ಚಳ್ಳಕೆರೆ ತಾಲ್ಲೂಕಿನಲ್ಲಿ ಗ್ರಾಮಗಳ ಅಭಿವೃದ್ಧಿಗೆ ಮೀಸಲಾದ 15ನೇ ಹಣಕಾಸು ಆಯೋಗದ ಅನುದಾನವನ್ನು ನಕಲಿ ಬಿಲ್ಲುಗಳ ಮೂಲಕ ದುರುಪಯೋಗಪಡಿಸಿಕೊಂಡಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ.
ಏಳು ಗ್ರಾಮ ಪಂಚಾಯಿತಿಗಳಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಲಕ್ಷಾಂತರ ರೂಪಾಯಿ ಹಣ ಡ್ರಾ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.
ದೂರಿನ ಹಿನ್ನೆಲೆ
ಬೇಡರಹಳ್ಳಿ ಗ್ರಾಮದ ನಿವಾಸಿ ವೈ.ಇ. ನವೀನ್ ರೆಡ್ಡಿ ಸಲ್ಲಿಸಿದ ದೂರಿನ ಮೇರೆಗೆ ನಡೆದ ಪ್ರಾಥಮಿಕ ತನಿಖೆಯಲ್ಲಿ,
2023–24, 2024–25 ಹಾಗೂ 2025–26 (20-08-2025ರವರೆಗೆ) ಅವಧಿಯಲ್ಲಿ 15ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ ಅನುದಾನವನ್ನು ನಿಯಮ ಉಲ್ಲಂಘಿಸಿ ವೆಚ್ಚ ಮಾಡಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ.







ನಕಲಿ ಬಿಲ್ – ನಕಲಿ ಖರೀದಿ?
ದೂರಿನ ಪ್ರಕಾರ:
ಮೂರು–ನಾಲ್ಕು ಅಂಗಡಿಗಳಿಂದ ಖರೀದಿ ಮಾಡಿದಂತೆ ದಾಖಲೆ ತೋರಿಸಿ, ವಾಸ್ತವದಲ್ಲಿ ಒಂದೇ ಅಂಗಡಿಯಿಂದ ಖರೀದಿ
ಕೆಲವು ಅಂಗಡಿಗಳಿಂದ ಯಾವುದೇ ವಸ್ತು ಖರೀದಿ ಮಾಡದೇ ನಕಲಿ ಬಿಲ್ಲುಗಳ ಮೂಲಕ ಹಣ ಪಾವತಿ
ಒಟ್ಟು ವ್ಯವಹಾರದಲ್ಲಿ 10 ರಿಂದ 12% ಜಿಎಸ್‌ಟಿ ಮೊತ್ತವನ್ನು ಅನಧಿಕೃತವಾಗಿ ವಸೂಲಿ ಮಾಡಿದ ಶಂಕೆ
ಕಾನೂನು ಉಲ್ಲಂಘನೆ ಸ್ಪಷ್ಟ
ತಾಲ್ಲೂಕು ಪಂಚಾಯತ್ ಚಳ್ಳಕೆರೆ ಕಾರ್ಯನಿರ್ವಾಹಕ ಅಧಿಕಾರಿಗಳ ಆದೇಶದಂತೆ ಸಹಾಯಕ ಲೆಕ್ಕಾಧಿಕಾರಿ ಹಾಗೂ ಸಹಾಯಕ ನಿರ್ದೇಶಕರು (ಪಂಚಾಯತ್ ರಾಜ್) ನಡೆಸಿದ ತನಿಖೆಯಲ್ಲಿ,
ಆನ್‌ಲೈನ್ ವರದಿಯಲ್ಲಿ ಲಕ್ಷ ಲಕ್ಷ ರೂ. ವೆಚ್ಚ ಮಾಡಿರುವುದು ದಾಖಲಾಗಿದ್ದರೂ,
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 – ಸೆಕ್ಷನ್ 241ರಂತೆ ಕಡ್ಡಾಯವಾಗಿರುವ ವಾರ್ಷಿಕ ಆಯವ್ಯಯವನ್ನು ತಯಾರಿಸಿ ಅನುಮೋದನೆ ಪಡೆಯದೇ ವೆಚ್ಚ
ಕರ್ನಾಟಕ ಪಾರದರ್ಶಕತೆ ಕಾಯ್ದೆ ಸ್ಪಷ್ಟ ಉಲ್ಲಂಘನೆ
2023–24ನೇ ಸಾಲಿನ ಸ್ಥಳೀಯ ಲೆಕ್ಕಪರಿಶೋಧನಾ ವರದಿಯಲ್ಲಿ ಆಯವ್ಯಯ ಸಲ್ಲಿಸದಿರುವುದು ದಾಖಲು
2024–25ರ ಲೆಕ್ಕಪರಿಶೋಧನಾ ವರದಿ ಇನ್ನೂ ಲಭ್ಯವಿಲ್ಲ
ಪಿಡಿಒಗಳಿಗೆ 7 ದಿನಗಳ ಗಡುವು
ಚಿತ್ರದುರ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪರವಾಗಿ ಸಂಬಂಧಪಟ್ಟ 7 ಪಿಡಿಒಗಳಿಗೆ 7 ದಿನಗಳೊಳಗೆ ಲಿಖಿತ ಸಮಜಾಯಿಷಿ ನೀಡುವಂತೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.
ನಿಗದಿತ ಅವಧಿಯಲ್ಲಿ ಸಮರ್ಪಕ ಉತ್ತರ ನೀಡದಿದ್ದರೆ,
ಸಿ.ಸಿ.ಎ ನಿಯಮಗಳನ್ವಯ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ನೋಟಿಸ್‌ನಲ್ಲಿ ಎಚ್ಚರಿಸಲಾಗಿದೆ.
ಇತರ ಪಂಚಾಯಿತಿಗಳಲ್ಲೂ ಶಂಕೆ
ಸ್ಥಳೀಯರ ಪ್ರಕಾರ ಇದೇ ಮಾದರಿಯ ಅಕ್ರಮಗಳು ಈ ಗ್ರಾಮ ಪಂಚಾಯಿತಿಗಳಲ್ಲೂ ನಡೆದಿರುವ ಶಂಕೆ ವ್ಯಕ್ತವಾಗಿದೆ:
ಹೊನ್ನೂರಪ್ಪ – ಪಿ.ಮಹದೇವಪುರ
ಕೆ.ಓ. ಶಶಿಕಲಾ – ಎನ್.ದೇವರಹಳ್ಳಿ
ಜಯಣ್ಣ – ಕಾಲುವೆಹಳ್ಳಿ
ಗೌತಮಿ – ರಾಮಜೋಗಿಹಳ್ಳಿ
ಈಶ್ವರಪ್ಪ – ಮಲ್ಲೂರಹಳ್ಳಿ
ದೇವೇಂದ್ರಪ್ಪ – ಬೆಳಗೆರೆ
ಕೆ.ಓ. ಶಶಿಕಲಾ –
ಕಾರಣ ಕೇಳಿನೋಟಿಸ್ ಜಾರಿ.

ಈಗಾಗಲೆ ಸಂಬಂಧಪಟ್ಟ ಗ್ರಾಮಪಂಚಾಯಿತಿ ಗಳ ಅಧ್ಯಕ್ಷ ಹಾಗೂ ಪಿಡಿಒ ಗಳಿಗೆ ನೋಟಿಸ್ ಜಾರಿ ಮಾಡಿದ್ದು ಅವರಿಂದ ಏನು ಉತ್ತರ ಬರುತ್ತದೆ ಎಂದು ನೋಡಿ ಮುಂದಿನ ಕ್ರಮ ಕೈಕೊಳ್ಳಲಾಗುವುದು
ಶಶಿಧರ್. ತಾಪಂ ಇಒ ಚಳ್ಳಕೆರೆ.
ಜನಧ್ವನಿ ನ್ಯೂಸ್ | ಚಳ್ಳಕೆರೆ
About The Author
Discover more from JANADHWANI NEWS
Subscribe to get the latest posts sent to your email.