ನಾಯಕನಹಟ್ಟಿ:- ಕೀರ್ತನೆಗಳ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಮುನ್ನುಡಿ ಬರೆದವರು ಕನಕದಾಸರು ಸಮಾಜಕ್ಕೆ ಅವರ ಕೊಡುಗೆ ಅಪಾರ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಟಿ ಮಂಜುಳಾ ಶ್ರೀಕಾಂತ್. ಕರೆ ನೀಡಿದರು.
ಶುಕ್ರವಾರ ಪಟ್ಟಣದ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಂತ ಶ್ರೇಷ್ಠ ಕನಕ ದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಹಾಗೂ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಸಂತ ಶ್ರೇಷ್ಠ ಭಕ್ತ ಕನಕದಾಸರು ಚಿಂತನೆಗಳು ಪ್ರಸ್ತುತ ನೈತಿಕ ಬದುಕಿನ ಕುರಿತು ನೀಡಿರುವ ಅವರ ಸಂದೇಶ ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಪ್ರತಿಯೊಬ್ಬರೂ ಅವರ ತತ್ವ ಆದರ್ಶಗಳನ್ನ ಮೈಗೂಡಿಸಿಕೊಂಡು ಸಮ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.
ಪಟ್ಟಣ ಪಂಚಾಯತಿ ಉಪಾಧ್ಯಕ್ಷೆ ಟಿ. ಮಹೇಶ್ವರಿ ಕೆ.ಓ. ರಾಜಯ್ಯ, ಮಾತನಾಡಿದರು. ಕನಕದಾಸರು ಕೀರ್ತನೆಗಳ ಮೂಲಕ ಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆ ಏನಾದರೂ ಬಲ್ಲಿರಾ ಎಂಬ ವಾಣಿಯನ್ನು ನಾಡಿಗೆ ಸಾರಿದ್ದಾರೆ ಕನಕದಾಸರು ನಾಡು ಕಂಡ ದಾಸ ಶ್ರೇಷ್ಠರಾಗಿದ್ದಾರೆ ಎಂದರು.
ಸದಸ್ಯೆ ಸರ್ವಮಂಗಳ ಎಸ್. ಉಮಾಪತಿ ಮಾತನಾಡಿದರು. 15ನೇ ಶತಮಾನದಲ್ಲಿನ ಜಾತಿ ವ್ಯವಸ್ಥೆ ಕಂದಾಚಾರ ಮೌಡ್ಯ ತೊಲಗಿಸಲು ದಾಸ ಸಾಹಿತ್ಯದ ಪ್ರಮುಖ ಪಾತ್ರ ವಹಿಸಿದ್ದವು ಕನಕದಾಸರ ಭಕ್ತಿ ನಿಷ್ಠೆ ಸಾಮಾಜಿಕ ಸೇವೆ ಇಂದಿನ ಯುವ ಸಂವಹಕ್ಕೆ ಆದರ್ಶವಾಗಬೇಕು ಮಹನೀಯರು ಜಾತಿಗೆ ಸೀಮಿತವಾಗಬಾರದು ಅವರ ಜೀವನ ಚರಿತ್ರೆಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದರು.
ಈ ಸಮಯದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಸುನಿತಾ ಜಿ.ಬಿ ಮುದಿಯಪ್ಪ, ನಾಮ ನಿರ್ದೇಶನ ಸದಸ್ಯೆ ಮಹಾಂತಮ್ಮ ಕಾಳಪ್ಪ,
ಪಟ್ಟಣ ಪಂಚಾಯತಿ ದ್ವಿತೀಯ ದರ್ಜೆ ಸಹಾಯಕ ಟಿ. ತಿಪ್ಪೇಸ್ವಾಮಿ ಆರೋಗ್ಯ ನಿರೀಕ್ಷಣಾಧಿಕಾರಿ ತಿಪ್ಪೇಶ್, ದಯಾನಂದ್, ಸೇರಿದಂತೆ ಸಿಬ್ಬಂದಿಗಳು ಪೌರಕಾರ್ಮಿಕರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.
