ಚಳ್ಳಕೆರೆ: ಭಾರತೀಯ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ, ಗಾನಗಂಧರ್ವ ಎಸ್ಪಿ ಬಾಲ ಸುಬ್ರಮಣ್ಯಂ ಅವರ ಜನ್ಮ ದಿನವನ್ನು ಚಳ್ಳಕೆರೆ ನಗರದ ಕಿವುಡ ಮತ್ತು ಮೂಗರ ಶಾಲೆಯಲ್ಲಿ ಗಾಯಕ ಮುತ್ತುರಾಜ್ ಗೆಳೆಯರ ಬಳಗ ಮತ್ತು ಸಂಗೀತಾಸಕ್ತರು ಸಂಭ್ರಮದಿಂದ ಆಚರಿಸಿದರು.

ಕನ್ನಡ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿ ಸಂಗೀತ ಲೋಕದಲ್ಲಿ ಅಚ್ಚಳಿಯದ ಛಾಪು ಮೂಡಿಸಿರುವ ಎಸ್‌ಪಿಬಿ ಅವರ ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಕಾರ್ಯಕ್ರಮದಲ್ಲಿ ಅಭಿಮಾನಿಗಳು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಅವರ ಹಾಡುಗಳನ್ನು ಹಾಡುವ ಮೂಲಕ ಗೌರವ ನಮನ ಸಲ್ಲಿಸಿದರು. ಸಂಗೀತ ಕ್ಷೇತ್ರಕ್ಕೆ ಅವರು ನೀಡಿರುವ ಅಪಾರ ಕೊಡುಗೆ, ಯುವ ಗಾಯಕರಿಗೆ ನೀಡಿದ ಪ್ರೋತ್ಸಾಹ ಹಾಗೂ ಅವರ ಸರಳ ವ್ಯಕ್ತಿತ್ವವನ್ನು ನೆನೆದು ಗಾಯಕ ಕೆ.ಟಿ. ಮುತ್ತುರಾಜ್ ಮಾತನಾಡಿದರು.
ಕನ್ನಡ ಚಿತ್ರರಂಗ ಸೇರಿದಂತೆ ದೇಶದಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಎಸ್‌ಪಿಬಿ ಅವರ ಹಾಡುಗಳು ಇಂದಿಗೂ ಸಂಗೀತ ಪ್ರೇಮಿಗಳ ಮನಸ್ಸಿನಲ್ಲಿ ಜೀವಂತವಾಗಿದ್ದು, ಅವರ ಜನ್ಮ ದಿನದಂದು ಈ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಗಾಯಕ ಕೆ.ಟಿ. ಮುತ್ತುರಾಜ್, ತಿಪ್ಪೇಸ್ವಾಮಿ ವೆಂಕಟೇಶ್, ಓಬಣ್ಣ, ಅಭಿನವ ಮುತ್ತುರಾಜ್ ಚರಣ್ ಮುತ್ತುರಾಜ್, ಸೇರಿದಂತೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಇದ್ದರು
About The Author
Discover more from JANADHWANI NEWS
Subscribe to get the latest posts sent to your email.