September 18, 2026
IMG-20260918-WA0145

.

ನಾಯಕನಹಟ್ಟಿ:- ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ ಎಂದು ಕಾರ್ಯದರ್ಶಿ ಟೀ ಲೋಕೇಶಾಚಾರಿ, ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ವಿಶ್ವಕರ್ಮರನ್ನು ಸೃಷ್ಟಿ ನಿರ್ಮಾಣ ಮತ್ತು ಕಲೆ ಕೌಶಲ್ಯದ ಪ್ರತಿಕವಾಗಿ ಗೌರವಿಸಲಾಗುತ್ತದೆ. ಕಬ್ಬಿಣ ಮರ ಚಿನ್ನ ಬೆಳ್ಳಿ ಸೇರಿದಂತೆ ವಿವಿಧ ವಸ್ತುಗಳನ್ನು ಬಳಸಿ ಉಪಯುಕ್ತ ಹಾಗೂ ಕಲಾತ್ಮಕ ವಸ್ತುಗಳನ್ನು ತಯಾರಿಸುವ ಕುಶಲಕರ್ಮಿಗಳ ಸೇವೆ ಸಮಾಜಕ್ಕೆ ಅತ್ಯಂತ ಅಗತ್ಯವಾಗಿದೆ ಆಧುನಿಕ ತಂತ್ರಜ್ಞಾನ ಅಭಿವೃದ್ಧಿ ಆಗುತ್ತಿರುವ ಇಂದಿನ ಸಂದರ್ಭದಲ್ಲಿ ಸಂಪ್ರದಾಯಿಕ ಕಲೆ ಕೌಶಲ್ಯ ಮತ್ತು ವೃತ್ತಿಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.

ವಿಶ್ವಕರ್ಮ ಸಮಾಜದ ಪದಾಧಿಕಾರಿಗಳಾದ ಅಧ್ಯಕ್ಷ ಪಿ. ಕಾಳಾಚಾರಿ, ಗೌರವಾಧ್ಯಕ್ಷ ಬಿ ತಿಪ್ಪೇಸ್ವಾಮಿ ಆಚಾರ್, ಉಪಾಧ್ಯಕ್ಷ ಕೆ ವೆಂಕಟೇಶಾ ಚಾರಿ, ಸಹ ಕಾರ್ಯದರ್ಶಿ ಆರ್ ಹನುಮಂತಚಾರಿ, ಖಜಾಂಚಿ ಆರ್ ವೆಂಕಟೇಶ್ ಚಾರಿ, ನಿರ್ದೇಶಕರಾದ ಸದಾನಂದಚಾರ್,ಎ.ಟಿ ಮಹಾಂತೇಶ್ ಚಾರ್, ಟಿ ರಾಜು,ಚಂದ್ರಚಾರಿ, ಎಂ. ನಾರಾಯಣಚಾರ್ ಗೌಡಗೆರೆ, ಸುರೇಶಚಾರ್ ಮಲ್ಲೂರಹಳ್ಳಿ, ಶ್ರೀಮತಿ ಓಂಕಾರಮ್ಮ ಮಲ್ಲೂರಹಟ್ಟಿ, ವಿ.ಬಿ. ಮಹಾಂತೇಶ್ ಆಚಾರ್, ಆರ್ ಶ್ರೀನಿವಾಸ್ ಚಾರಿ, ಪಿ ಗೋಪಾಲಚಾರಿ, ಎಚ್. ಕರುಣೆಂದ್ರ ಚಾರಿ, ಎಂ ರಾಘವೇಂದ್ರ ಚಾರ್, ಜಾಗನೂರಹಟ್ಟಿ ಸೇರಿದಂತೆ ಯುವಕರು ಮಹಿಳೆಯರು ಮಕ್ಕಳು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading