June 15, 2026
IMG-20241219-WA0222.jpg

ಚಳ್ಳಕೆರೆ:ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ತಳಕು ಹಾಗೂ ನಾಯಕನಹಟ್ಟಿ ಹೋಬಳಿಗಳ ಒಳ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪಾದಯಾತ್ರೆ ಕಾರ್ಯಕ್ರಮವು ತಳಕು ಹೋಬಳಿಯ ಗರಣಿ ಕ್ರಾಸ್ ನಿಂದ ಮಾಜಿ ತಹಸೀಲ್ದಾರ್ ಮಲ್ಲಿಕಾರ್ಜುನಪ್ಪ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಆರಂಭಗೊಂಡಿತು ಪಾದಯಾತ್ರೆ ವೇಳೆ ಮಾದಿಗ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ದಾರಿ ಉದ್ದಕ್ಕೂ ಅಭೂತಪೂರ್ವ ಬೆಂಬಲ ನೀಡಿದರು.

ಪಾದಯಾತ್ರೆಯು ತಳಕು ಗರಣಿ ಕ್ರಾಸ್, ಚಿಕ್ಕಮ್ಮನಹಳ್ಳಿ ಚಳ್ಳಕೆರೆ ನಗರದ ಬಳ್ಳಾರಿ ರಸ್ತೆ ನೆಹರು ವೃತ್ತದ ಮೂಲಕ ತಾಲೂಕು ಕಚೇರಿಗೆ ತಲುಪಿತು.

ಈ ವೇಳೆ ಮಾತನಾಡಿದ ಮಾಜಿ ತಹಶೀಲ್ದಾರ್ ಮಲ್ಲಿಕಾರ್ಜುನಪ್ಪ ಕಳೆದ ಮೂರುವರೆ ದಶಕಗಳಿಂದ ದಕ್ಷಿಣ ಭಾರತದ ಮಾದಿಗರು ಮತ್ತು ಮಾದಿಗ ಸಂಬಂಧಿತ ಜಾತಿಗಳು ನಿರಂತರವಾಗಿ ಹೋರಾಟಗಳನ್ನು ನಡೆಸುತ್ತಾ ಬಂದಿದ್ದರೂ ಕೇಂದ್ರದಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರಗಳು ಮಾದಿಗ ಸಮುದಾಯವನ್ನು ಮತ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಂಡು ಅಧಿಕಾರ ನಡೆಸಿವೆ 1996ರ ನ್ಯಾಯಮೂರ್ತಿ ರಾಮಚಂದ್ರ ರಾಜು ಆಯೋಗ 2008ರ ನ್ಯಾಯಮೂರ್ತಿ ಉಷಾ ಮೆಹರಾ ಆಯೋಗ ಹಾಗೂ 2012ರ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಗಳು ಒಳ ಮೀಸಲಾತಿ ಕಲ್ಪಿಸುವಂತೆ ವರದಿಗಳನ್ನು ನೀಡಿದ್ದರು ವರದಿಗಳನ್ನು ಮೂಲಗೆ ಎಸೆದಿದ್ದು ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಷ್ಟ್ರೀಯ ಪಕ್ಷಗಳು ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಕಲ್ಪಿಸುವ ಭರವಸೆಗಳನ್ನು ನೀಡಿ ವಂಚಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದುವರೆದು ಮಾತನಾಡುತ್ತಾ ಮಾದಿಗ ಸಮುದಾಯವು ತನ್ನ ಹಕ್ಕಿಗಾಗಿ ಹೋರಾಡುತ್ತ ಬಂದಿದ್ದು ಯಾವುದೇ ಫಲ ಸಿಕ್ಕಿಲ್ಲ ಯಾವುದೇ ಪ್ರತಿಭಟನೆ ಜಾತಗಳನ್ನು ಮಾಡದ ಸಮುದಾಯಗಳಿಗೆ ಸದ್ದು ಗದ್ದಲವಿಲ್ಲದೆ ಸಂವಿಧಾನಕ್ಕೆ ತಿದ್ದುಪಡಿ ತಂದು ಶೇ10 ರಷ್ಟು ಮೀಸಲಾತಿಯನ್ನು ನೀಡಿದೆ ಕಳೆದ 30 ವರ್ಷಗಳಿಂದ ನಮ್ಮ ಹೋರಾಟಕ್ಕೆ ಕಿವಿಗೊಡದೆ ದ್ವಂದ್ವ ನೀತಿಯನ್ನು ಅನುಸರಿಸುತ್ತಿದೆ ನಮ್ಮ ಸಮುದಾಯ ಕಾನೂನು ಮೂಲಕ ಹೋರಾಟ ನಡೆಸಿದ ಫಲವಾಗಿ ಕಳೆದ ಆಗಸ್ಟ್ ಒಂದರಂದು ಸರ್ವೋಚ್ಚ ನ್ಯಾಯಾಲಯದ ಏಳು ಜನರ ನ್ಯಾಯಾಧೀಶರ ಪೀಠವು ಒಳ ಮೀಸಲಾತಿ ಕಲ್ಪಿಸಲು ರಾಜ್ಯಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರೂ ಸಹ ರಾಜ್ಯದಲ್ಲಿ ಆಳ್ವಿಕೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಎಚ್ಚೆತ್ತುಕೊಳ್ಳದೆ ಮಾದಿಗ ಸಮುದಾಯಕ್ಕೆ ಅನ್ಯಾಯ ಮಾಡುತ್ತಿದೆ ಕಳೆದ ಅಕ್ಟೋಬರ್ 28ರ ಸಂಪುಟ ಸಭೆಯಲ್ಲಿ ಒಳ ಮೀಸಲಾತಿಯನ್ನು ತಾತ್ವಿಕವಾಗಿ ಒಪ್ಪಿರುವುದಾಗಿ ತಿಳಿಸಿ ಇದಕ್ಕಾಗಿ ಆಯೋಗವನ್ನು ನೇಮಕ ಮಾಡುವುದಾಗಿ ಮತ್ತು ಆಯೋಗದ ವರದಿ ಬರುವ ತನಕ ಯಾವುದೇ ಹೊಸ ನೇಮಕಾತಿಗಳನ್ನು ಮಾಡಲು ಅಧಿಸೂಚನೆಗಳನ್ನು ಹೊರಡಿಸುವುದಿಲ್ಲ ಎಂದು ನಿರ್ಣಯ ಕೈಗೊಂಡು ಈಗ ಸುಮಾರು 32 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿಗಳನ್ನು ನಡೆಸಲು ಅಧಿಸೂಚನೆ ಹೊರಡಿಸಿದ್ದು ಎಷ್ಟರಮಟ್ಟಿಗೆ ಸರಿಯಾಗಿದೆ ಎಂಬುದು ತಿಳಿಯುತ್ತಿಲ್ಲ ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಳ ಮೀಸಲಾತಿಯ ಬಗ್ಗೆ ಸ್ಪಷ್ಟನೆ ನೀಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಾದಿಗ ಸಮುದಾಯದ ಹಕ್ಕೋತ್ತಾಯಗಳು

ಒಳ ಮೀಸಲಾತಿ ಜಾರಿಯಾಗುವ ತನಕ ಹೊಸ ನೇಮಕಾತಿಗಳು ಮತ್ತು ಮುಂಬಡ್ತಿಗಳನ್ನು ತಡೆಯಬೇಕು

  • ಸರ್ಕಾರದ ಆದೇಶವನ್ನು ಉಲ್ಲಂಗಿಸುತ್ತಿರುವ ಸಚಿವರನ್ನು ಸಚಿವ ಸಂಪುಟದಿಂದ ಕೈ ಬಿಡಬೇಕು
  • ಒಳ ಮೀಸಲಾತಿ ವಿರೋಧಿ ಸಭೆಗಳಲ್ಲಿ ಭಾಗವಹಿಸುವ ಸಚಿವರುಗಳ ಶಾಸಕರ ಅಧಿಕಾರಿಗಳ ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು
  • ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯ ಕಾರ್ಯ ನಿರ್ವಹಿಸಲು ಅಗತ್ಯವಾದ ಪರಿಕರಗಳನ್ನು ಸರ್ಕಾರವು ತಡವಾಗಿ ನೀಡಿರುವ ರೀತಿಯಲ್ಲಿ ತಡ ಮಾಡದೆ ಅವರ ವರದಿಯನ್ನು ಸಲ್ಲಿಸಿದ ತಕ್ಷಣ ಸಮ್ಮತಿ ಸೂಚಿಸಬೇಕು
  • ಒಳ ಮೀಸಲಾತಿ ಜಾರಿಗೆ ಬರುವ ತನಕ ಸರ್ಕಾರವು ಎಸ್ ಸಿ ಪಿ ಹಣವನ್ನು ಬಿಡುಗಡೆ ಗೊಳಿಸಬಾರದು
  • ಸರ್ಕಾರಕ್ಕೆ ಈಗಾಗಲೇ ಸಲ್ಲಿಸಿರುವ ಅನೇಕ ಆಯೋಗಗಳ ವರದಿಗಳಲ್ಲಿ ಒಳ ಮೀಸಲಾತಿಗೆ ಅಗತ್ಯವಾದ ಎಂಪಿರಿಕಲ್ ಡೇಟಾ ದೊರೆಯುತ್ತದೆ ಆ ಡೇಟಾಗಳನ್ನು ಈಗಿನ ಒಳಮಿಸಲಾತಿ ಸಮಿತಿಗೆ ಒದಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಮುಖಂಡರಾದ ರಾಜಣ್ಣ ಆರ್ ರುದ್ರಮುನಿ ಬಸವರಾಜಪ್ಪ ಮಾರಣ್ಣ ತಿಪ್ಪೇಸ್ವಾಮಿ ನಾಗರಾಜ್ ಹೆಚ್ ತಿಪ್ಪೇಸ್ವಾಮಿ ಸೇರಿದಂತೆ ಸಮುದಾಯದ ಸಾರ್ವಜನಿಕರು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading