ವರದಿ:ನಾಗತಿಹಳ್ಳಿಮಂಜುನಾಥ್
ಹೊಸದುರ್ಗ: ಪ್ರತಿಯೋಬ್ಬ ತಂದೆ ತಾಯಿ ಮತ್ತು ಪೋಷಕರಲ್ಲಿ ತಮ್ಮ ಮಕ್ಕಳ ಬಗ್ಗೆ ಅರಿವು, ಕಾಳಜಿ ಮತ್ತು ಜಾಗೃತಿ ಇರಬೇಕು, ಶಾಲಾ-ಕಾಲೇಜುಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿ ಸುಮ್ಮನೆ ಕೂರಬಾರದು ಅವರ ಚಲನ-ವಲನ ಹಾಗೂ ಓದು-ಬರಹ ದ ಕಡೆ ಸದಾ ಗಮನ ಹರಿಸುತ್ತಿರಬೇಕು ಎಂದು ಕನಕ ವಿದ್ಯಾ ಸಂಸ್ಧೆಯ ಸಂಸ್ಧಾಪಕ ಅಧ್ಯಕ್ಷ ಡಾ: ಎಂ.ಹೆಚ್.ಕೃಷ್ಣಮೂರ್ತಿ ಪೋಷಕರಿಗೆ ಕಿವಿ ಮಾತು ಹೇಳಿದರು.
ಪಟ್ಟಣದ ರಂಗನಾಥ ಪಿ.ಯು ಕಾಲೇಜಿನ ಆವರಣದಲ್ಲಿ ಬುಧವಾರ ಆಯೋಜಿಸಲಾಗಿದೆ ವಿದ್ಯಾಥಿಗಳಿಗೆ ವಿಶೇಷ ಉಪನ್ಯಾಸ ಮತ್ತು ಪೋಷಕರ-ವಿದ್ಯಾರ್ಥಿಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳು ಓದುವ ವಯಸ್ಸಿಲ್ಲಿ ಓದಬೇಕು ಹಾಗಾಗಿ ಯಾವ ಪೋಷಕರೂ ಸಹಾ ಮಕ್ಕಳಿಗೆ ಹೆಚ್ಚು ಮನೆಕೆಲಸ ಮತ್ತು ತಮ್ಮ ಸ್ವಂತ ಕೆಲಸಗಳಿಗೆ ಬಳಸಿಕೊಳ್ಳದೆ ಅವರನ್ನು ಚೆನ್ನಾಗಿ ಓದಲು ಬಿಡಿ,ನಿಮ್ಮ ಮಕ್ಕಳು ದೇಶದ ಮುಂದಿನ ಭವಿಷ್ಯದ ರುವಾರಿಗಳು, ವಿದ್ಯಾರ್ಥಿಗಳು ಕೂಡ ತಮ್ಮ ಜವಾಬ್ದಾರಿಯನ್ನ ಮರೆಯಬಾರದು ಎಂದು ಎಚ್ಚರಿಕೆ ಮಾತುಗಳನ್ನ ಹೇಳಿದರು.
ವಿಶೇಷ ಉಪನ್ಯಾಸ ನೀಡಿದ ರಾಜ್ಯ ಸಂಪನ್ಮೂಲ ವ್ಯಕ್ತಿ ಪ್ರೋ.ಡಾ: ರಾಜೇಂದ್ರಕುಮಾರ್ ಕಾಲೇಜಿಗೆ ಬರುವ ವಿದ್ಯಾರ್ಥಿಗಳಲ್ಲಿ ಮೋದಲು ಶಿಸ್ತು. ಸಂಯಮ, ಗೌರವ ಜೋತೆಗೆ ಶ್ರದ್ದೆ ಇರಬೇಕು,ಯಾವ ಸಮಯದಲ್ಲಿ ಓದಬೇಕು.ಬರೆಯಬೇಕು, ದಿನ ನಿತ್ಯ ನಾವು ಯಾವ ಸಮಯಲ್ಲಿ ಯಾವ ಕೆಲಸವನ್ನ ಮಾಡಬೇಕು ಎಂಬ ಮತ್ತಿತರೆ ವಿವರಗಳ ಬಗ್ಗೆ ನೀವೇ ವೇಳಾ ಪಟ್ಟಿ ರಚನೆ ಮಾಡಿಕೊಂಡು ಸತತ ಹಾಗೂ ನಿರಂತರ ಅಭ್ಯಾಸದ ಕಡೆ ಗಮನ ಕೋಡಬೇಕು ಎಂದ ಅವರು ಮಕ್ಕಳ ಅಭಿವೃದ್ದಿ ಮತ್ತು ಅವರ ಶ್ರೇಯಸ್ಸಿನ ಪೋಷಕರು ಮತ್ತು ಶಿಕ್ಷಕರಾದವರು ಅತ್ಯಂತ ಮುಖ್ಯ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಎಸ್.ಎಲ್.ವಿ ಶಿಕ್ಷಣ ಸಂಸ್ಧೆ ಹಾಗೂ ಆರ್.ವಿ ಶಿಕ್ಷಣ ಸಂಸ್ಧೆಯ ಟ್ರಸ್ಟಿ ಎನ್.ಆರ್.ನಂದೀಶ್, ವಿ.ಎಸ್.ದಯಾನಂದಕುಮಾರ್, ಪ್ರಾಂಶುಪಾಲ ಡಾ:ಟಿ.ಎಸ್.ಜಗದೀಶ್, ಎಸ್.ಎಲ್.ವಿ ಶಿಕ್ಷಣ ಸಂಸ್ಧೆಯ ಕಾರ್ಯಧರ್ಶಿ ಎನ್.ಎನ್.ಶಶಾಂಕ್, ಖಜಾಂಚಿ ಎನ್.ಎನ್. ಅಕಿಲೇಷ್, ಪ್ರಗತಿಪರ ಚಿಂತಕ ನಾಗತಿಹಳ್ಳಿಮಂಜುನಾಥ್ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗ ಸೇರಿದಂತೆ ಸಿಬ್ಬಂಧಿ ವರ್ಗದವರು ಉಪಸ್ಧಿತರಿದ್ದರು.

About The Author
Discover more from JANADHWANI NEWS
Subscribe to get the latest posts sent to your email.