April 15, 2026
IMG-20260415-WA0119.jpg

*ಹಿಂದೂ ಧರ್ಮ ಸುಧಾರಣೆಗೆ ಜಾತಿವಿನಾಶವೇ ಆಕರ – ವೇದಾಂತ ಏಳಂಜಿ*

೧೩೫ನೇ ಅಂಬೇಡ್ಕರ್ ಜಯಂತಿ ಅಂಗವಾಗಿ ಅಂಬೇಡ್ಕರ್ ವಿಚಾರ ವೇದಿಕೆ(ರಿ)ಯು ಮಹಾತ್ಮ ಪುಲೆ ಅಧ್ಯಯನ ಕೇಂದ್ರದಲ್ಲಿ ಉಪನ್ಯಾಸ ಮತ್ತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು

ಚಿಂತಕ ವೇದಾಂತ ಏಳಂಜಿಯವರು ಜಾತಿ ವಿನಾಶ ಕೃತಿಯ ಉಪನ್ಯಾಸದಲ್ಲಿ
ರಾಜಕೀಯ ಸುಧಾರಣೆಗಿಂತ ಸಾಮಾಜಿಕ ಸುಧಾರಣೆ ಮೊದಲಾಗಬೇಕಿತ್ತು ಎಂದರು.

ಬಾಬಾಸಾಹೇಬರ ಜಾತಿವಿನಾಶ ಕೃತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಭಾರತದ ಪ್ರಜಾಪ್ರಭುತ್ವ ಆಶಯಗಳು ಸಕಾರಗೊಳ್ಳುತ್ತವೆ. ರಾಮ ಶಂಬೂಕನನ್ನು ಹತ್ಯೆ ಮಾಡಿದಂತೆ ವರ್ಣ ವ್ಯವಸ್ಥೆ ದಲಿತ ಬೌದ್ಧಿಕತೆಯನ್ನು ಹತ್ಯೆ ಮಾಡಿದೆ. ಕಮ್ಯುನಲ್ ಅವಾರ್ಡ್ ಅನ್ಯಾಯಕ್ಕೆ ಒಳಗು ಮಾಡಿದ್ದೇವೆ ಎಂದು ಕರುಣೆ ತೋರಿ ಹುದ್ದೆ ನೀಡ ಬಯಸುವ ಯಾವುದೇ ಅಧಿಕಾರವನ್ನು ದಲಿತರು ತಿರಸ್ಕರಿಸಬೇಕು. ಸ್ವಶಕ್ತಿಯ ಅಧಿಕಾರ ಪಡೆಯುವಲ್ಲಿ ಸಂಘಟಿತರಾಗಬೇಕು.

೪೦೦೦ ಜಾತಿಗಳನ್ನು ೪ ವರ್ಣದಲ್ಲಿ ಮಾಡಿ ಉಚ್ಚ ನೀಚ ಪರಿಕಲ್ಪನೆಯಲ್ಲಿ ಹಿಂದೂ ಎಂದರೆ ಯಾವ ಜಾತಿ ಎಂದು ಕೇಳುವ ಧೋರಣೆಯಿದೆ. ಅಲೆಮಾರಿ ಪಂಗಡಗಳು, ಶೋಷಿತರನ್ನು ತಮ್ಮವರೇ ಎಂದು ಹೇಳುತ್ತರಾದರೂ ಚಾರ್ತುವರ್ಣ ವ್ಯವಸ್ಥೆ ಯಾರನ್ನೂ ಒಳಗೆ ಬಿಟ್ಟು ಕೊಳ್ಳದೆ, ಹೊರಗೂ ಹೋಗದಂತೆ ನಿರ್ಬಂಧ ಏರುವ ಧರ್ಮದ ಕಟ್ಟಲೆಗಳು ನಿಲ್ಲುವವರೆಗೂ ಹಿಂದೂ ಧರ್ಮ ಆದರ್ಶವಾಗಲಾರದು, ಜಾತಿ ಪದ್ದತಿ ಅನುಸರಿಸುವ ಜನರದ್ದು ತಪ್ಪಿಲ್ಲ ಆದರೆ ಜನರಿಗೆ ಜಾತಿ ಕಮ್ಮಟಗಳನ್ನ ಹಾಗೂ ಧರ್ಮ ಭೋದನೆಯನ್ನ ಮಾಡುವುದು ತಪ್ಪು ಎಂದು ಬಾಬಾಸಾಹೇಬರು ಹೇಳುತ್ತಾರೆ ಎಂದರು.

ಅಂಬೇಡ್ಕರ್ ಅವರ ಆತ್ಮಕಥೆಯಂತಿರುವ ವೀಸಾದ ನಿರೀಕ್ಷೆಯಲ್ಲಿ ಕೃತಿ ಕುರಿತು ವಿಶ್ವಾನಂದ ವದ್ದೀಕೆರೆ ಅಂಬೇಡ್ಕರ್ ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಿದ್ದರು. ಟಾಂಗಾದಿಂದ ಬಿದ್ದು ಗಾಯಗೊಂಡಿದ್ದು, ರೈಲ್ವೆ ಟೇಷನ್ ಘಟನೆಗಳನ್ನು ಪ್ರಸ್ತಾಪಿಸಿದರು. ವಿದೇಶದಿಂದ ಬಂದ ನಂತರ ಪಾರ್ಸಿ ಹೊಟೇಲ್ ನ ಘಟನೆ ಅವರನ್ನು ವಕೀಲರಾಗಿ ಬದಲಾಯಿಸಿತು. ಮುಂದೆ ಸಂವಿಧಾನ ಶಿಲ್ಪಿಯಾಗಿ ಆಧುನಿಕ ಭಾರತದ ಪಿತಾಮಹರಾಗಿ ಬೆಳೆದರು ಎಂದು ತಿಳಿಸಿದರು.

ಕೃಷಿ ಅಧಿಕಾರಿಯಾದ ಕಿರಣ್ ಕುಮಾರ್ ಬಾಬುಜಗಜೀವನ ರಾಮ್ ಅವರ ಹುಟ್ಟು ಬೆಳವಣಿಗೆ, ರಾಜಕಾರಣದಲ್ಲಿ ಸಂವಿಧಾನದ ಹಕ್ಕುಗಳ ರಕ್ಷಣೆ ಹಾಗೂ ಹಸಿರುಕ್ರಾಂತಿ ಮೂಲಕ ದೇಶವನ್ನು ಮುನ್ನೆಡೆಸುವಲ್ಲಿ ಬಾಬೂಜಿ ಕೊಡುಗೆ ಅಪಾರ ಎಂದರು.

ಚಿಂತಕ‌ ಶ್ರೀನಿವಾಸರಾಜು ದೊಡ್ಡೇರಿ ಪ್ರಸ್ತಾವಿಕ ನುಡಿಗಳನ್ನು ಆಡಿದರು. ಉಪನ್ಯಾಸಕ ಹನುಮಂತಪ್ಪ ದಡಗೂರು ತ್ರಿಸರಣ, ಸಂವಿಧಾನದ ಪೂರ್ವಪೀಠಿಕೆ ವಾಚಿಸಿದರು. ಶಿಕ್ಷಕ ಶಿವಶಂಕರ ಸಿಗೇಹಟ್ಟಿ, ಸಿದ್ದೇಶ್.ಕೆ. ಪ್ರಾಧ್ಯಾಪಕ ಮಂಜುನಾಥ್ ಆರ್, ಹೆಚ್.ಓ.ತಿಪ್ಪೇಸ್ವಾಮಿ, ಶ್ರೀನಿವಾಸ, ಭೀಮ ಗೀತೆಗಳನ್ನು ಹಾಡಿದರು. ಪ್ರಕಾಶ ಯಾದಲಗಟ್ಟೆ, ಪುರುಷೋತ್ತಮ, ಮೋದೂರು ತೇಜ, ಮನೋಹರ, ರಾಜು.ವಿ, ಅಶೋಕ್ ತೇಜ, ಸತೀಶ್, ಮುಂತಾದವರು ಸಂವಾದಿಸಿದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading