November 22, 2026
IMG-20261122-WA0409

ನಾಯಕನಹಟ್ಟಿ:- ಹೋಬಳಿಯ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕೊರಡಿಹಳ್ಳಿಯಲ್ಲಿ ಗ್ರಾಮದ ಹೊಸೂರು ಬಡಾವಣೆಯಲ್ಲಿ ವಿಶ್ವಗುರು ಮಹರ್ಷಿ ವಾಲ್ಮೀಕಿ ನಾಮ ಫಲಕ ಅನಾವರಣ ಹಾಗೂ ವಾಲ್ಮೀಕಿ ಜಯಂತೋತ್ಸವಕ್ಕೆ ಗ್ರಾಮಸ್ಥರಿಂದ ಭಾನುವಾರ ಅದ್ದೂರಿಯಾಗಿ ಚಾಲನೆ ನೀಡಲಾಯಿತು.

ಇದೆ ವೇಳೆ ಗ್ರಾಮದ ಮುಖಂಡ ಸುರೇಂದ್ರಪ್ಪ ಮಾತನಾಡಿದರು ಕೊರಡಿಹಳ್ಳಿ ಹೊಸೂರು ಬಡಾವಣೆಯಲ್ಲಿ ಪ್ರಥಮ ಬಾರಿಗೆ ವಿಶ್ವಗುರು ಮಹರ್ಷಿ ವಾಲ್ಮೀಕಿ ನಾಮಫಲಕ ಅನಾವರಣ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಯೋಜಿಸಲಾಗಿದೆ.
ವಿಶ್ವಗುರು ಮಹರ್ಷಿ ವಾಲ್ಮೀಕಿ ತತ್ವ ಆದರ್ಶಗಳನ್ನ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು ಅವರು ಹಾಕಿಕೊಟ್ಟ ಮಾರ್ಗಗಳನ್ನ ಅನುಸರಿಸಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದ ಏಳಿಗೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಾಪಮ್ಮ ಆನಂದಪ್ಪ, ಶಿಕ್ಷಕ ನಲಗೇತನಹಟ್ಟಿ ಜಿ.ವೈ ತಿಪ್ಪೇಸ್ವಾಮಿ, ಗ್ರಾಮಸ್ಥರಾದ ಸೂರಯ್ಯ ಕೋಟೆ, ಟೈಲರ್ ಓಬಯ್ಯ, ಬಿ.ಎಸ್. ರಾಜಣ್ಣ, ಭಜನೆ ಪಾಲಯ್ಯ, ರವಿಚಂದ್ರ, ಆನಂದಪ್ಪ, ಪಿ.ಎಸ್. ರಾಜಣ್ಣ, ತಿಪ್ಪೇಸ್ವಾಮಿ, ಸಣ್ಣ ಪಾಪಯ್ಯ, ನಾಗೇಶಪ್ಪ, ಬಿ.ಎಸ್. ಸೂರಪಾಪಯ್ಯ, ಸುನಿಲ್, ಸುದೀಪ್, ರೇವಣ್ಣ, ಡ್ರೈವರ್ ತಿಪ್ಪೇಸ್ವಾಮಿ, ಸೂರಯ್ಯ, ಕರಿಬಸಪ್ಪ, ನಾಗೇಶ್, ಮುತ್ತಪ್ಪ, ಮಲ್ಲಿಕಾರ್ಜುನ, ಸಿದ್ದಪ್ಪ, ತಮ್ಮಣ್ಣ, ರಘು,ಎಸ್. ಪಾಪಣ್ಣ ಭೂಪಾಲಯ್ಯ , ರವಿಕುಮಾರ್ ನಾಗರಾಜ್ ರಮೇಶ್ ಸೇರಿದಂತೆ, ಸಮಸ್ತ ಕೊರಡಿಹಳ್ಳಿ ಹೊಸೂರು ಬಡಾವಣೆಯ ಗ್ರಾಮಸ್ಥರು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading