April 26, 2026

ಚಳ್ಳಕೆರೆ ತಾಲ್ಲೂಕಿನ ತಳಕು ಹೋಬಳಿ ಹಿರೇಹಳ್ಳಿ ಗ್ರಾಮದ ಶ್ರೀ ಚಿಂತಾಮಣೇಶ್ವರ ಗ್ರಾಮಾಂತರ ಪ್ರೌಢಶಾಲೆ 2025–26ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಶೇಕಡಾ 94.05% ಫಲಿತಾಂಶ ಸಾಧಿಸಿದೆ.
ಪರೀಕ್ಷೆಗೆ ಹಾಜರಾದ 84 ವಿದ್ಯಾರ್ಥಿಗಳಲ್ಲಿ 79 ಮಂದಿ ಉತ್ತೀರ್ಣರಾಗಿದ್ದಾರೆ.
ಮುಖ್ಯ ಸಾಧನೆ ಮಾಡಿದ ವಿದ್ಯಾರ್ಥಿಗಳು:ಕುಮಾರಿ ಟಿ. ಸಂಕೇತ – 597 ಅಂಕಗಳೊಂದಿಗೆ ಪ್ರಥಮ ಸ್ಥಾನ
ಕುಮಾರಿ ಎನ್‌. ಜ್ಯೋತಿ – 596 ಅಂಕಗಳೊಂದಿಗೆ ದ್ವಿತೀಯ ಸ್ಥಾನ
ಕುಮಾರಿ ಜಿ. ಟಿ. ಜಯಶ್ರೀ – 592 ಅಂಕಗಳೊಂದಿಗೆ ತೃತೀಯ ಸ್ಥಾನ
ಫಲಿತಾಂಶ ವಿವರಗಳು:
12 ಡಿಸ್ಟಿಂಕ್ಷನ್
39 ಪ್ರಥಮ ದರ್ಜೆ
9 ದ್ವಿತೀಯ ದರ್ಜೆ
19 ತೃತೀಯ ದರ್ಜೆ
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಅಧ್ಯಕ್ಷರಾದ ಶ್ರೀ ಡಿ.ಎಸ್. ಜ್ಞಾನೇಶ್ವರ್, ಉಪಾಧ್ಯಕ್ಷರಾದ ಶ್ರೀ ಎಂ.ವಿ. ರುದ್ರಮುನಿ, ಕಾರ್ಯದರ್ಶಿ ಶ್ರೀ ಎಂ. ಜಗದೀಶ್ ಹಾಗೂ ನಿರ್ದೇಶಕರು, ಮುಖ್ಯ ಶಿಕ್ಷಕರಾದ ಶ್ರೀ ಡಿ.ಟಿ. ಶ್ರೀನಿವಾಸನ್, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading