ಚಳ್ಳಕೆರೆ: ಸಾಹಿತಿ ಬೆಳಗೆರೆ ಕೃಷ್ಣಶಾಸ್ತ್ರಿಜಿಯವರ ಜನ್ಮದಿನ ಆಚರಣೆ
ಚಳ್ಳಕೆರೆ ಪಟ್ಟಣದ ಭಾನು ಮತ್ತು ನ್ಯಾಷನಲ್ ಸ್ಟುಡಿಯೋ ಕಚೇರಿಯಲ್ಲಿ ನೇತಾಜಿ ಸ್ನೇಹ ಬಳಗ ಹಾಗೂ ಚಳ್ಳಕೆರೆ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ವತಿಯಿಂದ ರಾಜ್ಯದ ಹೆಮ್ಮೆಯ ಸಾಹಿತಿ, ಶಿಕ್ಷಣ ತಜ್ಞ ಹಾಗೂ ಸಮಾಜಸೇವಕರಾದ ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖಂಡರು, ಬೆಳಗೆರೆ ಕೃಷ್ಣಶಾಸ್ತ್ರಿಜಿಯವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ್ದು, “ಶ್ರೀ ಶಾರದಾ ದೇವಿ ವಿದ್ಯಾ ಮಂದಿರ” ಸ್ಥಾಪನೆಯ ಮೂಲಕ ಸಾವಿರಾರು ಬಡ ಮಕ್ಕಳಿಗೆ ವಿದ್ಯಾದಾನ, ಅನ್ನದಾನ ಹಾಗೂ ಆಶ್ರಯದಾನ ನೀಡುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ಅನೇಕ ಕೃತಿಗಳನ್ನು ರಚಿಸಿ, ಜೀವನ ಮೌಲ್ಯಗಳನ್ನು ಸಾರುವ ಕಥೆಗಳ ಮೂಲಕ ಮನುಕುಲಕ್ಕೆ ದಾರಿದೀಪವಾಗಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಬಡತನ ರೇಖೆಗಿಂತ ಕೆಳಗಿನ ಮಕ್ಕಳಿಗೆ ಶಿಕ್ಷಣದ ಬೆಳಕು ನೀಡುತ್ತಿರುವ ಅವರ ಸೇವೆ ಶ್ಲಾಘನೀಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಇವರಿಗೆ ಸರ್ಕಾರ ಹಾಗೂ ವಿವಿಧ ಸಂಘ-ಸಂಸ್ಥೆಗಳು ಅನೇಕ ಪ್ರಶಸ್ತಿ ಹಾಗೂ ಪದಕಗಳನ್ನು ನೀಡಲು ಮುಂದಾದರೂ, “ನನ್ನ ಸೇವೆಯೇ ದೇವರ ಸೇವೆ” ಎಂದು ಹೇಳಿ ಯಾವುದೇ ಪ್ರಶಸ್ತಿ-ಪುರಸ್ಕಾರಗಳನ್ನು ಸ್ವೀಕರಿಸದೇ ಸರಳತೆಯನ್ನು ಮೆರೆದಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.
ಈ ಸಂದರ್ಭದಲ್ಲಿ ನೇತಾಜಿ ಸ್ನೇಹ ಬಳಗದ ಅಧ್ಯಕ್ಷ ನೇತಾಜಿ ಪ್ರಸನ್ನ ಮಾತನಾಡಿ, ಬೆಳಗೆರೆ ಕೃಷ್ಣಶಾಸ್ತ್ರಿಜಿಯವರು ನಮ್ಮ ತಾಲೂಕಿನ ಹೆಮ್ಮೆಯ ವ್ಯಕ್ತಿತ್ವವಾಗಿದ್ದು, ಇಡೀ ರಾಜ್ಯಕ್ಕೆ ಮಾದರಿಯಾದ ಶಿಕ್ಷಣ ಪ್ರೇಮಿಯಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೇತಾಜಿ ಸ್ನೇಹ ಬಳಗದ ನಿರ್ದೇಶಕ ಚಿತ್ರದುರ್ಗದ ಸುರೇಂದ್ರ, ಚಳ್ಳಕೆರೆ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದ ಹಿರಿಯ ಛಾಯಾಗ್ರಾಹಕ ಹಾಗೂ ನಿರ್ದೇಶಕ ಅಶೋಕ್ ಭಾನು, ರೈತ ಮುಖಂಡ ಸೂರನಹಳ್ಳಿ ರವಿ, ಹಿರಿಯ ಛಾಯಾಗ್ರಾಹಕ ನವೀನ್ ಸ್ಟು
About The Author
Discover more from JANADHWANI NEWS
Subscribe to get the latest posts sent to your email.