October 8, 2026


ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ: ತಾಲೂಕಿನಲ್ಲಿ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬರಬೇಕು, ಕೆರೆ-ಕಟ್ಟೆಗಳು ಹಾಗೂ ತೋಟಗಳು ನೀರಿನಿಂದ ತುಂಬಬೇಕು, ಭದ್ರಾ ನೀರು ಸಮರ್ಪಕವಾಗಿ ಹರಿದು ರೈತರ ಬದುಕು ಹಸನಾಗಬೇಕು ಎಂಬ ಸಂಕಲ್ಪದೊAದಿಗೆ ಶ್ರೀ ದುರ್ಗಾ ಸೇವಾ ಸಮಿತಿ ವತಿಯಿಂದ ದ್ವಿತೀಯ ಸಂಕಲ್ಪದ ೯ನೇ ವರ್ಷದ ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರ ಶರನ್ನವರಾತ್ರಿ ದಸರಾ ಮಹೋತ್ಸವವನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ಟಿ. ಮಂಜುನಾಥ ಹೇಳಿದರು.
ಪಟ್ಟಣದ ಅಶೋಕ ರಂಗಮAದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಮಳೆ ಕೊರತೆಯಿಂದ ಬರದ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ತಾಯಿಯ ಕೃಪೆಯಿಂದ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು, ತೋಟಗಳು ತುಂಬಿ ರೈತರು ಸಮೃದ್ಧಿಯಾಗಬೇಕು ಎಂಬ ಉದ್ದೇಶದಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಆರAಭದಲ್ಲಿ ಒಂದು ಯಾಗಶಾಲೆ ಹಾಗೂ ಒಂದು ಹೋಮಕುಂಡ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಕುಮೂರ್ತಿ ಗಣಪತಿ ಅವರ ಸಲಹೆಯಂತೆ ಶಾಸ್ತ್ರೋಕ್ತವಾಗಿ ಐದು ಪ್ರಮುಖ ಹೋಮಕುಂಡಗಳನ್ನು ನಿರ್ಮಿಸಿ, ವಿವಿಧ ದಿಕ್ಕುಗಳಲ್ಲಿ ಸಂಬAಧಿಸಿದ ಹೋಮಗಳನ್ನು ನೆರವೇರಿಸಲು ವ್ಯವಸ್ಥೆ ಮಾಡಲಾಗಿದೆ ಎಂದರು.
ದ್ವಿತೀಯ ಸಂಕಲ್ಪದ ೯ನೇ ವರ್ಷ: ಒಂದು ಸಂಕಲ್ಪದೊAದಿಗೆ ಒಂಬತ್ತು ವರ್ಷಗಳ ಕಾಲ ದಸರಾ ಉತ್ಸವ ನಡೆಸಿದ ಬಳಿಕ ಕನಿಷ್ಠ ಒಂದು ವರ್ಷ ವಿರಾಮ ನೀಡುವ ಪರಂಪರೆ ಇದೆ. ಈ ಹಿನ್ನೆಲೆಯಲ್ಲಿ ಹಿಂದೆ ಸುಮಾರು ಆರು-ಏಳು ವರ್ಷಗಳ ಕಾಲ ಉತ್ಸವಕ್ಕೆ ವಿರಾಮ ನೀಡಲಾಗಿತ್ತು. ಬಳಿಕ ೨೦೧೮ರಲ್ಲಿ ಹೊಸ ತಂಡ ರಚನೆಯಾಗಿ ಮಂಜುನಾಥ ಅವರ ನೇತೃತ್ವದಲ್ಲಿ ದಸರಾ ಉತ್ಸವ ಪುನರಾರಂಭಗೊAಡಿತು. ಆರಂಭದಲ್ಲಿ ಸಾಮಾನ್ಯ ಸದಸ್ಯರಾಗಿ ತಂಡ ಸೇರಿದ್ದ ತಾವು ನಂತರದ ದಿನಗಳಲ್ಲಿ ಉತ್ಸವದ ಕಾರ್ಯಚಟುವಟಿಕೆಗಳಲ್ಲಿ ಪ್ರಮುಖವಾಗಿ ತೊಡಗಿಸಿಕೊಂಡಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ದ್ವಿತೀಯ ಸಂಕಲ್ಪದ ೯ ನೇ ವರ್ಷದ ದಸರಾ ಉತ್ಸವ ನಡೆಯುತ್ತಿದೆ ಎಂದು ಹೇಳಿದರು.
ನವದುರ್ಗೆಯರ ಪ್ರತಿಷ್ಠಾಪನೆ: ಉತ್ಸವದಲ್ಲಿ ಒಂಬತ್ತು ದುರ್ಗಿಯರ ಅವತಾರಗಳನ್ನು ಪ್ರತಿಷ್ಠಾಪಿಸಿ ಪ್ರತಿದಿನ ಅಮ್ಮನವರಿಗೆ ಅಭಿಷೇಕ, ಹೋಮ, ಸಾಮೂಹಿಕ ಕೋಟಿ ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಸಂಜೆ ಲಲಿತಾ ಸಹಸ್ರನಾಮದೊಂದಿಗೆ ಮಾತೆಯರಿಂದ ಸಾಮೂಹಿಕ ಕೋಟಿ ಕುಂಕುಮಾರ್ಚನೆ ನಡೆಯಲಿದೆ. ಸಂಜೆ ೭.೩೦ರಿಂದ ಹರಿಕಥೆ, ಜಾನಪದ, ಭಜನೆ, ನೃತ್ಯ, ಸುಗಮ ಸಂಗೀತ ಸೇರಿದಂತೆ ಧಾರ್ಮಿಕ ಭಾವನೆಗೆ ಪೂರಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕೇವಲ ಮನರಂಜನೆಗೆ ಆದ್ಯತೆ ನೀಡದೆ, ದೇವಿಯ ಆರಾಧನೆಗೆ ಪೂರಕವಾಗುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆರ್.ಜಿ. ಪ್ರಸನ್ನ, ರಾಜು, ಪ್ರವೀಣ್, ದಿವಾಕರ್, ಮಂಜಣ್ಣ, ಶೀತಲ್ ಕುಮಾರ್, ಡಿ.ಎಚ್. ನಾಗರಾಜ್, ಗುರುಪ್ರಸಾದ್, ತಿಪ್ಪೇಸ್ವಾಮಿ, ರವಿಕುಮಾರ್, ಕುಮಾರ್, ಬಂಬು ಉಮೇಶ್, ರಾಮಕೃಷ್ಣಪ್ಪ, ಎ.ಟಿ.ತಿಮ್ಮಣ್ಣ ಸೇರಿದಂತೆ ಸಮಿತಿಯ ಸದಸ್ಯರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading