ಚಳ್ಳಕೆರೆ ಅ.25 ಮಾದಿಗ ಸಮುದಾಯಕ್ಕೆ ಸೇರಿದ ಆಸ್ತಿ ಒತ್ತುವರಿ ತೆರವುಗೊಳಿಸಿ ಸಮಾಜಕ್ಕೆ ನೀಡುವಂತೆ ಆಗ್ರಹಿ ನಗರಸಭೆ ಕಚೇರಿ ಮುಂದೆ ಮಾದಿಗ ಮಾಸಭಾ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಿದರು.
ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಬಹುದೊಡ್ಡ ಸಮುದಾಯ ಮಾದಿಗ
ಸಮುದಾಯ, ನಮ್ಮ ಜನಾಂಗದ ಪೂರ್ವಿಕರು, ಮಾದಿಗ ಸಮಾಜದ ಆರ್ಥಿಕ ಅಭಿವೃದ್ಧಿ ಸ್ವಯಂ ಉದ್ಯೋಗಕ್ಕಾಗಿ ಚಳ್ಳಕೆರೆ ನಗರದಲ್ಲಿ ಚರ್ಮ ಹದ ಮಾಡುವ ಕೈಗಾರಿಕೆ ಚರ್ಮ ಮಾರಾಟ ಮಾಡುವ ಮಳಿಗೆಗಳನ್ನು ನಿರ್ಮಿಸಿರುತ್ತಾರೆ, ಇದು ಮಾದಿಗ ಸಮಾಜಕ್ಕೆ ಸೇರಿರುವ ಆಸ್ತಿ ಎನ್ನುವುದಕ್ಕೆ ಸರ್ಕಾರಿ ದಾಖಲಾತಿಗಳಲ್ಲಿ ಲಭ್ಯವಾಗಿವೆ, ಉಸ್ತುವಾರಿ ನಿರ್ಲಕ್ಷದಿಂದ ಈ
ಆಸ್ತಿಗಳ ಮೇಲೆ ಮಾದಿಗ ಸಮಾಜ ನಿಗಾ ವಹಿಸದ ಕಾರಣ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಕಾನೂನು ಬಾಹಿರ ಅತಿಕ್ರಮಣ ಮಾಡುವ ಉನ್ನಾರ ನಡೆಸಿರುತ್ತಾರೆ, ಅಲ್ಲದೇ ಈ ಆಸ್ತಿಗಳನ್ನು
ತಮ್ಮ ಧರ್ಮೀಯ ಸಂಘಟನೆಗೆ ಸೇರಿಸಲು ಕಾನೂನು ಬಾಹಿರ ಹುನ್ನರ ನಡೆಸಿರುತ್ತಾರೆ,
ಮಾದಿಗ ಸಮಾಜದ ಈ ಅಸ್ತಿಗಳನ್ನು ಸಂರಕ್ಷಣೆ ಮಾಡಬೇಕಾದ ಇಲಾಖೆಗಳು ಅದರಲ್ಲಿ
ನಗರಸಭೆ, ನಿರ್ಲಕ್ಷ ತೋರಿಸಿರುತ್ತದೆ. ತಾಲ್ಲೂಕು ಕಛೇರಿಯಲ್ಲಿ ಈ ಸಂಬಂಧಿತ ಆಸ್ತಿಗಳ ಬಗ್ಗೆ
ಮಾಹಿತಿ ಇದ್ದರೂ ಇಲಾಖೆಯೂ ಸಹ ಇದೇ ಧೋರಣೆಯನ್ನು ತೋರಿರುತ್ತದೆ. ಈ
ಹಿನ್ನಲೆಯಲ್ಲಿ ಮಾದಿಗ ಸಮಾಜ ಜಾಗೃತಗೊಂಡು ಗ್ರಾಮೀಣ ಪ್ರದೇಶ ಹಾಗೂ ನಗರಪ್ರದೇಶದ
ಮಾದಿಗ ಸಮಾಜದ ಬಂಧುಗಳು“ಮಾದಿಗ ಮಹಾ ಸಮಾಜದಿಂದ ಧರಣಿ ಮತ್ತು ಪ್ರತಿಭಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಾದಿಗ ಸಮಾಜಕ್ಕೆ ಹಾಗುವ ಅನ್ಯಾಯ ಮತ್ತು ಮಾದಿಗ ಸಮಾಜದ ಆಸ್ತಿಗಳ ರಕ್ಷಣೆ ಮಾಡಲು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.



About The Author
Discover more from JANADHWANI NEWS
Subscribe to get the latest posts sent to your email.