ಆಂಧ್ರ ಪ್ರದೇಶ ಮೂಲದ ರಾಯದುರ್ಗ – ಮೊಳಕಾಲ್ಮೂರು – ಚಳ್ಳಕೆರೆ – ಧರ್ಮಪುರ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ಈ ಬಸ್, ಚಳ್ಳಕೆರೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರಯಾಣಿಸುತ್ತಿದ್ದ ವೇಳೆ, ಹಿರಿಯೂರು ಸಮೀಪದ ಬಾಲೇನಹಳ್ಳಿ ಬಳಿ ತಡೆದು ಪರಿಶೀಲಿಸಲಾಯಿತು.
ಪರಿಶೀಲನೆಯ ವೇಳೆ ಬಸ್ಸಿನ ಮೇಲ್ಭಾಗದಲ್ಲಿ ಭಾರೀ ಪ್ರಮಾಣದಲ್ಲಿ ಜೀನ್ಸ್ ಬಟ್ಟೆಗಳನ್ನು ತುಂಬಿಕೊಂಡಿರುವುದು ಬೆಳಕಿಗೆ ಬಂದಿದೆ. ಇದಲ್ಲದೆ, ಕೆಲ ಪ್ರಯಾಣಿಕರು ಪುಟ್‌ಬೋರ್ಡ್‌ನಲ್ಲೇ ಮಲಗಿ ಹೋಗಿರುವ ಅಪಾಯಕಾರಿ ದೃಶ್ಯವೂ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಪ್ರಯಾಣಿಕರ ಜೀವಕ್ಕೆ ಅಪಾಯ ಉಂಟುಮಾಡುವ ರೀತಿಯಲ್ಲಿ ಲಗೇಜ್ ಸಾಗಾಟ ಮಾಡಿರುವ ಹಿನ್ನೆಲೆ, ಅಧಿಕಾರಿಗಳು ಬಸ್ಸಿಗೆ ದಂಡ ವಿಧಿಸಿ, ಸಂಬಂಧಿತ ದಾಖಲೆಗಳೊಂದಿಗೆ ಕಚೇರಿಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಗಮನಾರ್ಹವಾಗಿ, ಇಂತಹ ಅಕ್ರಮ ಲಗೇಜ್ ಸಾಗಾಟದ ವೇಳೆ ಹಿಂದೆ ಬೆಂಕಿ ಅವಘಡಗಳು ಸಂಭವಿಸಿ ಅನೇಕರು ಪ್ರಾಣ ಕಳೆದುಕೊಂಡ ಘಟನೆಗಳೂ ನಡೆದಿವೆ. ಆದರೂ ಖಾಸಗಿ ಬಸ್ ಮಾಲೀಕರು ನಿಯಮಗಳನ್ನು ಲೆಕ್ಕಿಸದೇ ಪ್ರಯಾಣಿಕರ ಜೀವದೊಂದಿಗೆ ಆಟವಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಸಾರ್ವಜನಿಕರು ಸಹ ಎಚ್ಚರಿಕೆಯಿಂದ ಪ್ರಯಾಣ ಮಾಡಬೇಕು. ನಿಯಮ ಉಲ್ಲಂಘಿಸುವ ಬಸ್‌ಗಳ ಬಗ್ಗೆ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading