May 14, 2026
FB_IMG_1778768229927.jpg

ಹಿರಿಯೂರು :
ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ರವರು ಬಡವರಬಂಧು, ನೊಂದವರ ಬಾಳಿನ ಆಶಾಕಿರಣ, ಜನಾನುರಾಗಿ ನಾಯಕರಾಗಿದ್ದು, ಅವರನ್ನು ಕಳೆದುಕೊಂಡ ನಮ್ಮ ತಾಲ್ಲೂಕಿನ ಜನರು ಅಕ್ಷರಶಃ ಅನಾಥರಾಗಿದ್ದಾರೆ, ಸಚಿವ ಡಿ.ಸುಧಾಕರ್ ರವರ ನಿಧನ ನಮ್ಮ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಎಂಬುದಾಗಿ ಕಾಂಗ್ರೆಸ್ ಮುಖಂಡರು ಹಾಗೂ ಮಸ್ಕಲ್ ಗ್ರಾಮಪಂಚಾಯತಿ ಮುಖಂಡರಾದ ಎಂ.ಎ.ಶ್ರೀನಿವಾಸ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಲ್ಲೂಕಿನ ಮಸ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಚಿವ ಡಿ.ಸುಧಾಕರ್ ರವರ ನಿಧನದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ “ಸಂತಾಪ ಸಭೆ”ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಸ್ಕಲ್ ಗ್ರಾಮ ಪಂಚಾಯತಿಯ ಮುಖಂಡರುಗಳಾದ ಎಂ.ಎ.ಶ್ರೀನಿವಾಸ್, ವೈ.ನಾಗರಾಜ್, ಪರಮೇಶ್ವರಪ್ಪ, ವೇಲುಸ್ವಾಮಿ, ಕಾಂಗ್ರೆಸ್ ಈರಣ್ಣ, ಬೆಂಬೋದರ, ಲೋಕೇಶ್, ನಿಜಲಿಂಗಪ್ಪ, ಪಿ.ಎಚ್.ದಾನಪ್ಪ, ಪಿ.ಎಚ್.ಮಧು, ವೀರೇಶ್, ಯೋಗಿ ಗಜ, ಕೆ.ವೀರೇಶ್, ಎನ್.ರವಿ ತಿಪ್ಪೇಸ್ವಾಮಿ ಇನ್ನೂ ಅನೇಕ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading