ನಾಯಕನಹಟ್ಟಿ:- ಭೀಮನಕೆರೆ ಗ್ರಾಮಸ್ಥರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಎಂದು ಹಿರಿಯ ದಲಿತ ಹೋರಾಟಗಾರ ಎಚ್.ಎನ್. ಶಿವಮೂರ್ತಿ ಹೇಳಿದರು.
ಭಾನುವಾರ ಹೋಬಳಿಯ ನೇರಲಗುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಭೀಮನಕೆರೆ ಗ್ರಾಮದಲ್ಲಿ
ಬುದ್ಧ ಬಸವ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘ ಭೀಮನಕೆರೆ ವತಿಯಿಂದ ಆಯೋಜಿಸಿದ್ದ 135 ನೇ ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಪ್ರಯುಕ್ತ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡಿದರು. ಬುದ್ಧ ಬಸವ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮ ಸಮಾಜದ ನಿರ್ಮಾಣಕ್ಕೆ ಡಾ. ಬಿಆರ್ ಅಂಬೇಡ್ಕರ್ ಅವರ ಕೊಡುಗೆ ಅಪಾರ ಅಂತಹ ಮಹಾ ನಾಯಕರ ಜಯಂತಿಯನ್ನು ಆಚರಣೆ ಮಾಡುವುದು ತುಂಬಾ ಸಂತೋಷದ ವಿಚಾರ ಆದ್ದರಿಂದ ಗ್ರಾಮದಲ್ಲಿ ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ಶಿಕ್ಷಣದಿಂದ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯವೆಂದರು.
ಇನ್ನೂ ಕಾರ್ಯಕ್ರಮದಲ್ಲಿ ನಲಗೇತನಹಟ್ಟಿ ಗ್ರಾಮದ ಗಾಯಕ ಕೆ ಟಿ ಮುತ್ತುರಾಜ್ ಡಾ. ಬಿ. ಆರ್ ಅಂಬೇಡ್ಕರ್ ರವರ ಕುರಿತು ಕ್ರಾಂತಿ ಗೀತೆ ಗೀತೆಗಳನ್ನು ಹಾಡಿದರು.
ನೇರಲಗುಂಟೆ ಗ್ರಾಮ ಪಂಚಾಯಿತಿ ಸದಸ್ಯೆ ಮಾಜಿ ಉಪಾಧ್ಯಕ್ಷೆ
ದುರುಗಮ್ಮ ನಾಗಭೂಷಣ್,
ದಲಿತ ಮುಖಂಡರಾದ ಎನ್. ಪ್ರಕಾಶ್, ಎಸ್.ಬಿ. ತಿಪ್ಪೇಸ್ವಾಮಿ ಕುದಾಪುರ, ತೊರೆಕೋಲಮನಹಳ್ಳಿ ಆರ್ ಬಸಪ್ಪ, ವಕೀಲರಾದ ಟಿ. ಮಲ್ಲೇಶ್ ಹಿರೇಹಳ್ಳಿ, ಎಸ್ ಪರಮೇಶ್ ಮೌರ್ಯ, ಬುದ್ಧ ಬಸವ ಅಂಬೇಡ್ಕರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಗೌರಣ್ಣ ಭೀಮನಕೆರೆ, ಯೋಗ ಗುರುಗಳಾದ ದರ್ಶನ್, ಪತ್ರಕರ್ತ ನಿಂಗರಾಜ್, ವಾಲ್ಮೀಕಿ ಸಮಾಜದ ಮುಖಂಡ ಓಬಣ್ಣ, ಭಾರತೀಯ ಬೌದ್ಧ ಮಹಾಸಭಾದ ಕಾರ್ಯದರ್ಶಿ ರವಿಕುಮಾರ್ ನನ್ನಿವಾಳ ,ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್,
ಸೇರಿದಂತೆ ಸಮಸ್ತ ಭೀಮನಕೆರೆ ಗ್ರಾಮಸ್ಥರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.