ಚಿತ್ರದುರ್ಗಫೆ.7:
ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಮೆಕ್ಕೆಜೋಳ ಮಾರಾಟ ಮಾಡಲು ರೈತರ ನೋಂದಣಿ ಅವಧಿಯನ್ನು ಇದೇ ಫೆಬ್ರವರಿ 13ರವರೆಗೆ ಹಾಗೂ ಯುಎಂಪಿ ವೇದಿಕೆಯಡಿ ವಹಿವಾಟು ಅಂತ್ಯಗೊಳಿಸುವ ದಿನಾಂಕವನ್ನು ಫೆ.21 ರವರೆಗೆ ಪುನರ್ ನಿಗಧಿಪಡಿಸಿ ಆದೇಶಿಸಿದೆ.
2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ ಬೆಲೆ ವ್ಯತ್ಯಾಸದ ಮೊತ್ತವನ್ನು ಪಾವತಿಸುವ ಸಂಬಂಧ ಈ ಹಿಂದೆ ಜಿಲ್ಲಾವಾರು ನಿಗದಿಪಡಿಸಲಾಗಿದ್ದ ಮಿತಿಯನ್ನು ಹಿಂಪಡೆಯಲಾಗಿದೆ. ಆಯಾ ಜಿಲ್ಲೆಗಳಲ್ಲಿ ಮೆಕ್ಕೆಜೋಳ ಬೆಳೆದ ರೈತರುಗಳಿಗೆ ಮೊದಲು ನೋಂದಣಿ ಮಾಡಿಕೊಂಡವರಿಗೆ ಪ್ರಥಮ ಆದ್ಯತೆ ನೀಡುವ ಮೇರೆಗೆ ಮೆಕ್ಕೆಜೋಳ ಉತ್ಪನ್ನದ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯನ್ನು ರಾಜ್ಯ ವ್ಯಾಪ್ತಿಗೆ ಗರಿಷ್ಟ ಪ್ರಮಾಣವನ್ನು 40 ಲಕ್ಷ ಕ್ವಿಂಟಾಲ್‍ಗೆ ನಿಗಧಿಪಡಿಸಿ ಆದೇಶಿಸಿದೆ. ಈ ಯೋಜನೆಯಡಿ ರೈತರು ತಮ್ಮ ಉತ್ಪನ್ನವನ್ನು ಮಾರಾಟ ಮಾಡಿ ಬೆಲೆ ವ್ಯತ್ಯಾಸದ ಸೌಲಭ್ಯ ಪಡೆಯುವಂತೆ ಕೃಷಿ ಮಾರಾಟ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
=============
About The Author
Discover more from JANADHWANI NEWS
Subscribe to get the latest posts sent to your email.