October 9, 2026
IMG-20261009-WA0317


ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ಹೊಸದುರ್ಗ ಎಂದರೆ ಅದು ಸಿರಿಧಾನ್ಯಗಳ ನಾಡು ಎಂದೇ ಹೆಸರು ಮಾಡಿರುವ ಒಂದು ವಿಶೇಷ ಮತ್ತು ವಿಶಿಷ್ಟ ಕ್ಷೇತ್ರವಾಗಿದೆ. ಹೊಸದುರ್ಗ ಎಂದರೆ ಒಂದು ವಿಶೇಷವೇ ಸರಿ ಇಲ್ಲಿ ವರ್ಷವಿಡೀ ಒಂದಲ್ಲಾ ಒಂದು ಅತ್ಯಂತ ಅದ್ಭುತವಾತ ಕಾರ್ಯಗಳು, ಸಾಂಸ್ಕೃತಿಕ ಕಲೆಗಳ ಪ್ರದರ್ಶನ ದೇವಾನು ದೇವತೆಗಳ ಆರಾಧನೆ ನಡೆಯುವಂತಹ ಪುಣ್ಯ ಭೂಮಿ ಎಂದರೆ ತಪ್ಪಾಗಲಾರದು. ಅಂತೆಯೇ ಹೊಸದುರ್ಗ ತಾಲ್ಲೂಕಿನ ಸದ್ಬಕ್ತರಿಗೆ ಮತ್ತೋಮ್ಮೆ ಧಾರ್ಮಿಕ ಸಂಬ್ರಮಾಚರಣೆ ಅನುಭವಿಸಲು ದಿನ ಗಣನೆ ಕೂಡಿಬಂದಿದೆ.
ಇಲ್ಲಿನ ಶ್ರೀ ದುರ್ಗಾ ಸೇವಾ ಸಮಿತಿಯ ಅಧ್ಯಕ್ಷ ಟಿ,ಮಂಜುನಾಥ್ ಅವರ ನೇತೃತ್ವದಲ್ಲಿ ಪಟ್ಟಣದ ಶ್ರೀ ವಿನಾಯಕ ರಂಗಮAದಿರದ ಶ್ರೀ ದುರ್ಗಾದೇವಿ ಮಂಟಪದಲ್ಲಿ ದ್ವಿತೀಯ ಸಂಕಲ್ಪದ ಒಂಬತ್ತನೆ ವರ್ಷದ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಶರನ್ನವರಾತ್ರಿ ದಸರಾ ಮಹೋತ್ಸವ ನಡೆಯಲಿದ್ದು ಮೈಸೂರು ದಸರಾವನ್ನ ಹೋರೆತು ಪಡಿಸಿದರೆ ಹೊಸದುರ್ಗದಲ್ಲಿ ದಸರಾ ವೈಭವವನ್ನ ಕಾಣಬಹುದು ಎಂಬುದು ಗಮನಾರ್ಹ.
ಈಗಾಗಲೆ ಪಟ್ಟಣದ ಟಿ.ಬಿ.ವೃತ್ತದಿಂದ ಹಿಡಿದು ಶ್ರೀ ಸಾಯಿಬಾಬ ದೇವಸ್ಧಾನದವರೆಗೂ ಸಹಾ ರಸ್ತೆಯ ಎಡ ಮತ್ತು ಬಲ ಬದಿಗಳಲ್ಲಿ ರಾರಜಿಸುವ ವಿದ್ಯುತ್ ದೀಪಗಳು ರಸ್ತೆ ಯುದ್ದಕ್ಕೂ ಝಗ ಝಗಿಸುವ ವಿವಿಧ ಅಲಂಕಾರಗಳ ವಿದ್ಯತ್ ಸರಮಾಲೆ ಪ್ರಮುಖ ರಸ್ತೆಯ ಅಲ್ಲಲ್ಲಿ ನವದುರ್ಗಿಯರ ಅವತಾರಗಳ ವಿದ್ಯುತ್ ಅಲಂಕೃತ ದೊಡ್ಡ ದೊಡ್ಡ ಪೋಟೋಗಳು ಎಂಥವರೂ ಸಹಾ ಒಂದು ಕ್ಷಣ ನಿಂತು ನೋಡಿ ಹೋಗುವಷ್ಟು ಸುಂದರವಾಗಿ ಕಾಣಿಸುತ್ತವೆ, ಒಟ್ಟಾರೆ ಈ ಭಾರಿಯ ಹೊಸದುರ್ಗ ದಸರಾ ಅತ್ಯಂತ ಅದ್ದೂರಿ ಮತ್ತು ವೈಭವ ರೀತಿಯಲ್ಲಿ ನಡೆಯುತ್ತಿರುವುದು ಒಂದು ವಿಶೇಷವೇ ಸರಿ.
ಅ.೧೧ರಂದು ನವದುರ್ಗೆಯರ ಪ್ರತಿಷ್ಠಾಪನೆ: ಅ.೧೧ರಂದು ಭಾನುವಾರ ಬೆಳಗ್ಗೆ ೯.೦೫ರಿಂದ ೧೦.೦೫ರವರೆಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರು ಹಾಗೂ ನವದುರ್ಗೆಯರ ಪ್ರತಿಷ್ಠಾಪನೆ ನಡೆಯಲಿದೆ. ಪ್ರತಿದಿನ ಬೆಳಗ್ಗೆ ಅಭಿಷೇಕ, ಗಣಪತಿ ಪೂಜೆ, ಕಳಶ ಸ್ಥಾಪನೆ, ಹೋಮ, ಪೂರ್ಣಾಹುತಿ, ಸುವಾಸಿನಿ ಪೂಜೆ, ಕನ್ಯಾ ಪೂಜೆ, ಗೋ ಪೂಜೆ, ಅಷ್ಟಾವಧಾನ ಸೇವೆ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಅ.೧೮ರಂದು ಅಷ್ಟಮಿಯ ಅಂಗವಾಗಿ ನವಚಂಡಿಕಾ ಹೋಮ, ಕುಮಾರಿ ಪೂಜೆ, ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನೆರವೇರಲಿದ್ದು, ಮಧ್ಯಾಹ್ನ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಅ.೨೧ರಂದು ವಿಜಯದಶಮಿ ಅಂಗವಾಗಿ ಸಂಜೆ ವಿವಿಧ ಕಲಾತಂಡಗಳೊAದಿಗೆ ನಗರದ ರಾಜಬೀದಿಯಲ್ಲಿ ಅಮ್ಮನವರ ವೈಭವದ ಉತ್ಸವ ನಡೆಯಲಿದೆ. ಬಳಿಕ ಮಠದ ಹೊಂಡದಲ್ಲಿ ವಿಸರ್ಜನೆ ನೆರವೇರಲಿದೆ.
ಬಾಕ್ಸ್ ಐಟಂ
ಸುಮಾರು ೪೧*೪೫ ಅಡಿ ವಿಸ್ತೀರ್ಣದಲ್ಲಿ ಯಾಗಶಾಲೆ ನಿರ್ಮಿಸಲಾಗಿದೆ. ಹಿಂದೆ ಮಳೆ ಕೊರತೆ ಎದುರಾದ ಸಂದರ್ಭಗಳಲ್ಲಿ ತಾಯಿಯ ಆರಾಧನೆ ಹಾಗೂ ವಿಶೇಷ ಪೂಜೆಗಳನ್ನು ನಡೆಸಿದ ಬಳಿಕ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬಂದಿರುವ ಅನುಭವವಿದೆ. ಈ ನಂಬಿಕೆಯೊAದಿಗೆ ಪ್ರಸಕ್ತ ಸಾಲಿನಲ್ಲಿಯೂ ಮಳೆ-ಬೆಳೆ ಸಮೃದ್ಧಿಗಾಗಿ ದಸರಾ ಉತ್ಸವವನ್ನು ನಡೆಸಲಾಗುತ್ತಿದೆ.
ಟಿ.ಮಂಜುನಾಥ.ಅಧ್ಯಕ್ಷರು
ಶ್ರೀ ದುರ್ಗಾ ಸೇವಾ ಸಮಿತಿ ಹೊಸದುರ್ಗ

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading