ಮೊಳಕಾಲ್ಮೂರಿನ ಸಾಹಿತಿ ಜಬೀವುಲ್ಲಾ ಎಂ. ಅಸದ್ ಅವರಿಗೆ ಒಲಿದ ರಾಷ್ಟ್ರೀಯ ಗಜಲ್ ಸಿರಿ ಪ್ರಶಸ್ತಿಯ ಗರಿ
ಗಜಲ್ ರಚನೆ, ಅಧ್ಯಯನ, ವಿಮರ್ಶೆ, ಉಪನ್ಯಾಸದ ಜೊತೆಗೆ ಹಲವು ಗಜಲ್ ಸಂಕಲನಗಳಿಗೆ ರೇಖಾಚಿತ್ರಗಳು ಮತ್ತು ಮುಖಪುಟ ವಿನ್ಯಾಸಗಳನ್ನು ಮಾಡುವುದರ ಮುಖಾಂತರ ಕನ್ನಡ ಗಜಲ್ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ, ಮೊಳಕಾಲ್ಮೂರಿನ ಸಾಹಿತಿ ಮತ್ತು ಚಿತ್ರ ಕಲಾವಿದರಾದ ಜಬೀವುಲ್ಲಾ ಎಂ. ಅಸದ್ ಅವರಿಗೆ ಅಕ್ಷರ ದೀಪ ಫೌಂಡೇಶನ್ ಗದಗ ಹಾಗೂ ಸರ್ವ ಗಜಲ್ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ: 06/09/2026 ರಂದು ಧಾರವಾಡದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ “ರಾಷ್ಟ್ರೀಯ ಗಜಲ್ ಸಿರಿ” ನೀಡಿ ಗೌರವಿಸಲಾಗುವುದು ಎಂದು, ಸರ್ವಧ್ಯಕ್ಷರಾದ ಡಾ. ಶ್ರೀಶೈಲ ಮಾದಣ್ಣವರರು ತಿಳಿಸಿದ್ದಾರೆ.
About The Author
Discover more from JANADHWANI NEWS
Subscribe to get the latest posts sent to your email.