ಚಳ್ಳಕೆರೆ: ನಗರದಲ್ಲಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ಸುಮಾರು 25ರಿಂದ 30 ವರ್ಷದೊಳಗಿನ ಅಪರಿಚಿತ ಯುವಕನ ಅನಾಥ ಶವವು ಕಳೆದ ಮೂರು ದಿನಗಳ ಹಿಂದೆ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.


ಶವ ಪತ್ತೆಯಾದ ನಂತರ, ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು ಮೂರ್ನಾಲ್ಕು ದಿನಗಳವರೆಗೆ ಶವವನ್ನು ಇರಿಸಿ ವಾರಸುದಾರರನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನ ನಡೆಸಿದರು. ಆದರೆ, ಯಾರೂ ಶವದ ಗುರುತು ಅಥವಾ ವಾರಸುದಾರರಾಗಿ ಮುಂದೆ ಬರದ ಹಿನ್ನೆಲೆಯಲ್ಲಿ ಸೋಮವಾರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಪೊಲೀಸರೊಂದಿಗೆ ಆಮ್ ಆದ್ಮಿ ಪಕ್ಷದ ಮುಖಂಡ ಪಾಪಣ್ಣ ಅವರು ಸಹಕಾರ ನೀಡಿದ್ದು, ಅವರ ನೆರವಿನಿಂದ ಶವ ಸಂಸ್ಕಾರ ನೆರವೇರಿಸಲಾಯಿತು. ಅನಾಥ ಶವಗಳ ಸಂಸ್ಕಾರದಲ್ಲಿ ನಿರಂತರವಾಗಿ ಸಹಾಯ ಮಾಡುತ್ತಿರುವ ಪಾಪಣ್ಣ ಅವರ ಸೇವೆಯನ್ನು ಪೊಲೀಸರು ಈ ಸಂದರ್ಭದಲ್ಲಿ ಸ್ಮರಿಸಿದರು.
ಈ ವೇಳೆ ಎಎಸ್ಐ ವೀರಭದ್ರಪ್ಪ, ಮುಖ್ಯಪೇದೆ ಬಿ.ಡಿ. ಮಂಜಣ್ಣ ಹಾಗೂ ಸಿಬ್ಬಂದಿಗಳಾದ ನಾಗರಾಜ್, ದುರ್ಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.