ನಾಯಕನಹಟ್ಟಿ:- ಶ್ರಾವಣ ಮಾಸದ ಎರಡನೇ ಶನಿವಾರ ಸಮೀಪದ ರೇಖಲಗೆರೆ ಕಾವಲು ಪ್ರದೇಶದ ಶ್ರೀ ಕಾವಲು ಆಂಜನೇಯ ಸ್ವಾಮಿ ದೇವಾಲಯದಲ್ಲಿ ನೂರಾರು ಭಕ್ತರು ಭೇಟಿ ನೀಡಿ ದರ್ಶನ ಪಡೆದರು.



ರೇಖಲಗೆರೆ ಕಾವಲು ಪ್ರದೇಶದ ಶ್ರಾವಣ ಮಾಸದ ಎರಡನೇ ಶನಿವಾರ ದೇವಾಲಯದಲ್ಲಿ ವಿಶೇಷ ಅಭಿಷೇಕ ಬಿಲ್ವಾರ್ಚನೆ ಸೇರಿದಂತೆ ಹಲವು ಪೂಜಾ ಕಾರ್ಯಗಳು ಜರುಗಿದವು.
ಇನ್ನೂ ದೇವಾಲಯದಲ್ಲಿ ನೂರಾರು ಭಕ್ತರು ಸರದಿಯ ಸಾಲಿನಲ್ಲಿ ನಿಂತು ಶ್ರೀ ಕಾವಲು ಆಂಜನೇಯ ಸ್ವಾಮಿಯ ದರ್ಶನವನ್ನು ಪಡೆದರು.
ಶ್ರಾವಣ ಮಾಸದ ನಾಲ್ಕು ಶನಿವಾರಗಳಂದು ಹೆಚ್ಚಿನ ಭಕ್ತರು ದೇವಾಲಯಕ್ಕೆ ಬರುವುದರಿಂದ ದಾಸೋಹ ವ್ಯವಸ್ಥೆಯನ್ನು ಪಕ್ಕದ ಸಮುದಾಯ ಭವನದಲ್ಲಿ ನಡೆಸಲಾಯಿತು.
ಬಂದಂತ ಭಕ್ತಾದಿಗಳಿಗೆ ಪಾಯಸ ಕಾಯಿ ಪಲ್ಯ ಅನ್ನ ಸಾಂಬಾರ್ ಮಜ್ಜಿಗೆಯನ್ನು ವಿತರಿಸಲಾಯಿತು ಸುಮಾರು ಸಾವಿರಕ್ಕೂ ಹೆಚ್ಚಿನ ಭಕ್ತರು ಊಟ ಮಾಡಿದರು.
ಇದೆ ವೇಳೆ ಕಾರ್ಯದರ್ಶಿ ಕೋಲಂನಹಳ್ಳಿ ಪಿತಂಬರ್ ಮಾತನಾಡಿದರು ಸುಕ್ಷೇತ್ರ ಕಾವಲು ಆಂಜನೇಯ ಸ್ವಾಮಿ ಎರಡನೇ ಶನಿವಾರ ಅದ್ದೂರಿಯಾಗಿ ಪೂಜಾ ಕೈಂಕಾರಿಗಳು ನಿರ್ವಹಿಸಲಾಗಿದೆ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿ ತನು ಮನ ಧನ ಅರ್ಪಿಸುವ ಮೂಲಕ ದೇವರ ದರ್ಶನ ಪಡೆಯಬೇಕೆಂದು ಮನವಿ ಮಾಡಿದರು..
ಶ್ರೀ ಕಾವಲು ಆಂಜನೇಯ ಸ್ವಾಮಿ ಸೇವಾ ಸಮಿತಿಯ ಕಾರ್ಯದರ್ಶಿ ಕೊಲಂನಹಳ್ಳಿ ಪಿತಾಂಬರ್ , ರೇಖಲಗೆರೆ ಚಿನ್ನಯ್ಯ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಓ .ಮಂಜುನಾಥ್, ಗುಂತಕೋಲಮ್ಮನಹಳ್ಳಿ ಎಂ.ಟಿ. ಓಬಣ್ಣ, ಜೆಸಿಬಿ ಎನ್. ತಿಪ್ಪೇಸ್ವಾಮಿ , ದಾಸರ ಮುತ್ತೈನಹಳ್ಳಿ ಬಿಒಆರ್ ಓಬಣ್ಣ, ರೇಖಲಗೆರೆ ಪ್ರಕಾಶ್.
ಡಾ.ಎ. ಭೀಮಪ್ಪ ರಾಯದುರ್ಗ, ನರೇಂದ್ರ, ತಾಯಿಟೋಣಿ ಹನುಮಂತಪ್ಪ, ರೆಡ್ಡಿ, ಪೈನೀಡಿ ಬಂಧುಗಳು. ಕೆ.ಎಲ್. ರಾಮದಾಸ್, ಸೇರಿದಂತೆ ನೂರಾರು ಭಕ್ತಾದಿಗಳು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.