November 29, 2026
IMG-20261128-WA0209

ನಾಯಕನಹಟ್ಟಿ:- ಸರ್ಕಾರಿ ಸೌಲಭ್ಯ ಪಡೆಯಲು ಪ್ರಜಾ ಸೇವೆ ಅಭಿಯಾನ ಗ್ರಾಮೀಣ ಪ್ರದೇಶದ ಜನರಿಗೆ ವರದಾನ ವಾಗಿದೆ. ಎಂದು ಚಳ್ಳಕೆರೆ ತಾಹಿಶೀಲ್ದಾರ್ ರೇಹಾನ್ ಪಾಷ ಹೇಳಿದರು.

ಶನಿವಾರ ನಾಯಕನಹಟ್ಟಿ ಹೋಬಳಿಯ ತಿಮ್ಮಪ್ಪಯ್ಯನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಆಡಳಿತ ಚಳ್ಳಕೆರೆ ಬಾಗಿಲಿಗೆ ಬರಲಿದೆ ಸರಕಾರ ಸೇವೆಗೆ ಇರಲಿ ಸಹಕಾರ ಪ್ರಜಾ ಸೇವೆ ಕಾರ್ಯಕ್ರಮಕ್ಕೆ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು . ಚಳ್ಳಕೆರೆ ತಾಲ್ಲೂಕಿನ ಪ್ರಜಾ ಸೇವಾ ಅಭಿಯಾನ ಕಾರ್ಯಕ್ರಮ ತುಂಬಾ ಯಶಸ್ವಿಯಾಗಿ ನಡೆದಿದೆ ಈ ದಿನ ಗ್ರಾಮ ಮಟ್ಟದಲ್ಲಿ ಪ್ರಜಾ ಸೇವಾ ಅಭಿಯಾನ ಗ್ರಾಮೀಣ ಪ್ರದೇಶದ ಬಡ ಜನರಿಗೆ ತುಂಬಾ ಉತ್ತಮವಾದ ಈ ಒಂದು ಪ್ರಜಾ ಸೇವಾ ಅಭಿಯಾನ ಪ್ರತಿಯೊಬ್ಬರು ತಮ್ಮ ಗ್ರಾಮದಲ್ಲಿ ಇರುವ ಸಮಸ್ಯೆಗಳನ್ನು ತಾಲೂಕಿನ ಅಧಿಕಾರಿಗಳು ಗ್ರಾಮಕ್ಕೆ ಬಂದಿದ್ದಾರೆ ನಿಮ್ಮ ಮನವಿಯನ್ನ ಅವರಿಗೆ ನೀಡಿದರೆ ಸ್ಥಳದಲ್ಲಿ ಪರಿಹಾರವನ್ನು ಕಾನೂನಾತ್ಮಕವಾಗಿ ಪರಿಹರಿಸಲಾಗುವುದು ಎಂದರು.
ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಾಲರಾಜ್ ಮಾತನಾಡಿದರು ರಾಜ್ಯ ಸರ್ಕಾರ 5 ಪಂಚ ಗ್ಯಾರೆಂಟಿ ಯೋಜನೆಗಳ ಮೂಲಕ ಬಡಜನರ ನೆರವಿಗೆ ನಿಂತಿದೆ ಜಿಲ್ಲಾ ತಾಲೂಕು ಹೋಬಳಿ ಗ್ರಾಮ ಮಟ್ಟದಲ್ಲಿ ಸಹ ಈ ಪ್ರಜಾ ಸೇವಾ ಅಭಿಯಾನ ಹಮ್ಮಿಕೊಂಡಿದ್ದು ಗ್ರಾಮದ ಪ್ರತಿಯೊಬ್ಬರು ವೃದ್ಧಾಪಿವೇತನ ವಿಧವಾ ವೇತನ ವಿಕಲಚೇತನರಿಗೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದರು.

ಇನ್ನು ಕಾರ್ಯಕ್ರಮದಲ್ಲಿ ಇಲಾಖಾವಾರು ಅರ್ಜಿಯನ್ನು ಸ್ವೀಕರಿಸಲಾಯಿತು

ಪಶುಸಂಗೋಪನೆ ಇಲಾಖೆ 06, ಶಿಶು ಅಭಿವೃದ್ಧಿ ಇಲಾಖೆ 02, ಸಾರಿಗೆ ಇಳಾಖೆ 04, ಪಿ.ಡಬ್ಲೂ. ಡಿ ಇಲಾಖೆ 01, ಬೆಸ್ಕಾಂ ಇಲಾಖೆ 02, ಆಹಾರ ಇಲಾಖೆ 02, ತಾಲ್ಲೂಕು ಪಂಚಾಯಿತಿ 37, ಕಂದಾಯ ಇಲಾಖೆ 35, ಸಮಾಜ ಕಲ್ಯಾಣ ಇಲಾಖೆ 01, ಒಟ್ಟು 90 ಅರ್ಜಿಗಳನ್ನು ಸ್ವೀಕರಿಸಲಾಯಿತು
ಚಳ್ಳಕೆರೆ ತಾಲ್ಲೂಕು ಯೋಜನಧಿಕಾರಿ ಚಂದ್ರಮ್ಮ, ಸರ್ವ ಇಲಾಖೆ ಬಾಬುರೆಡ್ಡಿ, ಗಜ್ಜುಗಾನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ತಿಪ್ಪೇಸ್ವಾಮಿ, ಗ್ರೇಡ್-2 ತಾಹಿಶೀಲ್ದಾರು ಮಂಜಾನಂದ, ತಳಕು ಉಪ ತಹಶಿಲ್ದಾರ ರಫೀಕ್, ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಎಸ್ ಸುರೇಶ್, ನಾಯಕನಹಟ್ಟಿ ಉಪ ತಹಿಶೀಲ್ದಾರು ಅಸೀನಾ ಬಾನು, ರಾಜಸ್ಚ ನಿರೀಕ್ಷ ಚೇತನ ಕುಮಾರ್, ತಾಲ್ಲೂಕು ವೈದ್ಯಾಧಿಕಾರಿ. ಡಾ. ಕಾಶಿ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ವಿ. ಕರಿಯಣ್ಣ, ಗ್ರಾಮದ ಮುಖಂಡ ಬಿ.ಎಸ್. ಪ್ರಕಾಶ್ , ಪಿಡಿಒ ವೆಂಕಟೇಶ್ ,ಸೇರಿದಂತೆ ಸಮಸ್ತ ಊರಿನ ಗ್ರಾಮಸ್ಥರು ಅಧಿಕಾರಿಗಳು ಇದ್ದರು

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading