ನಾಯಕನಹಟ್ಟಿ: ಆಸ್ತಿ-ಸಂಪತ್ತು ಶಾಶ್ವತವಲ್ಲ. ಆದರೆ ಕಲಿತ ವಿದ್ಯೆ ಜೀವನಪೂರ್ತಿ ನಮ್ಮೊಂದಿಗೆ ಇರುತ್ತದೆ. ಹೀಗಾಗಿ ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ಗುರುಗಳ ಸೇವೆ ಅನನ್ಯವಾದದ್ದು ಎಂದು ನಲಗೇತನಹಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎನ್. ಮುತ್ತಯ್ಯ ಹೇಳಿದರು.



ಹೋಬಳಿಯ ನಲಗೇತನಹಟ್ಟಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಭಾನುವಾರ 2004-05ನೇ ಸಾಲಿನ 10ನೇ ತರಗತಿಯ ಹಳೆಯ ವಿದ್ಯಾರ್ಥಿಗಳ ವತಿಯಿಂದ ಆಯೋಜಿಸಿದ್ದ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಳೆಯ ವಿದ್ಯಾರ್ಥಿಗಳು ಹಲವು ವರ್ಷಗಳ ಬಳಿಕ ತಮ್ಮನ್ನು ವಿದ್ಯೆ ಕಲಿಸಿದ ಗುರುಗಳನ್ನು ಒಂದೆಡೆ ಸೇರಿಸಿ ಗೌರವಿಸುವ ಮೂಲಕ ಗುರು-ಶಿಷ್ಯರ ಬಾಂಧವ್ಯಕ್ಕೆ ಸಾಕ್ಷಿಯಾದರು. ಶಾಲಾ ದಿನಗಳ ನೆನಪುಗಳನ್ನು ಮೆಲುಕು ಹಾಕಿ, ಪರಸ್ಪರ ಸ್ನೇಹ-ಸಂಬಂಧಗಳನ್ನು ಪುನರ್‌ಸ್ಥಾಪಿಸಿಕೊಂಡರು.
ಇನ್ನೂ ನಲಗೇತನಹಟ್ಟಿಯಲ್ಲಿ ಗಾನ ಕೋಗಿಲೆ ಎಂದು ಖ್ಯಾತಿ ಪಡೆದ ಗಾಯಕ ಕೆ.ಟಿ. ಮುತ್ತುರಾಜ್ ಸಂಗೀತದ ಮನೋರಂಜನೆ ನೀಡಿದರು
ಕಾರ್ಯಕ್ರಮದಲ್ಲಿ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಪಾಲಮ್ಮ ಪೂರ್ಣ ಓಬಯ್ಯ, ಡಾ. ಪಾಲಾಕ್ಷಿ ಸೇರಿದಂತೆ ಶಿಕ್ಷಕರಾದ ಎನ್.ಎಂ. ರಮೇಶ್, ಎಲ್ ಸೀತಾರಾಮಯ್ಯ,ಎಂ. ವಿ. ಗುರುಸಿದ್ದಪ್ಪ, ಸಿ.ಎಸ್. ತಿಪ್ಪೇಸ್ವಾಮಿ,ಎಂ. ಎಚ್, ನರಸನಗೌಡ್ರು, ಎ.ಎಸ್. ಲೇಸಣ್ಣ, ಡಿ. ವೆಂಕಟೇಶ್ ರೆಡ್ಡಿ, ಹುರುಳಿ ಬಸವರಾಜ್, ಟಿ.ಚಿನ್ನಯಿರೆಡ್ಡಿ ಎಸ್.ಜಿ. ಬಸವರಾಜ್, ತಿಪ್ಪಮ್ಮನಾಗರಾಜ್, ಶ್ರೀಮತಿ ರೇಣುಕಮ್ಮ,
ಎಂ. ವಿಶ್ವನಾಥ, ಬಿ.ವಿ. ನಾಥ್, ಬಿ.ಎಸ್ ಉಮೇಶ್, ಶ್ರೀಮತಿ ಕೆ.ಸಿ. ಶೋಭ, ಶ್ರೀಮತಿ ವಿದ್ಯಾ, ಎ.ಜೆ. ಸಂಜೀವಿನಿ, ಶ್ರೀಮತಿ ಜ್ಯೋತಿ ,ಸಿ.ಬಿ. ಉಮೇಶ್, ಚನ್ನಗೌರಮ್ಮ, ಆರ್ ಟಿ ಸತೀಶ್ ಬಾಬು,ಆಶ್ರಫುಲ್ಲಾ, ಗಂಗಾಧರಪ್ಪ, ವೇಣುಗೋಪಾಲ್, ಅಶೋಕ್ ಸೇರಿದಂತೆ ಹಲವು ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಳೆಯ ವಿದ್ಯಾರ್ಥಿಗಳು ತಮ್ಮ ಗುರುಗಳನ್ನು ಸನ್ಮಾನಿಸಿ, ಗುರುಗಳ ಆಶೀರ್ವಾದ ಪಡೆದರು. ಬಳಿಕ ಶಾಲಾ ದಿನಗಳ ಸ್ಮರಣೀಯ ಘಟನೆಗಳನ್ನು ಹಂಚಿಕೊಂಡು ಸ್ನೇಹ ಸಮ್ಮಿಲನದ ಮೂಲಕ ಸಂತಸ ಹಂಚಿಕೊಂಡರು.
About The Author
Discover more from JANADHWANI NEWS
Subscribe to get the latest posts sent to your email.