ನಾಯಕನಹಟ್ಟಿ:- ಸಾಮಾಜಿಕ ಸೇವೆಗಳ ಮೂಲಕ ಜೀವನದ ಸಾರ್ಥಕತೆ ಕಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆ ಅವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಎಂ.ವೈ.ಟಿ. ಸ್ವಾಮಿ ಹೇಳಿದರು.
ಗುರುವಾರ ಪಟ್ಟಣದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಒಳಮಠದ ದೇವಾಲಯದಲ್ಲಿ ನಾಯಕನಹಟ್ಟಿ ಯೋಜನಾ ವ್ಯಾಪ್ತಿಯ ವತಿಯಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆ ಅವರ 78ನೇ ಜನ್ಮದಿನದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಮೂಲಕ ನಾಡಿನಾದ್ಯಂತ ಸ್ವ ಸಹಾಯ ಸಂಘಗಳನ್ನು ಕಟ್ಟಿ ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸಾಕ್ಷಿಯಾಗಿದ್ದಾರೆ ಅಲ್ಲದೆ ಧರ್ಮ ಸಂಸ್ಕೃತಿಯ ಸಂರಕ್ಷಣೆಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಬಂದಿದ್ದು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಆರ್ಥಿಕವಾಗಿ ವಸತಿ ಸೌಲಭ್ಯ ಮಧ್ಯವರ್ಜನ ಶಿಬಿರ ನಡೆಸುವ ಮೂಲಕ ಸ್ವಾಸ್ಥ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದು ಅವರ ಸೇವೆ ಮುಂದುವರಿಸಲು ದೇವರು ಆರೋಗ್ಯ ಆಯಸ್ಸು ಕರುಣಿಸಲಿ ಎಂದು ಆಶಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ತಾಲೂಕು ಯೋಜನಾಧಿಕಾರಿ ಜಯಂತ್ ಕುಮಾರ್ ಮಾತನಾಡಿದರು. ಪೂಜ್ಯ ಡಾಕ್ಟರ್ ವೀರೇಂದ್ರ ಹೆಗ್ಡೆ ಅವರ 78ನೇ ಜನ್ಮದಿನದ ಪ್ರಯುಕ್ತ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಶ್ರೀ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿ ಅವರ ಆಶೀರ್ವಾದದಿಂದ ಪೂಜ್ಯರು ಬಡಜನರ ನೀರ್ಗತಿಕರ ಸೇವೆ ಮಾಡಲು ದೇವರು ಆಯುರ್ ಆರೋಗ್ಯ ಕೊಟ್ಟು ಕಾಪಾಡಲಿ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಜನಜಾಗೃತಿ ಸದಸ್ಯರಾದ ಕೆ.ಎಂ. ಶಿವಸ್ವಾಮಿ ,ರಾಜೇಂದ್ರ,
ಕಚೇರಿ ಪ್ರಬಂಧಕ ಲೋಕೇಶ್, ಮೇಲ್ವಿಚಾರಕಿರಾದ ಯಶೋಧ, ಶ್ರೀಮತಿ ಆರ್. ಎನ್. ಶಶಿಕಲಾ, ಜ್ಯೋತಿ, ಗಿರಿಜಾ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಕಮಲಾಕ್ಷಿ ಸೇರಿದಂತೆ ಇತರರು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.
