ಹಿರಿಯೂರು :
ಜೆಜೆ ಹಳ್ಳಿ ಹೋಬಳಿಯಲ್ಲಿ 246 ದಿನಗಳ ನಿರಂತರ ವಿವಿಧ ಮಾದರಿಯ ಹೋರಾಟ ಮಾಡಿದ ಫಲವಾಗಿ ಇಂದು ಸರ್ಕಾರ ವಾಟರ್ ಎಲೆಕ್ಷನ್ ಮಾಡಿ ಅನುಮೋದನೆ ಕೊಟ್ಟು ಟೆಂಡರ್ ಕರೆದು ವರ್ಕ್ ಆರ್ ಕೂಡ ಕೊಟ್ಟಿದ್ದಾರೆ, ಆದರೆ ಕಾಮಗಾರಿ ಪ್ರಾರಂಭಿಸದೆ ವಿಳಂಬ ಮಾಡುತ್ತಾರೆ ಎಂಬುದಾಗಿ ರೈತಸಂಘದ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ಕೆ.ಟಿ.ತಿಪ್ಪೇಸ್ವಾಮಿ ಆರೋಪಿಸಿದ್ದಾರೆ.
ತಾಲ್ಲೂಕಿನ ಜೆಜಿಹಳ್ಳಿ ಮತ್ತು ಕರಿಯಾಲ ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತ ಮುಖಂಡರ ಸಭೆಯನ್ನು ಜೆಜೆಹಳ್ಳಿ ಗ್ರಾಮದ ಗಣೇಶ ದೇವಸ್ಥಾನದಲ್ಲಿ ಕರೆಯಲಾಗಿದ್ದ ಸಭೆಯನ್ನು ಉದ್ದೇಶಿಸಿ, ಅವರು ಮಾತನಾಡಿದರು.
ಬರುವ ಬೇಸಿಗೆ ಒಳಗೆ ಜಲಾಶಯ 16 ಕೆರೆಗಳಿಗೆ ನೀರು ತುಂಬಿಸದೆ ಹೋದರೆ ನಾವು ಸಾಕಿರುವ ಎಲ್ಲಾ ಮರಗಳು ಫಸಲುಗಳು ಒಣಗಿ ಹೋಗುವ ಜೊತೆಗೆ ಜನಜಾನುವಾರುಗಳಿಗೆ ಕುಡಿಯುವ ನೀರಿಗೆ ಆಹಾಕಾರ ಉಂಟಾಗುತ್ತದೆ, ಆದ್ದರಿಂದ ಸರ್ಕಾರ ಕೂಡಲೇ ಕಾಮಗಾರಿ ಪ್ರಾರಂಭಿಸಿ ಇನ್ನು ಮೂರ್ನಾಲ್ಕು ತಿಂಗಳಿನ ಒಳಗಾಗಿ ನೀರು ಹರಿಸಬೇಕು ಎಂಬುದಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ವಾಣಿವಿಲಾಸ ಜಲಾಶಯಕ್ಕೆ ಪ್ರತಿ ವರ್ಷ 10 ಟಿಎಂಸಿ ನೀರು ಮೀಸಲು ಬೇಕು ಈ ವರ್ಷ ಭದ್ರಾ ಜಲಾಶಯದಿಂದ ಎರಡು ಟಿಎಂಸಿ ನೀರು ಹರಿಸಬೇಕು.ಜೆಜೆ ಹಳ್ಳಿ ಹೋಬಳಿಯ ಕಲ್ವಳ್ಳಿ ಭಾಗದ ಗಾಯತ್ರಿ ಜಲಾಶಯ ಸೇರಿ 16 ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸಿ ನೀರು ಹರಿಸಬೇಕು
ಕಸಬಾ ಹಾಗೂ ಐಮಂಗಳ ಭಾಗದ ಕೆರೆಗಳಿಗೆ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಿ ಕೆರೆಗಳಿಗೆ ತುಂಬಿಸಬೇಕು, ಧರ್ಮಪುರ ಹೋಬಳಿಯ ವಿವಿಧ ಕೆರೆಗಳಿಗೆ ಏತ ನೀರಾವರಿ ಮಾಡಿದ್ದು, ಈ ಕೆರೆಗಳಿಗೆ ವಾಟರ್ ಅಲೋಕೇಶನ್ ಮಾಡಬೇಕು ಮತ್ತು ಇನ್ನೂ ಉಳಿದ ಕೆರೆಗಳಿಗೆ ಪೈಪ್ ಲೈನ್ ಕಾಮಗಾರಿ ಮಾಡಿ ನೀರು ತುಂಬಿಸಬೇಕು.
ವಾಣಿವಿಲಾಸ ಜಲಾಶಯದಿಂದ ಯಾವುದೇ ಭಾಗಕ್ಕೂ ವಾಟರ್ ಅಲೊಕೇಶನ್ ಮಾಡಬಾರದು, ವಾಣಿವಿಲಾಸ ಸಕ್ಕರೆ ಕಾರ್ಖಾನೆಯನ್ನು ಪುನಃ ಚೇತನ ಉಳಿಸಬೇಕು ಈ ನಮ್ಮ ಎಲ್ಲ ಒತ್ತಾಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಎಲ್ಲಾ ಕಾಮಗಾರಿಗಳನ್ನು ಮಾಡಿ ನೀರು ಹರಿಸದೆ ಹೋದರೆ ಮುಂದೆ ಬರುವ ಬೈ ಎಲೆಕ್ಷನ್ ನಲ್ಲಿ ನೋಟಕ್ಕೆ ಮತಹಾಕಿ ಚುನಾವಣೆರದ್ದುಗೊಳಿಸಲು ಹಿರಿಯೂರು ತಾಲೂಕಿನ ರೈತರು ತೀರ್ಮಾನಿಸಿದ್ದಾರೆ ಎಂಬುದಾಗಿ ಹೇಳಿದರು.
ಈ ಸಭೆಯಲ್ಲಿ ರೈತಸಂಘದ ಗೌರವಾಧ್ಯಕ್ಷರಾದ ಆಲೂರು ಸಿದ್ಧರಾಮಣ್ಣ, ತಾಲೂಕು ಅಧ್ಯಕ್ಷರಾದ ವೆಂಕಟೇಶ್, ಹೋಬಳಿ ಅಧ್ಯಕ್ಷರಾದ ಈರಣ್ಣ, ಎಂ.ಆರ್.ಈರಣ್ಣ, ವಜೀರ್ ಸಾಬ್, ಕಲೀಮ್ ಸಾಬ್, ಮಹೇಶ್, ಜಯರಾಮಣ್ಣ, ಮಂಜುನಾಥ್, ಕರಿಯಪ್ಪ, ಅಶ್ವತಪ್ಪ, ಕೆ.ಆರ್.ಹಳ್ಳಿ ರಾಜಪ್ಪ, ಬಾಲಕೃಷ್ಣ ಇತರರು ಭಾಗವಹಿಸಿದ್ದರು.
About The Author
Discover more from JANADHWANI NEWS
Subscribe to get the latest posts sent to your email.