August 26, 2026
IMG-20260826-WA0575

ಮೊಳಕಾಲ್ಮೂರು – ಜಾನಪದ ಕಲೆಯನ್ನು ಯುವ ಪೀಳಿಗೆಗೆ ಪರಿಚಯಿಸುವುದು ಅತ್ಯವಶ್ಯಕ ಎಂದು ಶಿಕ್ಷಕ ಚಂದ್ರಯ್ಯ ತಿಳಿಸಿದರು
ಮಾಯಾವತಿ ಮಹಿಳಾ ಸಾಂಸ್ಕೃತಿಕ ಸಂಘದ ವತಿಯಿಂದ ತಾಲ್ಲೂಕಿನ ಚಿಕ್ಕೋಬನಹಳ್ಳಿ ಗ್ರಾಮದ ಶ್ರೀ ಘಟ್ಟಪ್ಪ ನಾಯಕ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡ ಜಾನಪದ ಸಂಗೀತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು
ಜಾನಪದ ಕಲೆ ಗ್ರಾಮೀಣ ಜನರ ಅವಿಭಾಜ್ಯ ಅಂಗವಾಗಿದೆ ಟಿ.ವಿ. ಸಿನಿಮಾಗಳು ಹಾವಳಿಯಿಂದ ಜಾನಪದ ಕಲೆ ನಶಿಸಿ ಹೋಗುತ್ತಿರುವ ಸಂದರ್ಭದಲ್ಲಿ ಮಾಯಾವತಿ ಮಹಿಳಾ ಸಾಂಸ್ಕೃತಿಕ ಸಂಘ ಹಿರಿಯ ಕಲಾವಿದರ ಮೂಲಕ ವಿದ್ಯಾರ್ಥಿಗಳಿಗೆ ಸೋಬಾನೆ ಪದಗಳ ಗಾಯನವನ್ನು ಪ್ರಸ್ತುತ ಪಡಿಸಿ ಸ್ಥಳೀಯ ಸಂಪ್ರದಾಯ ಪದಗಳ ಪ್ರಾತ್ಯಕ್ಷತೆಯನ್ನು ಹಮ್ಮಿಕೊಂಡಿರುವುದು ಅಭಿನಂದನೀಯ ಕಾರ್ಯವಾಗಿದೆ ಎಂದರು.
ಹಿರಿಯ ಕಲಾವಿದೆಯರಾದ ಗೌರಮ್ಮ, ಮಾರಕ್ಕ, ಬಸಕ್ಕ, ನಿಂಗಮ್ಮ ಮತ್ತು ತಂಡದಿಂದ ಸೋಬಾನೆ ಪದಗಳನ್ನು ಪ್ರಸ್ತುತ ಪಡಿಸಿದರು.
ಶಿಕ್ಷಕರಾದ ಬಿ. ರಾಧಾ ಕೃಷ್ಣಮೂರ್ತಿ, ಜಯಲಕ್ಷ್ಮಿ ಉಪಸ್ಥಿತರಿದ್ದರು.

About The Author


Discover more from JANADHWANI NEWS

Subscribe to get the latest posts sent to your email.

Leave a Reply

Discover more from JANADHWANI NEWS

Subscribe now to keep reading and get access to the full archive.

Continue reading