ಹೊಸದುರ್ಗ: 2025-26 ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಪಡೆದ ಚಿತ್ರದುರ್ಗ ಮತ್ತು ದಾವಣಗೆರೆ ಉಭಯ ಜಿಲ್ಲೆಗಳ ಮಡಿವಾಳ ಸಮುದಾಯದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನಿಸಲಾಗಿದೆ ಎಂದು ರಾಜ್ಯ ಶ್ರೀ ವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆಯ ಕಾರ್ಯಧ್ಯಕ್ಷ ನಾಗತಿಹಳ್ಳಿಮಂಜುನಾಥ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೇ ತಿಂಗಳಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು. ಆಸಕ್ತರು ನಾಗತಿಹಳ್ಳಿಮಂಜುನಾಥ್, ಕಾರ್ಯಾಧ್ಯಕ್ಷರು, ರಾಜ್ಯ ಶ್ರೀ ವೀರ ಮಡಿವಾಳ ಮಾಚಿದೇವ ಯುವ ಸೇನಾ ಪಡೆ, ಹೊಸದುರ್ಗ ಇವರಿಗೆ ಸ್ವ-ವಿವರವಿರುವ ಅರ್ಜಿಯೊಂದಿಗೆ ಒಂದು ಭಾವಚಿತ, ಅಂಕಪಟ್ಟಿಯ ನಕಲು ಮತ್ತು ಅಧಾರ ಕಾರ್ಡ್ ನಕಲನ್ನು ಲಗತ್ತಿಸಿ ಕಳುಹಿಸಬೇಕು, ಮೇ 5 ರೊಳಗೆ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಎಸ್.ಲಕ್ಷ್ಮೀಸಾಗರ್ (ಅಧ್ಯಕ್ಷರು) 8088625277 ನಾಗತಿಹಳ್ಳಿಮಂಜುನಾಥ್, 9986994558 ಚಿದಾನಂದ (ಕಾರ್ಯದರ್ಶಿ) 7259956998 ಇವರುಗಳನ್ನ ಸಂಪರ್ಕಿಸಬಹುದಾಗಿದೆ.
About The Author
Discover more from JANADHWANI NEWS
Subscribe to get the latest posts sent to your email.