September 18, 2026
IMG-20260918-WA0198


ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ:ತಾಲೂಕಿನ ಕಂಚೀಪುರದಲ್ಲಿ ನೆಲೆಸಿರುವ ಶಕ್ತಿ ದೈವ ಕಂಚೀವರದರಾಜ ಸ್ವಾಮಿ ಸಮ್ಮುಖದಲ್ಲಿ ಸೆ. ೧೭ ರಿಂದ ನಡೆಯಲಿರುವ, ಉತ್ತರ ಮಳೆ ಅಂಬಿನೋತ್ಸವ ಹಾಗೂ ನಾಮಧಾರಣೆಗೆ ಕಂಚೀಪುರ ಮತ್ತು ದಶರಥರಾಮೇಶ್ವರದಲ್ಲಿ ಸಕಲ ಸಿದ್ಧತೆಗಳು ಬಿರುಸಿನಿಂದ ಸಾಗಿವೆ.
ಸೆ. ೧೭ ರಂದು ಕಂಚೀವರದರಾಜ ಸ್ವಾಮಿಯನ್ನು ಕುದುರೆಯ ಮೇಲೆ ಪಟ್ಟಕ್ಕೆ ಕೂರಿಸಿ, ನಿತ್ಯ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನಡೆಸಲಾಯಿತು. ಸೆ.೨೧ ರಂದು ಸೋಮವಾರ ಬುತ್ತಿಬಾನದೊಂದಿಗೆ ಸ್ವಾಮಿಯ ಉತ್ಸವವು ದಶರಥರಾಮೇಶ್ವರದವರೆಗೂ ನಡೆಯಲಿದೆ. ಅಂದು ತಡರಾತ್ರಿ ಬುತ್ತಿಬಾನ ಹೊತ್ತ ಭಕ್ತರು ಸಿದ್ಧಪ್ಪನ ಬೆಟ್ಟಕ್ಕೆ ತೆರಳಿ ಅಲ್ಲಿ ಸಿದ್ಧೇಶ್ವರ ಸ್ವಾಮಿಗೆ ಸಮರ್ಪಿಸುವರು. ನಂತರ ಅಲ್ಲಿ ಬಿಲ್ಲು ಮತ್ತು ಬಾಣದಿಂದ ಅಂಬು ಹೊಡೆಯುವ ಮೂಲಕ ಅಂಬಿನೋತ್ಸವ ಆಚರಿಸುವರು. ಸೆ.೨೨ ರ ಮಂಗಳವಾರ ಗಂಗಾಸ್ನಾನ ಹಾಗೂ ನಾಮಧಾರಣೆ ಕಾರ್ಯಕ್ರಮಗಳು ಧಾರ್ಮಿಕ ವಿಧಿಗಳನ್ವಯ ನಡೆಯುವವು.
ಬುತ್ತಿ ಬಾನ ಸೇವೆ : ೧೬ ಸೇರು ಅಕ್ಕಿ, ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಇತರೆ ವಸ್ತುಗಳನ್ನು ಉಪಯೋಗಿಸಿ ಮೊಸರು ಅನ್ನದ ಬುತ್ತಿ ತಯಾರಿಸಲಾಗುತ್ತದೆ. ಸ್ವಾಮಿ ಮುಂದಿಟ್ಟು ಪೂಜೆ ಮಾಡಿ. ಸೋಮವಾರ ರಾತ್ರಿ ಸುಮಾರು ೯-೧೦ ಗಂಟೆಯಲ್ಲಿ ಉತ್ತರೆ ಬೆಟ್ಟದ ಸಿದ್ಧಪ್ಪ ಸ್ವಾಮಿಗೆ ಎಡೆ ಹೊಯ್ಯುವರು. ಮಂಗಳವಾರ ಭಕ್ತರು ಸಿದ್ಧಪ್ಪನ ಬೆಟ್ಟದಿಂದ ನೇರವಾಗಿ ದಶರಥರಾಮೇಶ್ವರಕ್ಕೆ ತೆರಳುತ್ತಾರೆ. ಸ್ವಾಮಿಯ ಧಾರ್ಮಿಕ ಕಾರ್ಯಕ್ರಮಗಳ ನಂತರ ಬುತ್ತಿ ಎಡೆಯಲ್ಲಿನ ಆಹಾರವನ್ನು ಪ್ರಸಾಧದ ರೂಪದಲ್ಲಿ ಭಕ್ತರಿಗೆಲ್ಲಾ ನೀಡಲಾಗುತ್ತದೆ.
ನಾಡಿನ ಮೊದಲ ದಸರಾ ಎಂದು ಪ್ರಸಿದ್ಧಿ ಪಡೆದಿದೆ. ಮೂಲತಃ ಕಂಚಿಯಿAದ ಬಂದಿರುವ ಈ ದೇವರು ಉತ್ತರೆ ಮಳೆ ಅಂಬೀನೋತ್ಸವದಲ್ಲಿ ವಿಶೇಷ ಶಕ್ತಿ ಹೊಂದಿರುತ್ತದೆ ಎನ್ನುತ್ತಾರೆ ಭಕ್ತರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading