ನಾಯಕನಹಟ್ಟಿ :ಪಟ್ಟಣದ ಶ್ರೀ ತಿಪ್ಪೇರುದ್ರಸ್ವಾಮಿ ಗ್ರಾಮೀಣ ವಿದ್ಯಾಸಂಸ್ಥೆಯ ಶಾಲೆಯಲ್ಲಿ ಹಮ್ಮಿಕೊಂಡಿದ್ದ
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿಯಮಿತ ಬೆಂಗಳೂರು, ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಚಿತ್ರದುರ್ಗ ಇವರ ಸಂಯುಕ್ತ ಆಶ್ರಯದಲ್ಲಿ ಚಳ್ಳಕೆರೆ ಮತ್ತು ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ಬರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಮತ್ತು ನಿರ್ದೇಶಕರುಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಆರ್. ಮಲ್ಲೇಶಪ್ಪ ಉದ್ಘಾಟಿಸಿದರು.


ನಂತರ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ಜೆ.ಆರ್ ರವಿಕುಮಾರ್ ಮಾತನಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರು ಮತ್ತು ಆಡಳಿತ ಮಂಡಳಿಯ ಸದಸ್ಯರಿಗಾಗಿ ಸರ್ಕಾರ ಹಾಗೂ ಸಹಕಾರ ಇಲಾಖೆಯು ನಿಯಮಿತವಾಗಿ ಒಂದು ದಿನದ ಕಾರ್ಯಗಾರ ಹಾಗೂ ತರಬೇತಿ ಶಿಬಿರಗಳನ್ನು ಆಯೋಜಿಸುತ್ತಿದೆ. ಸಂಘಗಳ ಪಾರದರ್ಶಕತೆ, ಆಡಳಿತ ನಿರ್ವಹಣೆ, ಲೆಕ್ಕಪತ್ರ ನಿರ್ವಹಣೆ ಮತ್ತು ಸಾಲ ಮರುಪಾವತಿ ಬಗ್ಗೆ ನಿರ್ದೇಶಕರಿಗೆ ಅರಿವು ಮೂಡಿಸುವುದು ಇದರ ಉದ್ದೇಶ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೂತನ ಕೃಷಿ ಯೋಜನೆಗಳು, ಶೂನ್ಯ ಬಡ್ಡಿದರ ಸಾಲ ವಿತರಣೆ ಮತ್ತು ಬೆಳೆ ವಿಮೆ ಬಗ್ಗೆ ಜಾಗೃತಿ ಮೂಡಿಸುವುದು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕೇವಲ ಸಾಲ ನೀಡುವುದಷ್ಟೇ ಅಲ್ಲದೆ ಗೋಧಾಮ ನಿರ್ಮಾಣ, ಡೈರಿ, ಮೀನುಗಾರಿಕೆ ಮತ್ತು ಇತರೆ ಬಹು ಸೇವೆಗಳನ್ನು ಒದಗಿಸುವಂತ ಸಂಘಗಳನ್ನು ಬಲಪಡಿಸುತ್ತವೆ. ಪತ್ತಿನ ಸಹಕಾರ ಸಂಘಗಳನ್ನು ಡಿಜಿಟಲ್ ಪ್ಲಾಟ್ಫಾರ್ಮ್ ಗೆ ಅಳವಡಿಸಲು ಮತ್ತು ರೈತರಿಗೆ , ಕಂಪ್ಯೂಟರಿಕೃತ ಸೇವೆ ಒದಗಿಸಲು ನಿರ್ದೇಶಕರಿಗೆ ಈ ತರಬೇತಿ ಅತಿ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಲಗೇತನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಟೇಲ್ ಜಿ.ಎಂ ತಿಪ್ಪೇಸ್ವಾಮಿ (ಎತ್ತಿನಹಟ್ಟಿ ಗೌಡ್ರು), ಗಜ್ಜುಗಾನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ತಿಪ್ಪೇಸ್ವಾಮಿ (ಕೋಟೆಪ್ಪ)
ಎ. ಚನ್ನಬಸಪ್ಪ, ಮಂಜಮ್ಮ, ಜಿ.ಈ. ಅಜ್ಜಪ್ಪ, ಪಿ. ವಿನೋದ ಸ್ವಾಮಿ, ಅತಿಥಿ ಉಪನ್ಯಾಸಕ ಎಸ್ ವಿ ಬಸವರಾಜ್, ಸಹಕಾರ ಅಭಿವೃದ್ಧಿ ಅಧಿಕಾರಿ ಕೆ ಮಹೇಶ್, ಜಿ.ಕೆ. ನವೀನ್, ಟಿ. ಭರತ್, ಹಂಪರೆಡ್ಡಿ ಇನ್ನು ಮುಂತಾದವರು ಇದ್ದರು.
About The Author
Discover more from JANADHWANI NEWS
Subscribe to get the latest posts sent to your email.