ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ೨೦೨೫-೨೬ ನೇ ಸಾಲಿನ ದಾವಣಗೆರೆ ವಿವಿ ಅಂತರ ಬಿ.ಇಡಿ ಕಾಲೇಜುಗಳ ಕ್ರೀಡಾ ಹಾಗೂ ಸಾಂಸ್ಕೃತಿಕ ಕೂಟವು ಅ.೬ ಮತ್ತು ೭ ರಂದು ಎರಡು ದಿನಗಳ ಕಾಲ ನಡೆಯಿತು. ಈ ಸ್ಪರ್ಧೆಯಲ್ಲಿ ಪಟ್ಟಣದ ಎಸ್. ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಇಂದಿರಾಗಾAಧಿ ಶಿಕ್ಷಣ ಮಹಾವಿದ್ಯಾಲಯದ ಪ್ರಥಮ ಹಾಗೂ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಹಲವು ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ತೋರುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವು.
ಅಥ್ಲೆಟಿಕ್ಸ್ ವಿಭಾಗದಲ್ಲಿ ಪ್ರಥಮ ಬಿ.ಇಡಿ ಪ್ರಶಿಕ್ಷಣಾರ್ಥಿ ಫಕೀರಪ್ಪ ಅವರು ೧೦೦ ಮೀ, ೪೦೦ ಮೀ, ೮೦೦ ಮೀ ಓಟ ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ. ಪುನೀತ ಶಾಟ್ ಪುಟ್ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಹಾಗೂ ಪುರುಷರ ವಿಭಾಗದ ಗುಂಪು ಆಟಗಳಲ್ಲಿ ತ್ರೋಬಾಲ್ ಪ್ರಥಮ, ವಾಲಿಬಾಲ್ ದ್ವಿತೀಯ, ಬಾಲ್ ಬ್ಯಾಡ್ಮಿಂಟನ್ ತೃತೀಯ ಸ್ಥಾನದಲ್ಲಿ ವಿಜೇತರಾಗುವ ಮೂಲಕ ಸಮಗ್ರ ಪ್ರಶಸ್ತಿ ಪಡೆಯುವುದಷ್ಟೇ ಅಲ್ಲದೇ, ಪುರುಷರ ವಿಭಾಗದ ಚಾಂಪಿಯನ್ ಶಿಪ್ ಸಹ ಪಡೆದುಕೊಂಡಿರುವುದು ಮೆಚ್ಚುಗಾರ್ಹ.
ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮವಾಗಿ ಕ್ರೀಡಾ ಸಾಧನೆ ತೋರುವ ಮೂಲಕ ಶಿಕ್ಷಣ ಸಂಸ್ಥೆ ಹಾಗೂ ಕಾಲೇಜಿನ ಕೀರ್ತಿ ಹೆಚ್ಚಿಸಿದ ಪ್ರಶಿಕ್ಷಣಾರ್ಥಿಗಳು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕರಾದ ಎಸ್ ನಾಗಭೂಷಣ್ ಇವರಿಗೆ ಸಂಸ್ಥೆಯ ಕಾರ್ಯದರ್ಶಿ ಕೆ.ಎಸ್.ಕಲ್ಮಠ್, ಅಕಾಡೆಮಿಕ್ ಡೈರೆಕ್ಟರ್ ಎಂ.ಬಿ.ತಿಪ್ಪೇಸ್ವಾಮಿ, ನಿರ್ದೇಶಕ ಸಿದ್ರಾಮಣ್ಣ ಹಾಗೂ ಆಡಳಿತ ಮಂಡಳಿಯವರು, ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗದವರು ಪ್ರಶಿಕ್ಷಣಾರ್ಥಿಗಳ ಕ್ರೀಡಾ ಸಾಧನೆಯನ್ನು ಕೊಂಡಾಡುವ ಮೂಲಕ ಸನ್ಮಾನಿಸಿ, ಅಭಿನಂದಿಸಿದರು.
ಈ ವೇಳೆ ಪ್ರಾಂಶುಪಾಲರಾದ ಡಾ.ಬಸಪ್ಪ, ಉಪನ್ಯಾಸಕರುಗಳಾದ ಎಸ್.ಸುರೇಶ್, ಎಸ್.ರೇಖಾ, ಆರ್.ಹೆಚ್.ಭುವನೇಶ್, ಗೌರಿ ಕಲ್ಮಠ್, ಗವಿರಂಗಪ್ಪ, ಸವಿತಾ, ಲೋಕಣ್ಣ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
About The Author
Discover more from JANADHWANI NEWS
Subscribe to get the latest posts sent to your email.