ವರದಿ: ನಾಗತಿಹಳ್ಳಿ ಮಂಜುನಾಥ್
ಹೊಸದುರ್ಗ:ಧರ್ಮ ಎಂದರೆ ಕೇವಲ ಆಚರಣೆ ಅಲ್ಲ. ಧರ್ಮ ಎಂದರೆ ಮತ್ತೊಬ್ಬರಿಗೆ ಉಪಕಾರ ಮಾಡುವುದು. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಬೆಳೆಸುವುದು ಮತ್ತು ಉತ್ತಮ ಜೀವನ ನಡೆಸುವುದೇ ನಿಜವಾದ ಧರ್ಮವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ತಾಲೂಕಿನ ದೇವಪುರ ಗ್ರಾಮದಲ್ಲಿ ಬುಧುವಾರ ಕೆ.ಎಸ್.ಕಲ್ಮಠ್ ಅವರ ನೇತೃತ್ವದಲ್ಲಿ ಜರುಗಿದ ಜನಜಾಗೃತಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.
ಜೀವ ಮತ್ತು ಶಿವನ ಆಧ್ಯಾತ್ಮಿಕ ಸಂಬAಧವನ್ನು ಅರಿತು ಶಿವನ ಸಾಕ್ಷಾತ್ಕಾರದ ಕಡೆಗೆ ಸಾಗುವುದು ವೀರಶೈವ ಧರ್ಮ ಸಾಧನೆಯ ಗುರಿಯಾಗಿದೆ. ವೀರಶೈವ ಪರಂಪರೆಯಲ್ಲಿ ಇಷ್ಟಲಿಂಗವು ಶಿವನ ನಿರಂತರ ಸ್ಮರಣೆಯ ಸಂಕೇತವಾಗಿದೆ. ಇಷ್ಟಲಿಂಗ ಪೂಜೆ ಕೇವಲ ಪೂಜಾ ವಿಧಿಯಲ್ಲ. ಅದು ನಮ್ಮ ಮನಸ್ಸನ್ನು ಶುದ್ಧಗೊಳಿಸುವ ಸತ್ಯ ನೀತಿ ಸದಾಚಾರದ ಮಾರ್ಗದಲ್ಲಿ ನಡೆಯುವ ಸಂಕಲ್ಪವಾಗಿದೆ. ಧರ್ಮದ ಮೌಲ್ಯಗಳನ್ನು ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ದೇವಪುರ ಗ್ರಾಮಸ್ಥರು ಒಗ್ಗಟ್ಟಿನಿಂದ ಧರ್ಮ ಕಾರ್ಯ ಹಮ್ಮಿಕೊಂಡಿರುವುದು ಯುವ ಜನಾಂಗಕ್ಕೆ ಹೊಸ ಸ್ಫೂರ್ತಿ ಮತ್ತು ಸ್ವಾಭಿಮಾನವನ್ನು ಹೆಚ್ಚಿಸಿದೆ ಎಂದರು.
ಧರ್ಮ ಸಮಾರಂಭ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೆ.ಎಸ್ ನವೀನ್ ಭಾರತೀಯ ಉತ್ಕೃಷ್ಟ ಸಂಸ್ಕೃತಿ ಮತ್ತು ಪರಂಪರೆ ಬಹು ದೊಡ್ಡ ಶಕ್ತಿ. ಅವುಗಳನ್ನು ಪರಿಪಾಲಿಸಿಕೊಂಡು ಬಾಳುವುದು ಜೀವನದ ಶ್ರೇಯಸ್ಸಿಗೆ ಕಾರಣವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ವೀರಶೈವ ಸಮಾಜದ ಉಪಾಧ್ಯಕ್ಷ ಎಂ.ಶಿವಲಿAಗಪ್ಪ, ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಆರ್.ಹನುಮಂತಪ್ಪ, ಡಾ:ಕೆ.ಅನಂತ್, ಜಿ.ಟಿ.ಅಜ್ಜಪ್ಪ, ದ್ಯಾಮಣ್ಣ,ಮಾವಿನಕಟ್ಟಿಡಿ. ಗುರುಸ್ವಾಮಿ, ಹೆಚ್.ಸಿ.ಮಲ್ಲಿಕಾರ್ಜುನ್ ಕೋಡಿಹಳ್ಳಿ ತಮ್ಮಣ್ಣ ಪಾಲ್ಗೊಂಡು ಗುರುರಕ್ಷೆ ಪಡೆದರು.
ಕೆ.ಎಸ್. ಕಲ್ಮಠ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯ ಸ್ವಾಮಿಗಳು ಮತ್ತು ಹಣ್ಣೆಮಠದ ಮರುಳಸಿದ್ಧ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಉಪದೇಶಾಮೃತವನ್ನಿತ್ತರು. ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಕುಲ ಸಾಧಕರಿಂದ ವೇದಘೋಷ, ಚನ್ನಗಿರಿ ಹಿರೇಮಠದ ಕೇದಾರ ಶಿವಶಾಂತವೀರ ಶಿವಾಚಾರ್ಯ ಸ್ವಾಮಿಗಳಿಂದ ಪ್ರಾರ್ಥನಾ ಗೀತೆ ಜರುಗಿತು. ನಾಗಲಾಂಬಿಕೆ ಕಲ್ಮಠ ಭಕ್ತಿಗೀತೆ ಹಾಡಿದರು.
ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ಜರುಗಿತು. ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಜಗದ್ಗುರುಗಳವರ ದರ್ಶನಾಶೀರ್ವಾದ ಪಡೆದರು. ಸಮಾರಂಭದ ನಂತರ ಅನ್ನ ದಾಸೋಹ ನೆರವೇರಿತು.
ಬಾಕ್ಸ್ ಐಟಂ
ಮಳೆಯಿಲ್ಲದೇ ಬಳಲುತ್ತಿರುವ ಈ ಭಾಗದಲ್ಲಿ ಜಗದ್ಗುರುಗಳ ಶುಭಾಗಮನದಿಂದ ಮಳೆ ಪ್ರಾರಂಭವಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಕಾಲ ಕಾಲಕ್ಕೆ ಆಗಮಿಸಿ ನಮ್ಮೆಲ್ಲರಿಗೆ ಆಶೀರ್ವಾದ ಕರುಣಿಸಬೇಕು. ಕೆ.ಎಸ್. ಕಲ್ಮಠ್,ಕಾರ್ಯದರ್ಶಿ ಎಸ್.ನಿಜಲಿಂಗಪ್ಪ,ವಿದ್ಯಾ ಸಂಸ್ಧೆ ಹೊಸದುರ್ಗ ಬಾಕ್ಸ್ ಐಟಂ


ಅದ್ಬುತವಾದ ಶಕ್ತಿ ಹೊಂದಿರುವ ಬಾಳೆಹೊನ್ನೂರು ಇಡೀ ರಾಜ್ಯದಲ್ಲಿ ಧಾರ್ಮಿಕ ಸಾಮಾಜಿಕ, ರಾಜಕೀಯ ಕ್ಷೇತ್ರ ಯಾವುದೇ ಕ್ಷೇತ್ರವಾದರೂ ಸರಿ ಜಗದ್ಗುರು ಸನ್ನಿಧಿಯವರ ವಾಣಿ ದರ್ಶನ,ಮಾರ್ಗದರ್ಶನ ಸನಾತನ ಧರ್ಮ ಪಂಚಪೀಠಗಳ ಉದಯದಿಂದ ಹಿಡಿದು ಇವತ್ತಿನವರೆಗೂ ಕೂಡ ಇಂತಹ ಕಲಿಯುಗದಲ್ಲೂ ಕೂಡ ಅವರ ಪ್ರಭಾವ ಮತ್ತು ಮಾರ್ಗದರ್ಶನ ಭಾಗ್ಯ ನಮ್ಮಗೆಲ್ಲರಿಗೂ ಸಿಕ್ಕದೆ ಮತ್ತು ಸಿಗುತ್ತಲೇ ಇದೆ ಎಂಬ ಅಶಾ ಭಾವನೆ ಇದೆ.
ಎಸ್.ಲಿಂಗಮೂರ್ತಿ, ಮಾಜಿ ಅಧ್ಯಕ್ಷರು
ಖನಿಜ ನಿಗಮ, ಹೊಸದುರ್ಗ
About The Author
Discover more from JANADHWANI NEWS
Subscribe to get the latest posts sent to your email.