ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ತಾಲೂಕಿನ ಜಾನಕಲ್ಲು ವಲಯದ ಬನಸೀಹಳ್ಳಿ ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ₹2 ಲಕ್ಷ 50 ಸಾವಿರ ಮೊತ್ತದ ಡಿ.ಡಿ.ಯನ್ನು ತಾಲ್ಲೂಕು ಯೋಜನಾಧಿಕಾರಿ ಚಂದ್ರಶೇಖರ ವಿತರಿಸಿದರು.
ದೇವಸ್ಥಾನ ಕಮಿಟಿಯ ಮನವಿಗೆ ಸ್ಪಂದಿಸಿದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಈ ಅನುದಾನ ಮಂಜೂರಾಗಿದ್ದು, ಗ್ರಾಮದ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ನೆರವಾಗಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಯೋಜನಾಧಿಕಾರಿ ಚಂದ್ರಶೇಖರ, “ಯೋಜನೆಯಡಿ ಗ್ರಾಮದ ಕೆರೆ ಅಭಿವೃದ್ಧಿಗೆ ₹15 ಲಕ್ಷ ಅನುದಾನವೂ ದೊರೆತಿದ್ದು, ಊರಿನ ದೇವಸ್ಥಾನಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬನಸೀಹಳ್ಳಿ ಗ್ರಾಮಕ್ಕೆ ಸಿಕ್ಕಿರುವುದು ಸಂತಸದ ವಿಚಾರ” ಎಂದು ಹೇಳಿದರು.
ದೇವಸ್ಥಾನ ಕಮಿಟಿಯ ಅಧ್ಯಕ್ಷ ವಿರೂಪಾಕ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಯಮಿಲನ ಕಮಿಟಿಯ ಉಪಾಧ್ಯಕ್ಷ ಅಜ್ಜಪ್ಪ, ಕಮಿಟಿಯ ಸರ್ವ ಸದಸ್ಯರು, ಊರಿನ ಗಣ್ಯರು, ವಲಯ ಮೇಲ್ವಿಚಾರಕರು ಹಾಗೂ ಸೇವಾಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.